ಹಬ್ಬಗಳ ಸಡಗರ ಮತ್ತು ಹಬ್ಬದ ಮಹತ್ವ ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ ಮತ್ತು ಮಹತ್ವ ದೂರದ ಮಾತು.  ಯಾವುದೇ ಹಬ್ಬವಿರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಆಚರಣೆ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ ಮಹತ್ವ ಕೊಡದಿರುವುದು, ಎಲ್ಲರೂ ಸೇರಿ ರಾಷ್ಟ್ರೀಯ ಹಬ್ಬಗಳನ್ನು ಕಡೆಗಣಿಸುವ ಪರಿಸ್ಥಿತಿಯನ್ನು ಆಗಾಗ ನೋಡಿದ್ದೇವೆ.
ಪ್ರಶಾಂತ್‌ ಬೀಚಿ ಅಂಕಣ

 

ಹಬ್ಬ ಎನ್ನುವ ಶಬ್ದ ಕಿವಿಗೆ ಕೇಳಿದರೆ ಏನೋ ಒಂದು ಹುರುಪು. ಹಿರಿಯರಿಂದ ಹಬ್ಬದ ಮಹತ್ವಗಳ ಬಗ್ಗೆ ತಿಳಿದಿದ್ದರೆ ಇನ್ನೂ ಹೆಚ್ಚಿನ ಖುಷಿ, ಬಣ್ಣ ಬಣ್ಣದ ಅಲಂಕಾರ, ಹೊಸ ಬಟ್ಟೆಗಳನ್ನು ಧರಿಸುವ ಪದ್ಧತಿ ಇದ್ದರಂತೂ ಸಡಗರವೋ ಸಡಗರ. ಭಾರತೀಯರಾದ ನಮಗೆ ಪ್ರತೀ ಹಬ್ಬದ ಮಹತ್ವ ತಿಳಿದಿರುತ್ತದೆ.

ಹಬ್ಬಗಳ ಸಡಗರ ಮತ್ತು ಹಬ್ಬದ ಮಹತ್ವ ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ ಮತ್ತು ಮಹತ್ವ ದೂರದ ಮಾತು. ಹಬ್ಬ ಯಾವುದೇ ಇರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಹಬ್ಬದ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ ಮಹತ್ವ ಕೊಡದಿರುವುದು, ಎಲ್ಲರೂ ಸೇರಿ ರಾಷ್ಟ್ರೀಯ ಹಬ್ಬಗಳನ್ನು ಕಡೆಗಣಿಸುವುದು ನೋಡಿದ್ದೇವೆ. ಇದಕ್ಕೆಲ್ಲಾ ಕಾರಣ ನಮಗಿಲ್ಲದ ತಿಳುವಳಿಕೆ. ಪ್ರತಿಯೊಂದು ಹಬ್ಬಗಳೂ ಯಾವುದೋ ಒಂದು ಕಾರಣಕ್ಕೆ ಹುಟ್ಟಿಕೊಂಡಿರುತ್ತವೆ, ಯಾರಿಗೂ ಬೇಸರವಾಗದಂತೆ, ಎಲ್ಲರಿಗೂ ಮೆಚ್ಚುವಂತೆ ಹಬ್ಬಗಳು ಜನ್ಮತಾಳಿವೆ. ದಿನಕಳೆದಂತೆ ಅಲ್ಪಮತಿಯ ಜನರ ಕೈವಾಡದಿಂದ ಕೆಲವು ಹಬ್ಬಗಳು ವೈಮನಸ್ಯವನ್ನು ಹುಟ್ಟುಹಾಗಿವೆ. ಜನರಿಗೆ ನೋವುಂಟು ಮಾಡುವ, ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಯಾವುದೇ ಹಬ್ಬ ಈ ಜಗತ್ತಿನಲ್ಲಿ ಇಲ್ಲ.

ನೂರಾರು ಅಥವ ಸಾವಿರಾರು ವರ್ಷಗಳ ಹಿಂದೆಯೆ ಪಾಶ್ಚಿಮಾತ್ಯ ದೇಶಗಳಲ್ಲೂ ಅನೇಕ ಹಬ್ಬಗಳು ಜನ್ಮತಾಳಿವೆ, ಪ್ರತೀ ದೇಶದಲ್ಲಿ ಅವರ ಪರಂಪರೆಯ ಹಬ್ಬಗಳದ್ದೆ ಹೆಚ್ಚುಗಾರಿಕೆ ಎನ್ನುವಂತಿದ್ದರೂ, ಈಗಿನ ‘ವಿಶ್ವ ಹಳ್ಳಿ’ (Global village) ಯ ಪರಿಸರದಲ್ಲಿ ಯಾವುದೋ ದೇಶದ ಹಬ್ಬವನ್ನು ವಿಶ್ವದೆಲ್ಲಡೆ ಆಚರಿಸುವ ಅವಕಾಶ ಇದೆ. ಅಂತಹ ಸಮಯದಲ್ಲೆ ನಮಗೆ ಕಂಡಿದ್ದು ಸಾಮ್ಯತೆ. ಚೀನಾ ದೇಶದ ಒಂದು ಹಬ್ಬದ ರೀತಿಯಲ್ಲೆ ಆಫ್ರಿಕಾದ ಒಂದು ದೇಶದಲ್ಲಿ ಅಚರಿಸುತ್ತಾರೆ, ಅದೇ ರೀತಿಯ ಒಂದು ಹಬ್ಬವನ್ನು ದಕ್ಷಿಣ ಅಮೇರಿಕಾದ ಒಂದು ದೇಶದಲ್ಲಿ ಆಚರಣೆ ಕಂಡು ಬರುತ್ತದೆ, ಅದಕ್ಕೆ ಹೋಲಿಕೆಯಾಗಿ ಭಾರತದಲ್ಲಿ ಒಂದು ಹಬ್ಬ ಕಂಡು ಬರುತ್ತದೆ. ಅದನ್ನು ಕೇಳಿದಾg ಅನ್ನಿಸುವುದು ‘ವಸುದೈವ ಕುಟುಂಬಕಂ’.

ಪ್ರತಿಯೊಂದು ಹಬ್ಬಗಳೂ ಯಾವುದೋ ಒಂದು ಕಾರಣಕ್ಕೆ ಹುಟ್ಟಿಕೊಂಡಿರುತ್ತವೆ, ಯಾರಿಗೂ ಬೇಸರವಾಗದಂತೆ, ಎಲ್ಲರಿಗೂ ಮೆಚ್ಚುವಂತೆ ಹಬ್ಬಗಳು ಜನ್ಮತಾಳಿವೆ. ದಿನಕಳೆದಂತೆ ಅಲ್ಪಮತಿಯ ಜನರ ಕೈವಾಡದಿಂದ ಕೆಲವು ಹಬ್ಬಗಳು ವೈಮನಸ್ಯವನ್ನು ಹುಟ್ಟುಹಾಗಿವೆ. ಜನರಿಗೆ ನೋವುಂಟು ಮಾಡುವ, ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಯಾವುದೇ ಹಬ್ಬ ಈ ಜಗತ್ತಿನಲ್ಲಿ ಇಲ್ಲ.

ಅಮೇರಿಕಾ ಮತ್ತು ಕೆನಡಾ ದೇಶಗಳಲ್ಲಿ ಕೆಲವು ಹಬ್ಬಗಳು ಭಾರತೀಯ ಹಬ್ಬಗಳಿಗೆ ಹೆಗಲಿಗೆ ಹೆಗಲು ಕೊಟ್ಟಂತಿದೆ.

ಹ್ಯಾಲೊವೀನ್ ಎನ್ನುವ ಒಂದು ಹಬ್ಬ. ಪ್ರತೀ ವರ್ಷ ಅಕ್ಟೋಬರ್ 31 ನೇ ತಾರೀಖು ಆಚರಿಸುವ ಒಂದು ಹಬ್ಬ. ಎಲ್ಲಾ ಅತ್ಮಗಳಿಗೆ ನಮಿಸುವ ಸಲುವಾಗಿ ಹುಟ್ಟಿಕೊಂಡಿರುವ ಒಂದು ಪ್ರತೀತಿ. ಭಾರತದಲ್ಲಿ ಹಿರಿಯರ ನೆನಪಲ್ಲಿ ಆಚರಿಸುವ ಹಿರಿಯ ದಿನ ಅಥವ ಪಿತೃ ಪಕ್ಷ ಎಂಬ ಹಬ್ಬದಲ್ಲಿ ಸತ್ತವರಿಗೆ ಅವರಿಗಿಷ್ಟವಾದ ಅಡುಗೆಯನ್ನು ಮಾಡಿ ದಾನ ನೀಡುತ್ತಾರೆ. ಪಾಶ್ಚಿಮಾತ್ಯರು ಹ್ಯಾಲೊವೀನ್ ದಿನದಲ್ಲಿ ಮನೆಯನ್ನು ಆತ್ಮಗಳ ಲೋಕದ ರೀತಿ ಸಿಂಗರಿಸಿ, ಟ್ರಿಕ್ / ಟ್ರೀಟ್ ಎನ್ನುವ ಒಂದು ಮಾದರಿಯನ್ನು ಪ್ರದರ್ಶಿಸುತ್ತಾರೆ. ಆ ದಿನ ಮಕ್ಕಳೆಲ್ಲಾ ಪ್ರೇತಾತ್ಮಗಳ ವೇಷ ಹಾಕಿಕೊಂಡು ಮನೆಯಿಂದ ಹೊರಡುತ್ತಾರೆ. ಯಾರ ಮನೆಯ ಮುಂದಗಡೆ ದೀಪ ಉರಿಯುತ್ತಿರುತ್ತದೋ, ಅವರ ಮನೆಗೆ ಹೋಗಿ ಟ್ರಿಕ್ ಅಥವ ಟ್ರೀಟ್ ಎಂದು ಕೇಳುತ್ತಾರೆ. ಆ ಮನೆಯವರು ಯಾವುದಾದರೂ ಒಂದು ಟ್ರಿಕ್ (ಜಾದು) ಮಾಡಿ ತೋರಿಸಬೇಕು, ಇಲ್ಲವಾದರೆ ಟ್ರೀಟ್ ಎನ್ನುವಂತೆ ಮಕ್ಕಳಿಗೆ ಚಾಕ್ಲೇಟ್ ಅಥವ ಯಾವುದಾದರೂ ತಿನಿಸನ್ನು ನೀಡಬೇಕು. ಹೀಗೆ ಮಕ್ಕಳು ಪ್ರತೀ ಮನೆಯಲ್ಲೂ ಈ ರೀತಿಯ ತಿನಿಸುಗಳನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಮಕ್ಕಳಿಗೆ ಇದೊಂದು ವಿನೋದ. ಮನೆಯವರಿಗೆ ಅವರ ಹಿರಿಯರನ್ನು ನೆನೆದು ಸಿಹಿಯನ್ನು ಮನೆಗೆ ಬರುವ ಮಕ್ಕಳಿಗೆ ಹಂಚಿ ಸಂತಸ ಪಡುತ್ತಾರೆ. ಸತ್ತವರು ದೇವರಾಗುತ್ತಾರೆ ಎಂದು ನಂಬುವ ನಾವು, ಮಕ್ಕಳನ್ನು ದೇವರೆನ್ನುವುದಿಲ್ಲವೆ?

‘ಥ್ಯಾಂಕ್ಸ್ ಗಿವಿಂಗ್ ಡೇ’ – ಧನ್ಯವಾದ ಹೇಳುವ ದಿನ ಎಂದು ನಾವು ಕರೆಯಬಹುದು. ಸಂಕ್ರಾಂತಿಯ ದಿನದಂದು ನಾವು ಅಚರಿಸುವ ಒಂದು ಪದ್ಧತಿಯಂತೆ ಇದೂ ಕೂಡ. ರೈತರು ಹೊಲದಲ್ಲಿ ಬೆಳೆದ ಬೆಳೆಯನ್ನು ತಂದು ರಾಶಿ ಹಾಕಿ, ಅದಕ್ಕೆ ಪೂಜೆ ಮಾಡಿ, ಬೆಳೆಯನ್ನು ನೋಡಿ ಸಂಭ್ರಮಿಸುವ ಹಬ್ಬವೇ ಇದು. ಥ್ಯಾಂಕ್ಸ್ ಗೀವಿಂಗ್ ಡೇ ನಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಸಂಗ್ರಹಿಸಿ ತರುತ್ತಾರೆ, ಭೂಮಿಗೆ ಹಾಕಿದ ಒಂದು ಬೀಜದ ಪ್ರತಿಯಾಗಿ ನೂರಾರು ಬೀಜ ಕೊಟ್ಟ ಭೂಮಿಯನ್ನು ಸ್ಮರಿಸುತ್ತಾ, ಆಕೆಗೆ ಕೃತಜ್ಞತಾ ಪೂರ್ವಕವಾಗಿ ನಮಿಸುವ ಕೆಲಸವನ್ನು ಆ ದಿನ ಮಾಡುತ್ತಾರೆ. ಅದರ ನೆಪದಲ್ಲಿ ಸಮಾಜದಿಂದ ಪಡೆದ ಅನುಕೂಲವನ್ನು ಸಮಾಜಕ್ಕೆ ನೀಡಬೇಕೆಂದು ಅನೇಕರು ದಾನ ಧರ್ಮವನ್ನು ಮಾಡುತ್ತಾರೆ. ವ್ಯಾಪಾರಿಗಳು ಬಹಳ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಾರೆ.

‘ಬಾಕ್ಸಿಂಗ್ ಡೇ’ – ಇದನ್ನು ಕೇಳಿದರೆ ಯಾವುದೋ ಬಾಕ್ಸಿಂಗ್ ಪಂದ್ಯದ ಆಚರಣೆ ಇರಬೇಕು ಎನ್ನುವಂತಿರುವ ಹೆಸರು. ಕ್ರಿಸ್ತ ಜಯಂತಿಯ ಎರಡನೆ ದಿನವಾಗಿ ಬಾಕ್ಸಿಂಗ್ ಡೇ ಅಚರಿಸುತ್ತಾರೆ. ಏಸು ಕ್ರಿಸ್ತನ ಜನನದ ಮಾರನೆ ದಿನವನ್ನು ಸಂಭ್ರಮಿಸುವ ಸಲುವಾಗಿ ಮನೆಯ ಅಥವ ಅಂಗಡಿಯವರು ತಮ್ಮ ಕೆಲಸದವರಿಗೆ ಅಥವ ತಮ್ಮ ಪರಿಚಯದವರಿಗೆ ಅಥವ ಸಂಭಂದಿಕರಿಗೆ ಸಿಹಿಯನ್ನು ಅಥವ ಹಣ್ಣನ್ನು ಒಂದು ಬಾಕ್ಸ್ ಅಲ್ಲಿ ಹಾಕಿ ಕೊಡುತ್ತಾರೆ. ಈ ರೀತಿಯ ಬಾಕ್ಸ್ ಕೊಡುವ ಪದ್ದತಿಯನ್ನು ಬಾಕ್ಸಿಂಗ್ ಡೇ ಎಂದು ಕರೆದರು. ಭಾರತದಲ್ಲಿ ದೀಪಾವಳಿ ದಿನ ಅಥವ ಆಯುಧ ಪೂಜೆಯ ದಿನ ನಾವು ಸಿಹಿಯನ್ನು ಹಂಚಿ ಸಂಭ್ರಮಿಸುವ ಹಾಗೆ ಪಾಶ್ಚಿಮಾತ್ಯರು ಬಾಕ್ಸಿಂಗ್ ಡೇ ದಿನ ಸಂಭ್ರಮಿಸುತ್ತಾರೆ. ಕಾರಣ ಏನೇ ಇದ್ದರೂ ಒಬ್ಬರಿಗೊಬ್ಬರು ಸಿಹಿ ಮತ್ತು ಹಣ್ಣನ್ನು ಹಂಚಿ ಸಂಭ್ರಮಿಸಿಕೊಳ್ಳುವ ಪದ್ಧತಿ ಎಷ್ಟು ಮಧುರ ಅಲ್ಲವೆ.

ಹೀಗೆ ಅನೇಕ ಪದ್ಧತಿಗಳು ವಿಶ್ವದ ಅನೇಕ ಭಾಗಗಳಲ್ಲಿ ಗೊತ್ತಿಲ್ಲದೆ ಅಥವ ಸಂಭಂದವಿಲ್ಲದೆ ಒಂದೇ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಯಾರನ್ನು ನೋಡಿ ಯಾರು ಅನುಕರಿಸಿಲ್ಲ ಆದರೂ ಎಷ್ಟು ಸಾಮ್ಯತೆ ಇದೆ. ಮನುಷ್ಯ ಬಣ್ಣದಿಂದ, ದೇಶದಿಂದ, ಧರ್ಮದಿಂದ, ಸಂಸ್ಕೃತಿಯಿಂದ ಹೀಗೆ ಯಾವ್ಯಾವುದೋ ರೀತಿಯಲ್ಲಿ ಬೇರೆ ಇರಬಹುದು, ಆದರೆ ಸಾಮ್ಯತೆಗಳನ್ನು ನೋಡಿದಾಗ ನಾವೆಲ್ಲಾ ಒಂದೇ ಎನ್ನುವ ಭಾವನೆ ಬರುತ್ತದೆ.
‘ವಸುದೈವ ಕುಟುಂಬಕಂ’.