ಆನಂದ ಭೋವಿ ಬರೆದ ಈ ಭಾನುವಾರದ ಕತೆ
ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು.
ಆನಂದ ಭೋವಿ ಬರೆದ ಈ ಭಾನುವಾರದ ಕತೆ “ದೇವರಿಗೂ ಒಂದು ಟಿಕಿಟು”
ಗಣಿ ಇತಿಹಾಸದ ಪುಸ್ತಕ ಸೇರಿಕೊಂಡ ಮಣಿಯ ಸಿಲಿಕೋಸಿಸ್ ಸಾವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮಣಿ, “ಸ್ವಾಮಿ ಇಲ್ಲೇ ಹುಟ್ಟಿದ್ದು. ಇಲ್ಲೇ ಸಾಯುವುದು. ಆ ಕಾಲದಲ್ಲಿ ನಾವು ಮೈನಿಂಗ್ ಕಾಲೋನಿಗಳನ್ನು ಬಿಟ್ಟು ಹೊರಕ್ಕೆ ಹೋಗ್ತಾ ಇರಲಿಲ್ಲ. ಈಗ ಆಗಲ್ಲವಲ್ಲ. ಕಾಲೋನಿಗಳಲ್ಲಿ ಇರುವವರೆಲ್ಲ ಕನ್ನಡ ಮಾತಾಡ್ತಾರೆ. ಕನ್ನಡ ಕಲಿತುಕೊಂಡಿದ್ದಾರೆ. ಸಾವಿರಾರು ಜನ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಅದೇ ರೀತಿ ಸಾವಿರಾರು ಹೆಣ್ಣುಮಕ್ಕಳು ಗಂಡುಮಕ್ಕಳು ಕೆಜಿಎಫ್‌ನಿಂದ ಬೆಂಗಳೂರಿಗೆ ದಿನನಿತ್ಯ ರೈಲ್‌ಗಳಲ್ಲಿ ಕೆಲಸಕ್ಕೆ ಹೋಗಿಬರ್ತಾರೆ. ಕಾಲ ಬದಲಾಗಿದೆ ಸ್ವಾಮಿ” ಎಂದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್ ಬರೆದ ಕತೆ
ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್ ಬರೆದ ಕತೆ “ಹಾವಾಡಿಗ”
ಫೋಟೋದಲ್ಲಿ ಬಂಧಿಯಾದ ಸೆಲ್ವಂ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಶಿಲಾಸ್ಫೋಟವಾದಾಗ ಬಹುಶಃ ನೀರಿನ ಮಟ್ಟ ಒಮ್ಮೆಲೆ ಮೇಲಕ್ಕೆ ಬಂದು ಮತ್ತೆ ಕೆಳಕ್ಕೆ ಹೋದಾಗ ಮೂವರೂ ಕಳ್ಳರನ್ನು ನೀರಿನ ಅಲೆಗಳು ಸುರಂಗಗಳಲ್ಲಿ ಎಲ್ಲೋ ಆಳಕ್ಕೆ ಎಳೆದುಕೊಂಡು ಹೋಗಿರಬೇಕು. ಆಗ ಅವರ ದೇಹಗಳು ಎಲ್ಲೋ ಆಳದ ಸುರಂಗಗಳಲ್ಲಿ ಇಲ್ಲ ಸ್ಟೋಪ್‌ಗಳಲ್ಲಿ ಶಿಲೆಗಳ ಮಧ್ಯೆ ಸಿಕ್ಕಿಕೊಂಡಿರಬೇಕು ಎಂದು ಊಹಿಸಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ
ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ
ಯಾಕೋ ಅವರ ಮನೆಯ ಕೆಲವು ಆಗುಹೋಗುಗಳಿಗೆ ನಾನು ಸಾಕ್ಷಿಯಾಗಿರುವಂತೆ ನನಗೆ ಅನಿಸಿದ್ದು ಸುಳ್ಳಲ್ಲ. ಮೊನ್ನೆಯ ಭೇಟಿಯ ನಂತರದಲ್ಲಿ ಯಾಕೋ ಗಂಗತ್ತೆ ಬಹಳವಾಗಿ ನೆನಪಾಗುತ್ತಿದ್ದಾರೆ. ಅಷ್ಟು ವರ್ಷ ಮನೆಯಿಂದ ದೂರವಿದ್ದ ಅವರಿಗೆ ಕೊನೆಗಾಲಕ್ಕೆ ಮತ್ತೆ ಆ ಮನೆಗೆ ಬರಬೇಕು ಅನಿಸಿದ್ದು ಯಾಕೆ? ಮನೆಯವರು ಒಪ್ಪದಿರುವುದರಿಂದ ಅವರಿಗೆ ಆ ಮನೆಗೆ ಬರುವ ಅವಕಾಶ ದೊರಕಿರಲಿಲ್ಲ. ಆದರೆ ಅವರ ಸಾವು ರಾಮಣ್ಣನನ್ನು ವಿಚಲಿತಗೊಳಿಸಿತೇ? ಸಾವಿನ ಸುದ್ದಿ ತಿಳಿದಿದ್ದೆ ರಾಮಣ್ಣ ಜಾನಕ್ಕ ಅಲ್ಲಿಗೆ ಧಾವಿಸಿದ್ದರಂತೆ.
ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಕಣ್ಣಾಚೆಯ ನೋಟ” ನಿಮ್ಮ ಓದಿಗೆ
ಚಿನ್ನ ಬಂತೂ… ಪ್ರಾಣ ಹೋಯ್ತೂ..!: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಇದನ್ನು ಕೇಳಿದ ಆಟೋದವನಿಗೆ ಇನ್ನೂ ಗಾಬರಿಯಾಯಿತು. ಯಾಕೆಂದರೆ ನಿನ್ನೆ ರಾತ್ರಿ ಮೂವರು ಚಿನ್ನದ ಅದಿರನ್ನು ಕಳ್ಳತನ ಮಾಡಲು ಇಳಿದುಕೊಂಡ ಹಳೆ ಗಣಿಗಳಿರುವುದು ಮಾರಿಕುಪ್ಪಮ್ ಮತ್ತು ಬಿಸಾನತ್ತಮ್ ಮಧ್ಯೆ ಇರುವ ಪ್ರದೇಶದಲ್ಲಿ. ಆಟೋದವನು ತನ್ನ ಮೂವರೂ ಗೆಳೆಯರಿಗೆ ಯಾವುದೇ ಅಪಾಯ ಆಗಬಾರದು ಎಂಬುದಾಗಿ ಮತ್ತೆಮತ್ತೆ ಉದ್ದಂಡಮ್ಮಾಳ್ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ
ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ
ಕನ್ನಡದ ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸುಮಾರು ಆರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶಾ ರಂಗದಲ್ಲೂ ತಮ್ಮ ಸಾಹಿತ್ಯ ಕಾರ್ಯವನ್ನು ವಿಸ್ತರಿಸಿಕೊಂಡಿದ್ದರು. ಭಾವಗೀತೆಗಳೆಂದರೆ ಎಚ್.ಎಸ್.ವಿ. ಎನ್ನುವಷ್ಟು ಜನಪ್ರಿಯತೆಯನ್ನು ಹೊಂದಿ, ಭಾವಕವಿಯೆಂದೇ ಪ್ರಸಿದ್ಧರಾಗಿದ್ದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ತೇಜಸ್ವಿನಿ ಹೆಗಡೆ ಕತೆ
ಗಂಡನಿಂದ ಒದಗಿರುವ ವಿಪತ್ತನ್ನು ತಿಳಿದ ಪಾರ್ವತಮ್ಮ, ಚಿಂತೆಯಲ್ಲಿ ತಮ್ಮ ಆಪ್ತರೊಂದಿಗೆ ಗುಟ್ಟನ್ನು ರಟ್ಟಾಗಿಸಿದ್ದು ದೊಡ್ಡ ಪ್ರಮಾದವಾಗಿ ಬಿಟ್ಟಿತ್ತು. ಅದು ಹೇಗೋ ಈ ಕಳುವಿನ ವಿಷಯ ಬೀಗರ ಕಿವಿಗೂ ಬಿದ್ದು, ಸ್ಫೋಟವಾಗಿ, ಹುಡುಗನ ಹೆತ್ತವರು ಈಗ ಮದುವೆಗೆ ನಿರಾಕರಿಸತೊಡಗಿದ್ದರು. ರಾಮಭಟ್ಟರು ಇನ್ನಿಲ್ಲದಂತೇ ಬೇಡಿಕೊಳ್ಳುತ್ತಿದ್ದರೂ, ಕೊನೆಗೆ ನೆಂಟರಿಷ್ಟರು ದಬಾಯಿಸಿದರೂ, ಹಠದಿಂದ ಒಪ್ಪದ ಬೀಗರು, ವಾಗ್ದಾನ ಶಾಸ್ತ್ರಕ್ಕಾಗಿ ಅಲ್ಲೇ ಕುಳಿತಿದ್ದ ಹುಡುಗಿಯ ಕಡೆ ಕಣ್ಣೆತ್ತಿಯೂ ನೋಡದೇ ಹೊರ ನಡೆದುಬಿಟ್ಟರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ತೇಜಸ್ವಿನಿ ಹೆಗಡೆ ಬರೆದ ಕತೆ “ಮರಕತ”
ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮೊದಲನೇ ಹಂತದಲ್ಲಿ ಅದಿರು ದೊರಕಲಿಲ್ಲವೆಂದರೆ ಎರಡನೇ ಹಂತಕ್ಕೆ ಅಂದರೆ ಮತ್ತೆ ನೂರು ಅಡಿಗಳ ಆಳಕ್ಕೆ ಇಳಿದು ಅಲ್ಲಿನ ಸುರಂಗಗಳಲ್ಲಿ ನಡೆದುಹೋಗಿ ಚಿನ್ನದ ಅದಿರಿನ ಕಲ್ಲುಗಳನ್ನು ಹುಡುಕಿ ಹೊಡೆದು ತರಬೇಕಾಗಿತ್ತು. ಸುರಂಗಗಳಲ್ಲಿ ಗಾಳಿ ತೀರಾ ಕಡಿಮೆ ಇದ್ದು ಸಂಪೂರ್ಣವಾಗಿ ಕತ್ತಲೇ ತುಂಬಿಕೊಂಡಿರುತ್ತದೆ. ಸುರಂಗಗಳಲ್ಲಿ ಹಳ್ಳ-ಕೊಳ್ಳ ಕೆಸರು ನೀರು ಕಲ್ಲು-ಮಣ್ಣು ಕಲ್ಲುಬಂಡೆಗಳು ಎಲ್ಲವನ್ನೂ ದಾಟಿ ಹೋಗಬೇಕಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ






