Advertisement

Month: May 2024

‘ದೆವ್ವವಿದೆ ಎಂದು ಸಾಬೀತು ಮಾಡಲಾಗದು, ಇಲ್ಲವೆಂದೂ ಹೇಳಲಾಗದು’

ಮೊಲದ ಕಾಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿಕೊಂಡಿದ್ದರೆ ಒಳ್ಳೆಯ ಕತೆ ಬರೆಯಲಾಗುವುದಿಲ್ಲ ಎನ್ನುವ ಲೇಖಕ ಐಸಾಕ್ ಬಾಷೆವಿಸ್ ಸಿಂಗರ್ ಬರೆದಿದ್ದು ಯಿದ್ದಿಷ್ ಭಾಷೆಯಲ್ಲಿ.  ಜಗತ್ತಿನಲ್ಲಿ ಅತೀ ಕಡಿಮೆ ಜನರು ಮಾತನಾಡುವ ಭಾಷೆಯಿದು. ಆದರೆ ಇದೇ ಭಾಷೆಯಲ್ಲಿ ಅವನು ಸೃಷ್ಟಿಸಿದ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಅನುವಾದದ ಮೂಲಕವೇ ಬಹುದೊಡ್ಡ ಓದುಗ ಸಮುದಾಯ ಅವನಿಗೆ ಒಲಿಯಿತು. ನೊಬೆಲ್ ಪ್ರಶಸ್ತಿಯೂ ಬಂತು.  1968ರಲ್ಲಿ ಮತ್ತೊಬ್ಬ ಲೇಖಕ ಹೆರಾಲ್ಡ್ ಪ್ಲೆಂಡರ್  ‘ಪ್ಯಾರಿಸ್ ರಿವ್ಯೂ’ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಸಿಂಗರ್…

Read More

ಅರವಿಂದ ಕುಡ್ಲ ಬರೆಯುವ ಹೊಸ ಅಂಕಣದಲ್ಲಿ ಶಾಲೆಯ ಕಲರವ

ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ  ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ.  ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸ‍ರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು,  ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ.

Read More

ಸಮಾಜ ಶಾಸ್ತ್ರಹಿನ್ನೆಲೆಯ ಕವಿ ಕಂಡ ‘ನಾಗಕನ್ಯೆಯರು’

“ಸಳಸಳನೆ ಹರಿದಾಡಿ
ಮೈ ಮುರಿದು, ನೆಟಿಕೆ ಮುರಿದು
ತಂಗುಳನೆ ತಿರುತಿರುವಿ ಮೆಲುಕಾಡಿ
ಬಾಯಿಯಲೆ ಅವರಿವರ ಹಲ್ಲು ಮುರಿದು
ಹೆಡೆಯ ತೂಗುವ ಸೊಗಸು
(ಬಿಡುಗಡೆಯ ಹೊಚ್ಚ ಹೊಸತು)
ಕದ್ದಾದರೂ ಹತ್ತಿರವೆ ನೋಡಬೇಕು.”- ಮರುಳ ಸಿದ್ದಯ್ಯನವರು ಬರೆದ ‘ನಾಗಕನ್ಯೆಯರು’ ಎಂಬ ಕವನ ಇಂದಿನ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ನೆಲವ ಬಿಟ್ಟು ನೀರ ಮೇಲೆ ಇಪ್ಪತ್ತು ದಿನಗಳು

ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.
ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ದೇವೇಂದ್ರ ಅಬ್ಬಿಗೇರಿ ತೆಗೆದ ಈ ದಿನದ ಫೋಟೋ

ಶಿಲಾಂಗ್‌ನ ಜಾತ್ರೆಯೊಂದರ ಈ  ಫೋಟೋ ತೆಗೆದವರು ದೇವೇಂದ್ರ ಅಬ್ಬಿಗೇರಿ. ದೇವೇಂದ್ರ ಮೂಲತಃ ಕೊಪ್ಪಳ ಜಿಲ್ಲೆಯವರು. ೨೦೧೧ ಸಾಲಿನ ಕೇಂದ್ರೀಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, Indian Audit & Accounts Department ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ