ರೋಹಿತ್ ರಾಮಚಂದ್ರಯ್ಯ ಅನುವಾದಿಸಿದ ಪ್ರಣವ್ ಸಖದೇವ್ ಬರೆದ ಮರಾಠಿ ಕತೆ
“ಆಮೇಲೆ ನನಗೆ ಏನಾಯಿತೋ ಯಾರಿಗೆ ಗೊತ್ತು; ನಾನು ಪಟಕ್ಕನೆ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಅವನ ಐದಾರು ಫೋಟೋ ತೆಗೆದೆ. ರಿಯಾನನು ನನ್ನ ಕಡೆ ನೋಡಿದ. ಅವನ ಉದ್ದನ್ನ ಮುಖ ಶಾಂತವಾಗಿತ್ತು. ನೇರ ಮೂಗಿನ ತುದಿ ನೆನೆದು ಕೆಂಪಾಗಿ ಹೋಗಿತ್ತು. ಆತನ ಕಪ್ಪು ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ.”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಬ್ದುಲ್ ರಶೀದ್ ಬರೆದ ಕಥೆ
“ಈ ರೋಸಿ ಸಿಸ್ಟರ್ ಮತ್ತು ಸುಶೀಲಾ ಟೀಚರ್ ಬಾಡಿಗೆಗಿದ್ದ ಕೋಣೆಗಳ ನಡುವಲ್ಲಿ ಈರಪ್ಪ ಟೈಲರ ಅಂಗಡಿಯಿತ್ತು. ಈರಪ್ಪ ಟೈಲರು ತಮ್ಮ ಸಂಸಾರ ಸಮೇತವಾಗಿ ಒಳಕೋಣೆಯಲ್ಲಿ ವಾಸಿಸುತ್ತಿದ್ದು ಹೊರಗಿನ ಕೋಣೆಯನ್ನು ಟೈಲರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಈ ಈರಪ್ಪ ಟೈಲರ್ ಮಾತು ತುಂಬ ಕಡಿಮೆ ಆಡುತ್ತಿದ್ದರು….”
ಡಾ. ಜ್ಯೋತಿ ಬರೆದ ಈ ಭಾನುವಾರದ ಕಥೆ
“ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ…”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಕ್ಷತಾ ಹುಂಚದಕಟ್ಟೆ ಬರೆದ ಕಥೆ
“ನಾನು ಧಡಕ್ಕನೇ ಎದ್ದು ಕೂತೆ. ಆ ಹುಡುಗ ಅಮ್ಮ ಅವಳು ಎದ್ದಳ್ ಎದ್ದಳ್ ಎಂದು ಕೂಗಿಕೊಳ್ತಾ ಓಡಿದ. ಮೈತುಂಬಾ ಬೆವರು ಹರಿಯುತ್ತಿತ್ತು. ಆ ಹುಡುಗಿ, ಎದ್ದೇಳಾ? ಆ ಕಡೆ ಗುಡ್ಡದಲ್ಲಿ ರಾಶಿ ಮುಳ್ಳು ಹಣ್ಣು ಬಿಟ್ಟಿತ್ತು. ನಿನ್ನ ಕರ್ಕಂಡು ಹೋಗಣಾ ಅಂತ್ಹೇಳಿ ಕಾಯ್ತಾ ಕೂತ್ಕಂಡಿದ್ದ್ ಅಂತ್ಹೇಳಿ ನನ್ನ ಕೈ ಹಿಡಿದು ಎಳೆಯತೊಡಗಿದಳು. ಅಷ್ಟರಲ್ಲಿ ಅಮ್ಮಮ್ಮ ಬಂದ್ಬಿಟ್ಟು ಮೈ ಕೈಯಲ್ಲ ಮುಟ್ಟಿ ಜ್ವರ ಬಿಟ್ಟಿದೆ.
‘ನಾನು ಮೆಚ್ಚಿದ ನನ್ನ ಕಥೆʼಯ..”
ಎಸ್. ನಾಗಶ್ರೀ ಬರೆದ ಕಥೆ ‘ಬೆಳಕ ಹಾದಿ’
“ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು….”
‘ನಾನು ಮೆಚ್ಚಿದ ನನ್ನ ಕಥೆ’: ಅಜಯ್ ವರ್ಮಾ ಅಲ್ಲುರಿ ಬರೆದ ಕಥೆ
“ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು.”
ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ
“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”
“ನಾನು ಮೆಚ್ಚಿದ ನನ್ನ ಕಥೆ” ಕಥಾ ಸರಣಿ ಆರಂಭ
““ನೀನು ಹುಚ್ಚನಂತೆ ಮಾತಾಡಬೇಡ. ನಮ್ಮ ಊರಿನಲ್ಲಿ ಮನುಷ್ಯರು ಮಾತ್ರ ಇದ್ದಾರೆ. ಇಲ್ಲಿ ಯಾವ ಕ್ಷಣಕ್ಕೂ ದೊಂಬಿ, ಗಲಭೆ ನಡೆದಿಲ್ಲ. ಜಾತಿ ಮತ್ಸರದಿಂದ ಹೃದಯಗಳು ಹೊತ್ತಿ ಉರಿದಿಲ್ಲ. ನೀನು ವಿನಾಕಾರಣ ನಮ್ಮಗಳ ಬಾಂಧವ್ಯಕ್ಕೆ ಬೆಂಕಿ ಹಚ್ಚಬೇಡ”
ಸ. ರಘುನಾಥ್ ಹಾಗೂ ಆರ್. ವಿಜಯರಾಘವನ್ ಅವರ ಸಂಪಾದಕತ್ವದಲ್ಲಿ ರೂಪುಗೊಂಡ “ನಾನು ಮೆಚ್ಚಿದ ನನ್ನ ಕಥೆ” ಪುಸ್ತಕ ನಾಲ್ಕು ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಈ ಭಾನುವಾರದಿಂದ ಹದಿನೈದು ದಿನಕ್ಕೊಮ್ಮೆ ಈ ಸಂಪುಟಗಳ ಕಥೆಗಳು…”
ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ಬರೆದ ತೆಲುಗು ಕಥೆ ʼವಾತ್ಸಲ್ಯʼ
““ಈ ಪ್ಲ್ಯಾನ್ ಚೆನ್ನಾಗಿಯೇ ಇದೆ, ಮೊನ್ನೆ ಪ್ಲೇ ಗ್ರೌಂಡಿನಲ್ಲಿ ಪದ್ಮ ಸಿಕ್ಕಿದ್ದಳು, ಅವರ ಮಗಳನ್ನು ಕೂಡ ಇಂಡಿಯಾದಲ್ಲೇ ಬಿಟ್ಟು ಬಂದಿದ್ದಾರಂತೆ. ಅವಳು ಯಾವುದೋ ಕೋರ್ಸ್ ಕೂಡ ಮಾಡಿಕೊಂಡು, ಈಗ ಕೆಲಸಕ್ಕೆ ಟ್ರೈ ಮಾಡುತ್ತಿದ್ದಾಳಂತೆ”, ವೆಂಕಟ್ ಕೊಟ್ಟ ಹಾಲಿನ ಲೋಟ ತೆಗೆದುಕೊಳ್ಳುತ್ತ ಮುಂದುವರಿಸಿ “ಮುಂದಿನ ತಿಂಗಳು ನನಗೆ ಪ್ರಮೋಷನ್ ಬರುವುದಿದೆ, ಈಗ ನಾನು ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸುತ್ತ ನಾನೇ ನಾನೇ ನಿಮಗೆ ಈ ಐಡಿಯಾ ಹೇಳೋಣವೆಂದುಕೊಂಡೆ.”