ನಿನ್ನಾತ್ಮವ ಸ್ಪರ್ಶಿಸದಂತೆ ಹೇಗೆ ತಡೆಹಿಡಿದಿಡಲಿ ನನ್ನಾತ್ಮವನ್ನು?
ಮೀರಿ ನಿನ್ನನ್ನು, ಬೇರೆಲ್ಲದರೆಡೆಗೆ ಹೇಗೆ ಎತ್ತರಿಸಲಿ ಅದನ್ನು?
ಕಾಪಿಡ ಬಯಸುತ್ತೇನೆ ಅದ ಯಾವುದೋ ಕತ್ತಲಿನ ನಿಶ್ಯಬ್ದ ಲೋಕದೊಳಗೆ,
ಎಲ್ಲೋ ಹುದುಗಿಹೋದ ಕ್ಷೀಣ ನೆನಪುಗಳೊಳಗೆ
ನಿನ್ನ ಆಳದ ಕರೆಗೆ ಮಿಡಿಯದಿರಲೆಂದು..
ಆದರೂ ಎಲ್ಲವೂ ಮತ್ತೊಮ್ಮೆ ಸ್ಪರ್ಶಿಸುತ್ತವೆ ನಮ್ಮನ್ನು, ನನ್ನನ್ನು..ನಿನ್ನನ್ನು..
ಎರಡು ತಂತಿಗಳಿಂದ ಒಂದೇ ನಾದ ಹೊರಡಿಸುವ ಕಮಾನಿನಂತೆ..
ಹೇಳು..ಯಾವ ವೀಣೆಯ ಮೇಲೆ ಹರಡಿಕೊಂಡಿರುವೆವು?
ಯಾವ ವೈಣಿಕನ ಬೆರಳು ಮಿಡಿಯುವ ತಂತಿಗಳು ನಾವು?
ಓ ಮಧುರ ಗೀತೆಯೇ…

ರೈನರ್ ಮರಿಯಾ ರಿಲ್ಕನ ಮೂಲ ಕವಿತೆಯ ಇಂಗ್ಲಿಷ್ ಅನುವಾದ ಇಲ್ಲಿದೆ ನೋಡಿ

 

ಬೆಂಗಳೂರಿನ ಕವಯತ್ರಿ ವಿದ್ಯಾ ಸತೀಶ್ ಅನುವಾದಕಿಯೂ ಹೌದು.
ವಿದ್ಯಾ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇವರ ಲೇಖನಗಳು ಮತ್ತು ಕವಿತೆಗಳು ಕನ್ನಡದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)