ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ. ಒಟ್ಟೂ ಒಂಬತ್ತು ಕಥೆಗಳನ್ನು ಹೊಂದಿರುವ ಸಂಕಲನದ ಕಥೆಗಳನ್ನು ಒಮ್ಮೆ ಓದಲು ಪ್ರಾರಂಭಿಸಿದರೆ ಎಲ್ಲಿಯೂ ಮಧ್ಯದಲ್ಲಿ ಬಿಟ್ಟು ಎದ್ದು ಹೋಗುವಂತಿಲ್ಲ.
ವಿ.ಆರ್. ಕಾರ್ಪೆಂಟರ್ ಅವರ ಹೊಸ ಕಥಾ ಸಂಕಲನ “ಬ್ರಾಹ್ಮಿನ್ ಕೆಫೆ” ಕುರಿತು ಶ್ರೀದೇವಿ ಕೆರೆಮನೆ ಬರಹ

 

ಹಿಂದೆಂದೋ ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದ ಜೋಡಿಯೊಂದು ಮತ್ತೆ ಕೀ ಚೈನ್ ಪಾರ್ಟಿಯ ನೆಪದಲ್ಲಿ ಜೊತೆಯಾಗುವ ಮೊದಲ ಕಥೆಯೇ ಎಲ್ಲಿಲ್ಲದ ನಡುಕ ಹುಟ್ಟಿಸಿ, ಹೀಗೂ ಇರುತ್ತಾ ಎಂಬ ಆತಂಕ, ಒಂದುರೀತಿ ಕುತೂಹಲ ಮಿಶ್ರಿತ ಭಯದಲ್ಲಿ ಮೊಬೈಲ್ ಮುಚ್ಚಿಟ್ಟವಳು ಒಂದು ಇಡೀ ದಿನ ಆ ಕಥೆಗಳನ್ನು ಓದಲು ಹೋಗಲಿಲ್ಲ.

ನಾನು ಯಾವತ್ತೂ ಹೇಳುವ ಹಾಗೆ ವಿಕ್ಷಿಪ್ತ ಬರಹಗಾರರ ಒಂದು ಬಳಗವೇ ನನ್ನ ಸುತ್ತ ಇದೆ. ಅದರಲ್ಲಿ ವಿ ಆರ್ ಕಾರ್ಪೆಂಟರ್ ಹೆಸರು ಮೊದಲನೆಯದ್ದು. ಕವನವೇ ಇರಲಿ, ಕಾದಂಬರಿಯೇ ಇರಲಿ ಅದರಲ್ಲೊಂದು ವಿಚಿತ್ರ ಉನ್ಮಾದವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ ಎನ್ನುವುದಷ್ಟೇ ಅಲ್ಲ ಓದುಗನ ಮನಸ್ಸಿನಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿ ಬಿಡುತ್ತದೆ. ಹೀಗಾಗಿ ನನಗೆ ಅರಿವಿರದ ಹೊಸ ಪ್ರಪಂಚವೊಂದರ ಬಾಗಿಲು ತಟ್ಟುತ್ತಿದ್ದೇನೆ ಎಂಬ ತಲ್ಲಣದಲ್ಲಿಯೇ ನಾನು ಈ ಕಥೆಗಳನ್ನು ಓದಲು ಪ್ರಾರಂಭಿಸಿದ್ದು.

(ವಿ.ಆರ್. ಕಾರ್ಪೆಂಟರ್)

ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ. ಒಟ್ಟೂ ಒಂಬತ್ತು ಕಥೆಗಳನ್ನು ಹೊಂದಿರುವ ಈ ಸಂಕಲನದ ಕಥೆಗಳನ್ನು ಒಮ್ಮೆ ಓದಲು ಪ್ರಾರಂಭಿಸಿದರೆ ಎಲ್ಲಿಯೂ ಮಧ್ಯದಲ್ಲಿ ಬಿಟ್ಟು ಎದ್ದು ಹೋಗುವಂತಿಲ್ಲ.

ಅದರಲ್ಲಿಯೂ ಮೊದಲ ಕಥೆಯಂತೂ ಇಡೀ ಸಂಕಲನದ ಹೈಲೈಟ್. ನವಿರಾದ ಪ್ರೇಮಿಗಳವರು. ಆತ ಹೋರಾಟದ ಬದುಕಿನಲ್ಲಿ ನಂಬಿಕೆ ಇರುವಾತ. ಈಕೆ ಮುಟ್ಟಿದರೂ ನಲುಗಿ ಹೋಗುವವಳು. ಶತ ಒರಟನನ್ನು ಸಹಿಸಲಾಗದೇ ಅವಳು ಅವನನ್ನು ದೂರ ಮಾಡಿಕೊಂಡರೂ ಅವನದ್ದೇ ಕನಸು. ಆದರೆ ಅವರಿಬ್ಬರೂ ಕೀ ಚೈನ್ ಪಾರ್ಟಿಯ ಮುಖಾಂತರ ಸೇರಿದ್ದು ಒಂದು ರೀತಿ ಅಜಾನಕ್ ತಿರುವು. ಹಾಗೇಯೇ ಓದುಗನಿಗೆ ಒಂದು ದೊಡ್ಡ ಶಾಕ್ ನೀಡುವಲ್ಲೂ ಅದು ಯಶಸ್ವಿಯಾಗುತ್ತದೆ.

ಪ್ರವಾಸಿಗರು ಬಂದು ತಾವೇ ಅಡುಗೆ ಮಾಡಿಕೊಂಡು ಊಟ ಮಾಡಿ ಒಂದಿಷ್ಟು ಹಣ ನೀಡಿ ಹೋಗುವ ಈರಣ್ಣ ಮತ್ತವನ ಮಗ ಮಹೇಶನ ಹೊಟೆಲು ಹೆಸರೂ ಇಲ್ಲದೇ ಪ್ರಸಿದ್ಧವಾಗಿದ್ದು, ಆದರೆ ಪ್ರವಾಸಿಗರ ಒತ್ತಾಯಕ್ಕೆ ಓದಲು ಬರದೇ ಒಂದು ಹೆಸರು ತಂದು ನೇತು ಹಾಕಿದ್ದಲ್ಲದೆ ಅಲ್ಲಿಗೆ ಬಂದ ಹುಡುಗರ ಗುಂಪೊಂದು ಬೀಪ್ ಅಡುಗೆ ಮಾಡಿ, ಅದನ್ನು ಫೇಸ್ ಬುಕ್ ಲೈವ್ ನಲ್ಲಿ ಹಾಕಿ, ಹೊಟೇಲ್ ನ ಬೋರ್ಡ್ ತೋರಿಸಿದ ನಂತರ ಬಂದ ಗುಂಪೊಂದು ಬ್ರಾಹ್ಮಣ ಕೆಫೆ ಎಂಬ ಹೆಸರಿನ ಆ ಪುಟ್ಟ ಗೂಡನ್ನು ಸುಟ್ಟು ಹಾಕಿದ ಕಥೆಯು ಮನಸೆಳೆಯುವಂತಿದೆ.

ಕವನವೇ ಇರಲಿ, ಕಾದಂಬರಿಯೇ ಇರಲಿ ಅದರಲ್ಲೊಂದು ವಿಚಿತ್ರ ಉನ್ಮಾದವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ ಎನ್ನುವುದಷ್ಟೇ ಅಲ್ಲ ಓದುಗನ ಮನಸ್ಸಿನಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿ ಬಿಡುತ್ತದೆ. ಹೀಗಾಗಿ ನನಗೆ ಅರಿವಿರದ ಹೊಸ ಪ್ರಪಂಚವೊಂದರ ಬಾಗಿಲು ತಟ್ಟುತ್ತಿದ್ದೇನೆ ಎಂಬ ತಲ್ಲಣದಲ್ಲಿಯೇ ನಾನು ಈ ಕಥೆಗಳನ್ನು ಓದಲು ಪ್ರಾರಂಭಿಸಿದ್ದು.

‘ಡೆತ್ ನೋಟ್’ ಕತೆ ಸೈನಿಕನೊಬ್ಬನ ಕಡೆಯ ದಿನಗಳಲ್ಲಿ ತಾನು ಸೈನ್ಯದಲ್ಲಿರುವಾಗ ಮಾಡಿದ ಅತ್ಯಾಚಾರದ ಬಗ್ಗೆ ಹೇಳಿ ದುಃಖಪಟ್ಟರೆ, ‘ಖಂಡವಿದಕೊ ಮಾಂಸವಿದಕೋ’ ಕಥೆಯು ಮೇಲ್ವರ್ಗದ ಶಾಂತಕ್ಕ ಜೊತೆ ಹೋದ ಸಾವಂತ್ರಿ ಸಾವಿತ್ರಿಯಾಗಿ ಹೆತ್ತ ಅಮ್ಮನನ್ನೇ ದೂರಿಕರಿಸಿದರೆ ಮ್ಯಾರಿಡ್ ವರ್ಜಿನ್ ಇಬ್ಬರ ಫೇಸ್ ಬುಕ್ ಚಾಟನ್ನು ಹೇಳುತ್ತ ಸಾಮಾಜಿಕ ಜಾಲತಾಣದಲ್ಲಿ ನಾವೆಷ್ಟು ಬೆತ್ತಲಾಗುತ್ತಿದ್ದೇವೆ ಎಂಬುದನ್ನು ಎತ್ತಿ ತೋರಿಸುತ್ತದೆ. ‘ಅಟ್ರಾಸಿಟಿ’ ಕಥೆಯು ಕಾರಣವಲ್ಲದ ಕಾರಣಕ್ಕೆ ರಾಜಕೀಯ ದಾಳವಾಗಿ ಅಟ್ರಾಸಿಟಿಯನ್ನು ಬಳಸುವ ಪರಿಯನ್ನು ತಿಳಿಸುತ್ತದೆ.

ನೋಟ್ ಬಂದಿ ಕಥೆಯು ಜುಬೇದಾ, ಕಲೀಲ ಡಿಸೋಜನ ಸುತ್ತ ತಿರುಗುತ್ತಿದೆ ಅನಿಸಿದರೂ ಕಥೆಯ ಕೊನೆಯು ನೋಟ್ ಬ್ಯಾನ್ ಆಗಿ ಆದ ಅನಾಹುತಗಳ ಬಗ್ಗೆ ತಿಳಿಸುತ್ತದೆ. ಯುದ್ಧ ಮತ್ತು ಶಾಂತಿ ಅನಾವಶ್ಯಕ ಯುದ್ಧದ ಪರಿಣಾಮಗಳನ್ನು ಯುದ್ಧದಿಂದ ಹಿಂದಿರುಗಿದ ಸೈನಿಕನೊಬ್ಬನಿಂದಲೇ ಹೇಳಿಸುತ್ತದೆ. ಯುದ್ಧದ ಘೋರ ಪರಿಣಾಮ ಬೆಚ್ಚಿಬೀಳುವಂತೆ ಮಾಡುತ್ತದೆ. ಒಂದು ಸಂದರ್ಶನ ಕಥೆಯು ತಾನು ಸಂದರ್ಶಿಸಬೇಕಾದ ವ್ಯಕ್ತಿಯ ಕುರಿತಾದ ಪೂರ್ವ ನಿಯೋಜಿತ ಭಾವನೆಗಳನ್ನು ಹೇಳುತ್ತದೆ.

ಒಟ್ಟಿನಲ್ಲಿ ಇಡೀ ಸಂಕಲನವು ವರ್ತಮಾನದ ತಲ್ಲಣಗಳನ್ನು ಸಮರ್ಥವಾಗಿ ಬಿಚ್ಚಿಡುತ್ತದೆ. ಬ್ರಾಹ್ಮಿನ್ ಕೆಫೆ, ನೋಟ್ ಬಂದಿ ಕಥೆಗಳು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದ್ದರೆ ಖಂಡವಿದಕೋ ಮಾಂಸವಿದಕೋ ಹಾಗೂ ಅಟ್ರಾಸಿಟಿ ಕಥೆಗಳು ಸಾಮಾಜಿಕ ಸ್ಥರಗಳನ್ನು ಹೇಳುತ್ತಲೇ ಜನರ ಮನಸ್ಥಿತಿಯನ್ನು ನಿರೂಪಿಸುವ ಕೆಲಸ ಮಾಡುತ್ತವೆ.

ವರ್ಗ ಬೇಧವು ಸಮಾಜದೊಳಗೆ ಬಿಟ್ಟ ಬೇರುಗಳ ಆಳವನ್ನು ಇಲ್ಲಿ ತಿಳಿಯಬಹುದು. ಯುದ್ಧ ಮತ್ತು ಶಾಂತಿ ಹಾಗೂ ಡೆತ್ ನೋಟ್ ಕಥೆಗಳು ಸೈನ್ಯದ ಕುರಿತಾದ, ಸೈನಿಕರ ಕುರಿತಾದ ನಮ್ಮಲ್ಲಿ ಅಡಗಿರುವ ಭಾವನೆಗಳನ್ನು ಬದಲಾಯಿಸುತ್ತದೆ. ಸೈನಿಕರ ಹೆಸರು ಹೇಳಿ ತಮ್ಮ ರಾಜಕೀಯ ಲಾಭ ಪಡೆವ ನಮ್ಮ ನರಿಬುದ್ಧಿಯನ್ನು ತೆರೆದಿಡುತ್ತಲೇ ಅವರನ್ನು ಮಾನವರನ್ನಾಗಷ್ಟೇ ನೋಡಬೇಕಾದ ಅಗತ್ಯತೆಗಳನ್ನು ಒತ್ತಿ ಹೇಳುತ್ತವೆ. ಇತ್ತೀಚೆಗೆ ಸಂದರ್ಶನದ ಹೆಸರಲ್ಲಿ ಮಾಧ್ಯಮಗಳು ತಮಗೆ ಬೇಕಾದವರನ್ನು ಕರೆಸಿ ಅವಮಾನ ಪಡಿಸಲು ಆಡುತ್ತಿರುವ ಗೇಮ್ ಅನ್ನು ನೆನಪಿಸುತ್ತದೆ.