“ಬಶೀರ್ ಹೇಳಿದರು. ‘ಇಲ್ಲಿನ ಒಬ್ಬ ಕುಖ್ಯಾತ ಕಳ್ಳ ಇಲ್ಲಿಗೆ ಆಗಾಗ ಬರುತ್ತಾನೆ. ನನ್ನನ್ನು ಗುರು ಎನ್ನುತ್ತಾನೆ. ಕಾಲಿಗೆ ಬಿದ್ದು ಒಂದು ರೂಪಾಯಿ ಕೇಳುತ್ತಾನೆ. ಕೊಟ್ಟ ನಂತರ ಹೋಗುತ್ತಾನೆ. ಒಬ್ಬ ಶಾಲೆಗೆ ಹೋಗುವ ಹುಡುಗ ಅರೆ ಹುಚ್ಚ. ಗಾಂಜಾ ಸೇವಿಸುತ್ತಾನೆ. ಸರಾಯಿ ಕುಡಿಯುತ್ತಾನೆ. ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇಲ್ಲಿಗೆ ಬರುತ್ತಾನೆ. ನನ್ನನ್ನು ಗುರು ಅನ್ನುತ್ತಾನೆ. ಈಗ ಒಂದು ಕಾದಂಬರಿ ಬರೆದಿದ್ದಾನೆ. ಇದು ಪ್ರಕಟವಾಗಿದೆ. ಇತ್ತೀಚೆಗೆ ಬಂದು ನನಗೆ ಮದುವೆ, ಬನ್ನಿ ಎಂದ. ನನ್ನ ಆರೋಗ್ಯ ಚೆನ್ನಾಗಿಲ್ಲ ಎಂದೆ. ಸರಾಯಿ ಗಾಂಜಾ ಬಿಡದೆ ಮದುವೆಯಾಗಬೇಡ ಎಂದೆ” ಆಧುನಿಕ ಮಲಯಾಳಂ ಸಾಹಿತ್ಯದ ಸುಲ್ತಾನ ವೈಕಂ ಮಹಮದ್ ಬಷೀರರನ್ನು ಅವರ ಅಖಾಡಾದಲ್ಲೇ ಹಲವು ವರ್ಷಗಳ ಹಿಂದೆ ಕಂಡುಬಂದಿದ್ದ ಕನ್ನಡದ ಹಿರಿಯ ಕಥೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಬರೆದದ್ದು ಇಲ್ಲಿದೆ.

 

`ನನ್ನಜ್ಜನಿಗೊಂದಾನೆಯಿತ್ತು`, `ಪಾತುಮ್ಮನ ಆಡು` ಓದಿದ ನಂತರ ವೈಕಂ ಮಹಮ್ಮದ್ ಬಶೀರರನ್ನು ಕಾಣುವ ನನ್ನ ಆಸೆ ಕೈಗೂಡಿತ್ತು. ಭೇಪುರದ ಆರ್.ಎಂ. ಆಸ್ಪತ್ರೆಯ ಬಳಿ ಓಣಿಯಲ್ಲಿ ಗೇಟು ತೆರೆದೆ. ಮರಮಟ್ಟುಗಳು, ಹೂಗಿಡಗಳ ನಡುವಿನ ಪುಟ್ಟ ಹಂಚಿನ ಮನೆಯ ಜಗಲಿಯಲ್ಲಿ ಸೊರಗಿದ ದೇಹದ ಮುದುಕ ಪೇಪರ್ ಓದುವುದರಲ್ಲಿ ಮಗ್ನವಾಗಿತ್ತು. ನಗೆ ಇಲ್ಲದ ಮುಖದಲ್ಲಿ ಹಿಟ್ಲರ್ ಮೀಸೆ ನೋಡಿದಾಗ ಒಂಥರಾ ಅಳುಕು. ಒಳಗೆ ಬಾ ಎನ್ನುವಂತೆ ಸನ್ನೆ ಮಾಡಿತು. ನಾನು ಹೊರಗಿನಿಂದಲೇ ‘ಜ್ಞಾನ್ ಮಂಗಳಾವರತ್ತಿಲ್ ವಂನ್ನೆದ್’ (ನಾನು ಮಂಗಳೂರಿನಿಂದ ಬಂದಿರುವೆ) ಎಂದು ತೊದಲಿದೆ. ಮುದುಕ ‘ಮನೆಯ ಒಳಗೆ ಬಾ’ ಎಂದು ಸನ್ನೆ ಮಾಡಿತು. ಕಾಲಿನ ಬೂಟು ತೆಗೆಯುವಾಗ, ‘ಸಾರ ಇಲ್ಲ’ ಎಂದಿತು. ಕುರ್ಚಿಯಲ್ಲಿ ಕೂರುತ್ತ ಪರಿಚಯ ಹೇಳಿದೆ. ನಿಮ್ಮ ಕೃತಿಗಳು ನನಗೆ ಬಹಳ ಮೆಚ್ಚಿನದು, ನನ್ನ ಬರಹಗಳ ಮೇಲೆ ನಿಮ್ಮ ಪ್ರಭಾವವಿದೆ ಎಂದೆ. ಮಾತಾಡುತ್ತಾ ಹೋದಂತೆ ಆತ್ಮೀಯರಾಗುತ್ತ ಬಶೀರ್ ತನ್ನ ಮಗನನ್ನು ಕೂಗಿ ಚಾ ತರಹೇಳಿದರು.

ಕಲ್ಲಿಕೋಟೆಯಲ್ಲಿ ಇನ್ನೊಂದು ವಿಶೇಷವೆಂದರೆ ಸಣ್ಣ ನಗರವಾದರೂ ಜಗತ್ತಿನ ಮುಸ್ಲಿಮರಲ್ಲಿರುವ ಒಳ ಪಂಗಡಗಳಲ್ಲಿ ಹೆಚ್ಚಿನದು ಇಲ್ಲಿರುವುದು. ಶಾಫಿ, ಹನಫಿ, ಹಂಬಲಿ, ಷಿಯಾ, ಸುನ್ನಿ, ಮುಜಾಹಿದ್, ಜಮಾಯತೇ ಇಸ್ಲಾಮಿ ಮುಂತಾದ ಒಳ ಪ್ರಭೇದಗಳು, ಪಂಗಡಗಳು. ವಯೋ ವೃದ್ಧರಾದ ಬಶೀರರನ್ನು ಮೊದಲಿಗೇ ಈ ಬಗ್ಗೆ ಕೇಳಿದರೆ ಹೇಗೆ ಎಂದುಕೊಳ್ಳುತ್ತಾ ಕೇಳಿಯೇಬಿಟ್ಟೆ. ಇಳಿ ವಯಸ್ಸಿನ ಬಶೀರರಿಗೆ ಹೇಳುವುದು ಬಹಳ ಇತ್ತು. ಅಸ್ತಮಾ ಅವರನ್ನು ಕಾಡುತ್ತಿತ್ತು. ನಿಲ್ಲಿಸಿ ನಿಲ್ಲಿಸಿ ಮಾತಾಡುತ್ತಾ ಹೋದರು.

‘ಇಲ್ಲಿ ಮುಜಾಹಿದ್, ಜಮಾತೆ ಇಸ್ಲಾಮಿ, ಸುನ್ನಿ, ಶಿಯಾ ಎಲ್ಲರೂ ಇದ್ದಾರೆ, ಹೌದು; ಇಲ್ಲೇ ಹುಟ್ಟಿಕೊಂಡವುಗಳೇನಲ್ಲ. ಈ ಪಂಗಡಗಳಿಗೆ ಸಂಬಂಧಪಟ್ಟವರು ಹೊರಗಿನಿಂದ ಇಲ್ಲಿಗೆ ಬಂದು ಇಲ್ಲಿನ ಜನರನ್ನು ಬೇರೆಬೇರೆ ಗುಂಪುಗಳನ್ನಾಗಿ ಮಾಡಿದ್ದು.’

‘ಪಂಗಡಗಳಿಗೆ, ಮನುಷ್ಯ ಮನುಷ್ಯನ ನಡುವಿನ ಬೇಧಕ್ಕೆ ಅವಕಾಶವಿಲ್ಲದ ಇಸ್ಲಾಮಿನಲ್ಲಿ ಇವೆಲ್ಲ ಹೇಗೆ ಹುಟ್ಟಿಕೊಂಡವು?’

ಭೇಪುರದ ಆರ್.ಎಂ. ಆಸ್ಪತ್ರೆಯ ಬಳಿ ಓಣಿಯಲ್ಲಿ ಗೇಟು ತೆರೆದೆ. ಮರಮಟ್ಟುಗಳು, ಹೂಗಿಡಗಳ ನಡುವಿನ ಪುಟ್ಟ ಹಂಚಿನ ಮನೆಯ ಜಗಲಿಯಲ್ಲಿ ಸೊರಗಿದ ದೇಹದ ಮುದುಕ ಪೇಪರ್ ಓದುವುದರಲ್ಲಿ ಮಗ್ನವಾಗಿತ್ತು. ನಗೆ ಇಲ್ಲದ ಮುಖದಲ್ಲಿ ಹಿಟ್ಲರ್ ಮೀಸೆ ನೋಡಿದಾಗ ಒಂಥರಾ ಅಳುಕು. ಒಳಗೆ ಬಾ ಎನ್ನುವಂತೆ ಸನ್ನೆ ಮಾಡಿತು. ನಾನು ಹೊರಗಿನಿಂದಲೇ ‘ಜ್ಞಾನ್ ಮಂಗಳಾವರತ್ತಿಲ್ ವಂನ್ನೆದ್’ (ನಾನು ಮಂಗಳೂರಿನಿಂದ ಬಂದಿರುವೆ) ಎಂದು ತೊದಲಿದೆ. ಮುದುಕ ‘ಮನೆಯ ಒಳಗೆ ಬಾ’ ಎಂದು ಸನ್ನೆ ಮಾಡಿತು.

‘ನೋಡಿ, ಕುರಾನ್ ನ  ಭಾಷೆ ಬಹಳ ಹಳೆಯದ್ದು, ಜಗತ್ತಿನಲ್ಲಿ ಅರಬೀ ಭಾಷೆಯು ಸೇರಿದಂತೆ ಎಲ್ಲ ಭಾಷೆಗಳೂ ಕಾಲಕ್ಕೆ ತಕ್ಕಂತೆ ಬೇರೆ ಬೇರೆ ಭಾಷೆಯಿಂದ ಪಡೆದು, ತನ್ನದನ್ನು ಕೊಟ್ಟು ಬದಲಾಗುತ್ತಾ ಬೆಳೆಯುತ್ತಾ ಬಂದಿದೆ. ಆದರೆ, ಕುರಾನ್ ನ  ಅಕ್ಷರ ಅಕ್ಷರವೂ ಉಳಿದು ತನ್ನ ಹಳೆಯ ಅರಬೀ ಭಾಷೆಯ ಸೊಗಡನ್ನು ಉಳಿಸಿಕೊಂಡಿದೆ. ಆ ಕಾಲದ ಭಾಷೆಯನ್ನು ಸಂಶೋಧಿಸಿ, ಕುರಾನ್ ನ  ಪದಗಳ ಅರ್ಥವನ್ನು ಹುಡುಕಲಿಕ್ಕೆ ಮುಸ್ಲಿಮರು ಪ್ರಯತ್ನಿಸಿಲ್ಲ. ತಮಗೆ ತಿಳಿದಂತೆ ತಮ್ಮ ತಮ್ಮ ಭಾಷೆಗೆ ತರ್ಜುಮೆ ಮಾಡಿಕೊಂಡರು. ಒಬ್ಬೊಬ್ಬರಿಗೆ ಒಂದೊಂದು ಅರ್ಥಕೊಟ್ಟಿತು. ಉದಾಹರಣೆಗೆ ‘ಸಬಹ್’ ಅನ್ನುವ ಕುರಾನಿನ ಶಬ್ಧವನ್ನೇ ತೆಗೆದುಕೊಳ್ಳಿ… ಅದಕ್ಕೆ ಏಳು ಅನ್ನುವ ಸಂಖ್ಯೆಯ ಅರ್ಥವನ್ನು ಕೊಡುತ್ತಾರೆ. ‘ಸಬಹ್ ಸಮಾವಾತ್’ ಅಂದರೆ ಏಳನೇ ಆಕಾಶ ಎಂಬ ಅರ್ಥ ತಂದರು. ಹದೀಸ್ ಬಂತು. ಏಳನೇ ಆಕಾಶದಲ್ಲಿ ಅಲ್ಲಾಹ ಇದ್ದಾನೆ ಅಂತ. ಮುಹಮ್ಮದ್ ನಬಿ ಅಲ್ಲಿಗೆ ಯಾತ್ರೆ ಮಾಡಿದರು (ಮೆಹರಾಜ್). ಕೆಲವರು ನಬಿ ಅಲ್ಲಾಹನನ್ನು ಕಂಡರು ಎಂದರು. ಇಲ್ಲ ಎಂದರು ಕೆಲವರು, ಅಭಿಪ್ರಾಯಗಳಿಗೆ ತಕ್ಕಂತೆ ಪಂಗಡಗಳನ್ನು ಕಟ್ಟಿಕೊಂಡರು. ನೂರಾರು ವರ್ಷಗಳಿಂದ ಮುಸ್ಲಿಮರು ಸುಮ್ಮನೆ ಇದ್ದು, ಹೀಗೆಲ್ಲಾ ಅಂದುಕೊಳ್ಳುತ್ತಾ ನೀರು ಗುಳ್ಳೆಯೊಳಗೆ ವಾಸಿಸುತ್ತಿದ್ದೇವೆನ್ನುವ ಭ್ರಮೆ, ಭಯ! ಕುರಾನ್ ನ  ಹಳೆ ಅರಬಿ ಭಾಷೆಯನ್ನು ತಿಳಿದುಕೊಳ್ಳಲು, ಅರ್ಥವನ್ನು ಕಂಡು ಹುಡುಕಲು ಪ್ರಯತ್ನಿಸಿದ ಡಾ. ಮಾರಿಸ್ ಬುಕೆ (ಹೀಗೆಯೇ ಹಳೆಯ ಗ್ರೀಕ್, ಹೀಬ್ರೂ ಭಾಷೆಯ ಬಗ್ಗೆಯೂ ಈತ ಅಭ್ಯಾಸ ಮಾಡಿದ್ದ) ತನ್ನ ದಿ ಬೈಬಲ್, ದಿ ಕುರಾನ್, ಆಂಡ್ ಸಾಯೆನ್ಸ್ ಅನ್ನುವ ಪುಸ್ತಕದಲ್ಲಿ ನಾನು ಹೇಳಿದ ‘ಸಬಹ್’ ಅನ್ನುವ ಪದಕ್ಕೆ ಏಳು ಅನ್ನುವ ಅರ್ಥ ಮಾತ್ರವಲ್ಲ, ಎಪ್ಪತ್ತು ಮಿಲಿಯದ ಎಪ್ಪತ್ತು ಸಾವಿರದ ಹೀಗೆ ಅನಂತ, ವಿಶಾಲವಾದ ಅರ್ಥವಿದೆ ಎಂದು ವಿವರಿಸಿದ. ಅಂದರೆ ಕುರಾನ್ ನಲ್ಲಿ ಬಾಹ್ಯಾಕಾಶ ವಿಶ್ವದಲ್ಲಿ ಮಿಲಿಯಗಟ್ಟಲೆ ಆಕಾಶಗಳಿವೆ ಎಂದಿದೆ ಎಂದು ಹೇಳಿ ಜಗತ್ತನ್ನು ದಂಗುಗೊಳಿಸಿದ. ಈಗ, ಅಲ್ಲಾಹ ಏಳನೇ ಆಕಾಶದಲ್ಲಿದ್ದಾನೆ ಎನ್ನುವವರಿಗೆ ಏನನ್ನಬೇಕು? ಎಚ್. ಈ. ವೆಲ್ಸ್ ಹೇಳಿದ, ಅರಬರು ಮುಟ್ಟಿದ್ದನ್ನು ನಾವು ಪೂರ್ಣಗೊಳಿಸಬೇಕಾಗಿದೆ ಎಂದು. ಆದರೆ ಇಂದು ಮುಸ್ಲಿಮರಲ್ಲಿ ಬರೀ ಜಡತ್ವ ಆವರಿಸಿದೆ’. ಎಂದರು.

ಬಶೀರರು ಮುಂದುವರಿಸಿದರು.
‘ಅಲ್ಲಾಹು ನೂರುಸ್ಸಮಾವಾತಿ ಒಲ್ಲರ್ಲಿ ಎಂಬ ಕುರಾನ್ ವಾಕ್ಯವಿದೆ. ಇದರ ಅರ್ಥ ಅಲ್ಲಾಹನೇ ಬೆಳಕು, ಶಕ್ತಿ, ಆಕಾಶ ಮತ್ತು ಭೂಮಿ. ಅಲ್ಲಾಹ ನಿರಾಕಾರನು, ಎಲ್ಲವನ್ನೂ ಕಾಣುವವನೂ ಕೇಳುವವನೂ ಎಲ್ಲೆಡೆ ಇರುವವನೂ, ದಿವ್ಯ ಪ್ರಕಾಶನೂ, ಕತ್ತಲೆಯೂ ಆಗಿದ್ದಾನೆ.

ಈ ಮುಹಮ್ಮದ್ ಯಾರು? ವಿಶ್ವಕ್ಕೆ ಅಲ್ಲಾಹ ಕೋಟಿಗಟ್ಟಲೆ ಪ್ರವಾದಿಗಳನ್ನು ಕಳುಹಿಸಿದ, ಅವರಲ್ಲೊಬ್ಬ. ಒಬ್ಬ ಮನುಷ್ಯ. ಸುನ್ನಿ ಪಂಗಡದವರು ಮುಹಮ್ಮದ್ ನಬಿಯ ನಂತರ ಯಾರೂ ನಬಿಗಳಿಲ್ಲ, ಇಲ್ಲಿಗೆ ಕೊನೆಗೊಂಡಿತು ಎನ್ನುತ್ತಾರೆ. ಅಹ್ಮದೀಯಾಗಳು ಇದನ್ನು ಒಪ್ಪುವುದಿಲ್ಲ. ಇನ್ನೊಬ್ಬ ’ಮಹದೀ ಇಮಾಮ್’ ನಬಿ ಬರುತ್ತಾರೆ ಎನ್ನುತ್ತಾರೆ. ಹೀಗೆಯೇ ಪಂಗಡಗಳು ಬೆಳೆದವು. ತಮ್ಮದೇ ಸರಿ ಎಂದರು. ಅಲ್ಲಲ್ಲಿ ಹೊಡೆದು ಬಡಿದುಕೊಂಡರು.’

ನಾನು ಮಧ್ಯೆ ಬಾಯಿ ಹಾಕಿ, ‘ಶಾಬಾನು ಪ್ರಕರಣದಂತಹ ಪ್ರಕರಣದ ಹುಟ್ಟಡಗಿಸಲು, ವಿಮೆನ್ಸ್ ಬಿಲ್ನಂತಹ ದರಿದ್ರ ಕಾನೂನನ್ನು ತರಲು ಇವರೆಲ್ಲರೂ ಒಟ್ಟಾಗುತ್ತಾರೆ’ ಎಂದೆ. ನನ್ನ ಉದ್ವೇಗದಿಂದಾಗಿ ಕ್ಷಣ ಸುಮ್ಮನಾದ ಬಶೀರ್, ‘ಬಾ, ನನ್ನ ಆಫೀಸಿಗೆ ಹೋಗೋಣ’ ಎಂದು ಹೊರಗೆ ಕರೆದುಕೊಂಡು ಹೋದರು. ‘ಇದು ನನ್ನ ಆಫೀಸು’ ಎಂದು ಒಂದು ದಟ್ಟ ಮರದಡಿಯಲ್ಲಿಟ್ಟ ಆರಾಮ ಕುರ್ಚಿಯಲ್ಲಿ ಕೂತರು. ಎದುರಿಗಿದ್ದ ಕುರ್ಚಿಯಲ್ಲಿ ಕೂತುಕೊಳ್ಳುತ್ತಾ ಅವರ ತಮಾಷೆಗೆ ನಗು ಬಂತು. ನಾನು ಪ್ರಶ್ನೆ ಕೇಳುವಾಗ ಸೀರಿಯಸ್ಸಾಗಿದ್ದೆ. ಬಶೀರ್ ಹೀಗೆಯೇ ತನ್ನ ಕೃತಿಗಳಲ್ಲೂ ಸೀರಿಯಸ್ಸನ್ನು ಹಗುರ ತಮಾಷೆ ಮಾಡಿ ವಿಷಯಕ್ಕೆ ಮನಸ್ಸನ್ನು ಪೂರ್ಣವಾಗಿ ಸೆಳೆದು ಬಿಡುವುದು!

‘ಇಸ್ಲಾಮ್ ಬಹಳ ಸ್ಪಷ್ಟವಾದ ಧರ್ಮ. ಬದುಕಿಗೆ ಬಹಳ ಹತ್ತಿರವಾದದ್ದು. ಏನೆಲ್ಲ ಅದರ ಮೇಲೆ ಹೊರಿಸಿಬಿಟ್ಟರು ನೋಡಿ! ಯಾರೂ ಕುರಾನ್ನ ಸಂದೇಶಗಳ ಸಾಧ್ಯತೆಯನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡದೆ ಬೇಕಾಬಿಟ್ಟಿ ಪಂಗಡಗಳನ್ನು ಕಟ್ಟಿಕೊಂಡರು, ಕಾನೂನುಗಳನ್ನು ತಂದರು, ಬಹಳಷ್ಟು ಹೊಸ ಸಂಪ್ರದಾಯಗಳನ್ನು ಸೇರಿಸಿಕೊಂಡರು. ಕುರಾನ್ ಮಹಿಳೆಯರಿಗೆ ನಿಮ್ಮ ಎದೆಗಳನ್ನು (ಮಾನವನ್ನು) ಮುಚ್ಚಿಕೊಳ್ಳಿ ಎಂದಿದೆ. ಗಂಡಿಗೆ ಹೆಣ್ಣನ್ನು ತೊತ್ತನ್ನಾಗಿಸುವ ಹಂಬಲದ ಸಂದರ್ಭ. ಹೆಣ್ಣನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳಬೇಕಾಗಿತ್ತು. ಸರಿ, ಮಾಡಿದ ಬೇಕಾಬಿಟ್ಟಿ ಕಾನೂನುಗಳನ್ನು! ಮೌಲವಿ ಹೇಳಿದ್ದನ್ನು ನಮ್ಮ ಅವಿದ್ಯಾವಂತರು ಕಣ್ಣು ಮುಚ್ಚಿ ನಂಬಿಬಿಡುತ್ತಾರೆ.(ವಿದ್ಯಾವಂತರೂ ಕೂಡ ಕಮ್ಮಿ ಇಲ್ಲ, ಬಿಡಿ!) ನಾವು ಬಹಳ ತಪ್ಪುಗಳನ್ನು ಮಾಡಿದ್ದೇವೆ, ಈ ದೇಶದಲ್ಲಿ. ಬ್ರಿಟೀಷರು ನಮ್ಮನ್ನು ಆಳುತ್ತಿದ್ದಾಗ ನಮ್ಮ ಉಲೇಮಾಗಳು ಇಂಗ್ಲೀಷ್ ಭಾಷೆ ನರಕದ ಭಾಷೆ ಎಂದರು. ಮುಸ್ಲಿಮರು ವಿದ್ಯೆ ಕಲಿಯಲಿಲ್ಲ. ಕೆಲವು ಶ್ರೀಮಂತರು, ಷಿಯಾಗಳು ಮಾತ್ರ ವಿದ್ಯಾವಂತರಾದರು. ಅವರು ಬ್ರಿಟೀಷರಿಂದ ಬೇಕಾದ್ದನ್ನು ಪಡೆದುಕೊಂಡರು.

‘ಬಾಲ್ಯಕಾಲಸಖಿ’ ಕಿರು ಕಾದಂಬರಿ

ಕುರಾನ್ ನ  ಹಳೆ ಅರಬಿ ಭಾಷೆಯನ್ನು ತಿಳಿದುಕೊಳ್ಳಲು, ಅರ್ಥವನ್ನು ಕಂಡು ಹುಡುಕಲು ಪ್ರಯತ್ನಿಸಿದ ಡಾ. ಮಾರಿಸ್ ಬುಕೆ (ಹೀಗೆಯೇ ಹಳೆಯ ಗ್ರೀಕ್, ಹೀಬ್ರೂ ಭಾಷೆಯ ಬಗ್ಗೆಯೂ ಈತ ಅಭ್ಯಾಸ ಮಾಡಿದ್ದ) ತನ್ನ ದಿ ಬೈಬಲ್, ದಿ ಕುರಾನ್, ಆಂಡ್ ಸಾಯೆನ್ಸ್ ಅನ್ನುವ ಪುಸ್ತಕದಲ್ಲಿ ನಾನು ಹೇಳಿದ ‘ಸಬಹ್’ ಅನ್ನುವ ಪದಕ್ಕೆ ಏಳು ಅನ್ನುವ ಅರ್ಥ ಮಾತ್ರವಲ್ಲ, ಎಪ್ಪತ್ತು ಮಿಲಿಯದ ಎಪ್ಪತ್ತು ಸಾವಿರದ ಹೀಗೆ ಅನಂತ, ವಿಶಾಲವಾದ ಅರ್ಥವಿದೆ ಎಂದು ವಿವರಿಸಿದ. ಅಂದರೆ ಕುರಾನ್ ನಲ್ಲಿ ಬಾಹ್ಯಾಕಾಶ ವಿಶ್ವದಲ್ಲಿ ಮಿಲಿಯಗಟ್ಟಲೆ ಆಕಾಶಗಳಿವೆ ಎಂದಿದೆ ಎಂದು ಹೇಳಿ ಜಗತ್ತನ್ನು ದಂಗುಗೊಳಿಸಿದ. ಈಗ, ಅಲ್ಲಾಹ ಏಳನೇ ಆಕಾಶದಲ್ಲಿದ್ದಾನೆ ಎನ್ನುವವರಿಗೆ ಏನನ್ನಬೇಕು?

ತಲಾಕ್ ಅಂದರೇನು? ಅದು ನಮಗೆ ಗೊತ್ತಿಲ್ಲ. ನೋಡಿ, ಮುಹಮ್ಮದ್ ನಬಿಯವರ (ಹದೀಸ್) ಉಪದೇಶ ಪ್ರಕಾರ ಇಸ್ಲಾಮಿನಲ್ಲಿ ಮದುವೆ ಆಗುವ ಮೊದಲು ಹೆಣ್ಣನ್ನು ನೋಡಬೇಕು, ಮಾತಾಡಬೇಕು. ಮುಂದೆ ಇತ್ಯರ್ಥ. ಕರಾರು ಎಲ್ಲ ಆದ ನಂತರ ಆಗುವ ವಿವಾಹಕ್ಕೆ ತಲಾಕ್ ಯಾಕೆ ಬೇಕು? (ಹೀಗೆ ಮುಸ್ಲಿಮರಲ್ಲಿ ವಿವಾಹ ನಡೆಯುತ್ತಿದೆಯೇ? ಮನೆಯ ಹೆಂಗಸರು ಹೋಗಿ ಹೆಣ್ಣು ನೋಡಿ ಬರುವುದು. ಹುಡುಗ ಕಣ್ಣು ಮುಚ್ಚಿ ಒಪ್ಪಿ ಬಿಡುತ್ತಾನೆ. ನಿಕಾಹ್ ನಡೆಯುತ್ತದೆ. ಪ್ರಥಮ ರಾತ್ರಿಯಂದೇ ಹೆಣ್ಣು ಗಂಡು ಪರಸ್ಪರ ನೋಡುವುದು) ಗಂಡಸು ಏನು ಬೇಕಾದರೂ ಮಾಡಬಹುದು. ಗಂಡಸರಾಗಿ ನಮಗೆ ಬೇಕಾದದ್ದನ್ನು ನಾವು ಮಾಡಿ ಕೊಂಡಿದ್ದೇವೆ’.

ಮಗನನ್ನು ಕರೆದು ಬಶೀರ್ ಇನ್ನೊಮ್ಮೆ ಟೀ ತರಿಸಿದರು.

ವಾತಾವರಣ ಬಿಸಿಯೇರುವುದನ್ನು ಗಮನಿಸಿ ಮಾತು ಬದಲಾಯಿಸಲಿಕ್ಕಾಗಿ, ‘ಈ ಮಾಪ್ಳಾ ಪಾಟ್ಟುಗಳು, ಮೌಲೂದ್, ಮಾಲೆಗಳು ಇಲ್ಲೇ ಹುಟ್ಟಿಕೊಂಡದ್ದೇ ಅಥವಾ ಅರಬರಿಂದ ಎರವಲು ಪಡೆದುಕೊಂಡದ್ದೇ?’ ಎಂದೆ.

‘ಅರಬರು ಕಲ್ಲಿಕೋಟೆ ಬಂದರಿನ ಮೂಲಕ ನಬಿಯವರ ಕಾಲದಲ್ಲೇ ಇಲ್ಲಿಗೆ ಬಂದಿದ್ದರು. ಇಲ್ಲಿನ ಜನರೊಂದಿಗೆ ಬೆರೆತರು, ಮದುವೆಯಾದರು. ಮಳಯಾಳಂನಲ್ಲಿ ಮೂರು ಸಾವಿರ ಅರೆಬಿಕ್ ಶಬ್ದಗಳಿವೆ ಎನ್ನುತ್ತಾರೆ. ಜಗತ್ತಿನ ಎಲ್ಲ ಭಾಷೆಗಳಿಗೂ ಅರಬಿಕ್ ಭಾಷೆ ಎರವಲು ಕೊಟ್ಟಿದೆ, ಪಡೆದಿದೆ. ಇಲ್ಲಿ ಅರಬರು ಬಂದು ಮದುವೆಯಾದರು, ಮನೆಕಟ್ಟಿಕೊಂಡರು. ಕೆಲವರು ಇಲ್ಲೇ ಉಳಿದರು. ಅಂದರೆ ‘ಮೆಹಫಿಲ್’ ಮಾಡಿಕೊಂಡರು. ಈ ಮೆಹಫಿಲ್ ಮಾಪ್ಳಾ ಆಯಿತು. ಇದು ಒಂದು ಅರ್ಥದಲ್ಲಿ. ಹೀಗೆ ಮೌಲೂದು, ಮಾಲೆ, ಪಾಟ್ಟುಗಳ ಸಬೀನೆಗಳೆಲ್ಲವುಗಳಿಗೂ ಮೂಲ ಅರಬೀ ಭಾಷೆಯ ಪ್ರೇರಣೆ. ಒಂದು ರೀತಿಯಲ್ಲಿ ನೋಡಿದರೆ ಈ ಮಾಪ್ಳಾ ಪಾಟ್ಟುಗಳು ಗಜಲ್ಗಳು. ಈ ಅರಬರು ಮಳಯಾಳಂ ಅನ್ನು ಅರಬೀ ಲಿಪಿಯಲ್ಲಿ ಬರೆದುಕೊಂಡರು. ಹೀಗೆ ಅರಬೀ ಮಳಯಾಲಂ ಲಿಪಿ ರೂಢಿಗೆ ಬಂತು. ಈ ಅರಬೀ ಮಳಯಾಳಂ ಲಿಪಿಯಲ್ಲೇ ಮಾಲೆ, ಪಾಟ್ಟುಗಳ ಸಬೀನ(ಪುಸ್ತಕ)ಗಳೆಲ್ಲವೂ ಇವೆ.

ಸಂಗೀತ ಕೇಳುವುದು ನನ್ನ ಪ್ರಿಯವಾದ ಅಭ್ಯಾಸ. ನನ್ನ ಬಳಿ ಜಗತ್ತಿನ ಅನೇಕ ಭಾಷೆಗಳ ೪೦-೪೫ ವರ್ಷಗಳಿಗೂ ಹಿಂದಿನ ಗ್ರಾಮಫೋನು ರಿಕಾರ್ಡುಗಳಿವೆ. ಮಾಪ್ಳ ಪಾಟ್ಟಿನ ರಿಕಾರ್ಡುಗಳು, ಹಿಂದಿ, ಉರ್ದು, ಫಾರ್ಸಿ, ಅರಬಿ ಭಾಷೆಗಳ ಹಾಡುಗಳು ಇವೆ’ ಎನ್ನುತ್ತಾ ತನ್ನ ಸಂಗೀತ ಅಭಿರುಚಿಯ ಜಗತ್ತನ್ನು ಪರಿಚಯಿಸಿದರು.

‘ನೀವು ಬರಹಗಾರನಾಗಿ ತೊಡಗಿದ್ದು ಯಾವಾಗ?’ ಎಂದು ಕೇಳಿದೆ.

‘ನಾನು ಕಲಿಯುವ ಪ್ರಾಯದಲ್ಲಿ ಇಂಗ್ಲೀಷ್ ಶಾಲೆ ಬಿಟ್ಟು ಓಡಿದ್ದೆ, ಕಾಂಗ್ರೇಸ್ ಚಳವಳಿಯಲ್ಲಿ ಧುಮುಕಿದೆ. ಆಗ ಎರ್ನಾಕುಲಂ ಪ್ರವೇಶಕ್ಕೆ ನನ್ನನ್ನು ನಿರ್ಬಂಧಿಸಿದ್ದರು. ಟ್ರಿವೆಂಡ್ರಂ ಸೆಂಟ್ರಲ್ ಜೈಲಿನಲ್ಲಿದ್ದಾಗ ಪ್ರೇಮ ಲೇಖನಗಳನ್ನು ಬರೆದೆ. ಹತ್ತು ವರ್ಷಗಳ ಕಾಲ ನಾನು ಸನ್ಯಾಸಿಯಾಗಿ ಹಿಂದುಗಳೊಂದಿಗಿದ್ದೆ. ಮತ್ತೆ ಸೂಫಿ ಸನ್ಯಾಸಿಗಳೊಂದಿಗೆ ಸೇರಿ ಊರೂರು ಸುತ್ತಿದೆ. ಮತ್ತೆ ಊರಿಗೆ ಬಂದು ಬರೆಯತೊಡಗಿದೆ. ಮೂವತ್ತೆರಡು ಪುಸ್ತಕಗಳನ್ನು ಬರೆದಿದ್ದೇನೆ.’ ಎನ್ನುತ್ತಾ ಹೋದಂತೆ ಅವರಿಗೆ ನನ್ನೊಂದಿಗೆ ತಮ್ಮ ಅಂತರಂಗವನ್ನು ತೋಡಿಕೊಳ್ಳುವ ಆತ್ಮೀಯತೆ ಮೂಡಿದಂತೆ ಅನಿಸಿತು.

ಅರಬರು ಕಲ್ಲಿಕೋಟೆ ಬಂದರಿನ ಮೂಲಕ ನಬಿಯವರ ಕಾಲದಲ್ಲೇ ಇಲ್ಲಿಗೆ ಬಂದಿದ್ದರು. ಇಲ್ಲಿನ ಜನರೊಂದಿಗೆ ಬೆರೆತರು, ಮದುವೆಯಾದರು. ಮಳಯಾಳಂನಲ್ಲಿ ಮೂರು ಸಾವಿರ ಅರೆಬಿಕ್ ಶಬ್ದಗಳಿವೆ ಎನ್ನುತ್ತಾರೆ. ಜಗತ್ತಿನ ಎಲ್ಲ ಭಾಷೆಗಳಿಗೂ ಅರಬಿಕ್ ಭಾಷೆ ಎರವಲು ಕೊಟ್ಟಿದೆ, ಪಡೆದಿದೆ. ಇಲ್ಲಿ ಅರಬರು ಬಂದು ಮದುವೆಯಾದರು, ಮನೆಕಟ್ಟಿಕೊಂಡರು. ಕೆಲವರು ಇಲ್ಲೇ ಉಳಿದರು. ಅಂದರೆ ‘ಮೆಹಫಿಲ್’ ಮಾಡಿಕೊಂಡರು. ಈ ಮೆಹಫಿಲ್ ಮಾಪ್ಳಾ ಆಯಿತು. ಇದು ಒಂದು ಅರ್ಥದಲ್ಲಿ. ಹೀಗೆ ಮೌಲೂದು, ಮಾಲೆ, ಪಾಟ್ಟುಗಳ ಸಬೀನೆಗಳೆಲ್ಲವುಗಳಿಗೂ ಮೂಲ ಅರಬೀ ಭಾಷೆಯ ಪ್ರೇರಣೆ. ಒಂದು ರೀತಿಯಲ್ಲಿ ನೋಡಿದರೆ ಈ ಮಾಪ್ಳಾ ಪಾಟ್ಟುಗಳು ಗಜಲ್ಗಳು.

‘ನಾನು ಹಿಂದೆ ಒಂದು ನಾಯರ್ ಹುಡುಗಿಯನ್ನು ಪ್ರೀತಿಸಿದ್ದೆ. ಅವಳನ್ನು ಮದುವೆಯಾಗಬೇಕೆಂದೂ ನಿಶ್ಚಯಿಸಿದ್ದೆ. ಆದರೆ ಅವಳ ತಂದೆ ತಾಯಿ ಸಂಪ್ರದಾಯ ನಿಷ್ಠರು. ಸರಸ್ವತಿ ದೇವಿ ಅಂತ ಅವಳ ಹೆಸರು. ಅವಳ ಹೆತ್ತವರು ನೀನು ಅವನೊಂದಿಗೆ ಮದುವೆಯಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದರು. ಬೇರೆ ದಾರಿ ಇರಲಿಲ್ಲ. ನೀನು ನಿನ್ನ ಹೆತ್ತವರು ಹೇಳಿದಂತೆ ಕೇಳು ಎಂದೆ. ಹುಡುಗಿ ಬೇರೆ ಮದುವೆಯಾದಳು’ ಎಂದು ತನ್ನ ಬದುಕಿನಲ್ಲಿ ನಡೆದ ಪ್ರಮುಖ ಘಟ್ಟವೊಂದನ್ನು ಪರಿಚಯಿಸಿದರು. ಬಶೀರ್ ಮುಂದೆ ತನ್ನ ಐವತ್ತನೇ ಪ್ರಾಯದಲ್ಲಿ ಮದುವೆಯಾದದ್ದು, ಸನ್ಯಾಸಿಯಾಗಿ ಊರೂರು ಸಂಚರಿಸಿದ್ದು ನನ್ನ ಮನಸ್ಸಿನಲ್ಲಿ ಮೂಡಿಬಂತು.

‘ನೀವು ಬಹಳ ಸಣ್ಣ ಕಾದಂಬರಿಗಳನ್ನೇ ಬರೆದಿದ್ದೀರಿ’ ಎಂದೆ.


‘ಹೌದು, ಸಣ್ಣ ಪುಟ್ಟ ಬರವಣಿಗೆಯಲ್ಲಿ ನನಗೆ ಆಸಕ್ತಿ ಹೆಚ್ಚು. ಬೇಕೆಂದೇ ಕಾದಂಬರಿಯನ್ನು ಚಿಕ್ಕ ಆಕೃತಿಗೆ ತರುತ್ತೇನೆ. ನನ್ನ ‘ಎಂಡೆ ಉಪ್ಪಾಪ್ಪಕ್ಕೊರು ಆನೆ ಉಂಡಾಯಿರ್ನ್ನು’ (ನನ್ನಜ್ಜನಿಗೊಂದಾನೆಯಿತ್ತು,೧೯೫೧) ಕಾದಂಬರಿಯಲ್ಲಿ ಇಡೀ ಮುಸ್ಲಿಮರ ಇತಿಹಾಸವನ್ನೇ ತರಬೇಕೆಂದುಕೊಂಡಿದ್ದೆ. ಈ ಜಗತ್ತಿನಲ್ಲಿ ಸಾಧಾರಣ ಆರುನೂರು ವರ್ಷಗಳ ಕಾಲ ಇಸ್ಲಾಮ್ ಪ್ರಬಲವಾಗಿತ್ತು. ಬಹಳಷ್ಟು ದೇಶಗಳಲ್ಲಿ ಮುಸ್ಲಿಮರ ಆಳ್ವಿಕೆ ಇತ್ತು. ಬಹಳಷ್ಟು ಮುಸ್ಲಿಮ್ ಅರಸರು ಭಾರತವನ್ನು ಆಳಿದರು. ಮತ್ತೆ ಎಲ್ಲ ವೈಭವವನ್ನು ಕಳೆದುಕೊಂಡರು. ಈಗ ಪವರಿಲ್ಲ. ಈಗ ಭಾರತದ ಮುಸ್ಲಿಮರು ಅನಾಥರಾಗಿದ್ದೇವೆಂದುಕೊಂಡಿದ್ದಾರೆ. ಬ್ರಿಟೀಷರು ಬಂದರು. ಮುಸ್ಲಿಮರಲ್ಲಿ ಕೆಲವರು ಅವರನ್ನು ಓಲೈಸಿಕೊಂಡರು. ಸುಮಾರು ನೂರು ವರ್ಷಗಳಷ್ಟು ಕಾಲ ಮುಸ್ಲಿಮರ ಆಳ್ವಿಕೆಯ ಒಳಗಾಗಿದ್ದ ಭಾರತದಲ್ಲಿ, ಕೂಡ ಹಿಂದೂಗಳೇ ಬಹುಸಂಖ್ಯಾತರಾಗಿದ್ದರು. ಈಗಲೂ ಕೂಡ ಹಿಂದುಗಳೇ ಬಹುಸಂಖ್ಯಾತರು. ಭಾರತದಲ್ಲಿ ಮುಸ್ಲಿಮರ ಬಗ್ಗೆ ಬಹಳಷ್ಟು ಕೆಟ್ಟ ಪ್ರಚಾರಗಳಾಗಿವೆ. ಈ ದೇಶವನ್ನು ವಿಭಜಿಸಿದರು.

‘ಈ ಜಿನ್ನಾ ಯಾರು? ಷಿಯಾ ಮುಸ್ಲಿಮನಾಗಿ ಹುಟ್ಟಿದ ಈ ಜಿನ್ನಾ ಹಂದಿ ಮಾಂಸ ತಿನ್ನುತ್ತಿದ್ದ, ಶರಾಬು ಕುಡಿಯುತ್ತಿದ್ದ. ಇವನು ಭಾರತದ ಮುಸ್ಲಿಮರ ಪ್ರತಿನಿಧಿಯಾದ. ಇವನನ್ನು ಹತ್ತಿರದಿಂದ ಬಲ್ಲ ಮುಲ್ಕ್ ರಾಜ್ ಆನಂದ್ ಹೇಳುತ್ತಾರೆ, ಜಿನ್ನಾ ಕುರಾನ್ ಓದಿಲ್ಲ, ಕುರಾನ್ ಬಗ್ಗೆ ತಿಳಿದವನಲ್ಲ. ಶ್ರೀಮಂತನಾದ ಈತ ಥೇಟ್ ದೊಡ್ಡ ಇಂಗ್ಲಿಷ್ ಮನುಷ್ಯನಂತೆ ಬದುಕಿದ. ದೊಡ್ಡ ವಕೀಲನಾಗಿ ಬ್ರಿಟೀಷರನ್ನು ಎಲ್ಲ ರೀತಿಯಲ್ಲೂ ಅನುಕರಿಸಿದ ದೌಲತ್ತಿನ ವ್ಯಕ್ತಿ. ಭಾರತದ ಬಡ ಮುಸ್ಲಿಮರ ಪ್ರತಿನಿಧಿಯನ್ನಾಗಿ ಇವನನ್ನು ಮಾಡಿದ ಬ್ರಿಟೀಷರು ಬೇಕಾಬಿಟ್ಟಿ ಬಳಸಿಕೊಂಡರು. ದೇಶ ವಿಭಜನೆಯಾಯಿತು. ‘ಹಿಂದುಸ್ತಾನ್ ಹಿಂದೂಕಾಹೈ, ಕಿಸೀಕಾ ಬಾಪ್ಕಾನಹೀ, ಪಾಕಿಸ್ಥಾನ್ ಯಾ ಕಬರಸ್ಥಾನ್’ ಎಂದು ಕೂಗುವವರು ಬಂದರು. ನಮ್ಮ ನೇತಾರರು ತುಂಬ ತಪ್ಪುಗಳನ್ನು ಮಾಡಿದರು. ವಿಭಜನೆಯನ್ನು ಬೆಂಬಲಿಸಿದರು. ಖಾನ್ ಅಬ್ದುಲ್ ಗಪ್ಫಾರ್ ಖಾನ್, ಮೌಲಾನ ಅಬುಲ್ ಕಲಾಮ್ ಆಝಾದ್ರವರ ಮಾತುಗಳನ್ನು ಯಾರೂ ಕೇಳಲಿಲ್ಲ. ಈಗ ಎಲ್ಲವನ್ನೂ ಕಳೆದುಕೊಂಡು ತಪ್ಪಿತಸ್ಥರಂತೆ ನಾವು ಬದುಕಬೇಕಾಗಿ ಬಂದಿದೆ. ಇತಿಹಾಸದಲ್ಲಿ ಕೆಲವರು ಬರೆದ ಸುಳ್ಳು ಬೊಗಳೆಗಳನ್ನು ನಮ್ಮ ಮಕ್ಕಳು ಓದಬೇಕಾಗಿಬಂತು. ಮುಸ್ಲಿಮ್ ದ್ವೇಷ ಬೆಳೆಯಿತು. ನಾನು ಈ ದೇಶದ ಬಹಳಷ್ಟು ಹಳ್ಳಿ ಪಟ್ಟಣಗಳಲ್ಲಿ ಸಂಚರಿಸಿದ್ದೇನೆ. ಭಾರತದ ಬಡಕಲು ದನಗಳು ಎಷ್ಟೊಂದು ಹಿಂಸೆ, ಕೊಲೆಗಳಿಗೆ ಕಾರಣವಾಗಿದೆ! ಈ ದೇಶದಲ್ಲಿ ಎಂಟುನೂರು ವರ್ಷಗಳಿಗೂ ಹಿಂದಿನ ದೇವಸ್ಥಾನಗಳಿವೆ. ಸಹಸ್ರ ವರ್ಷಗಳಿಗೂ ಹಿಂದಿನವು ಇವೆ. ಮುಸ್ಲಿಮ್ ಅರಸರು ಇವನ್ನು ಉಳಿಸಿದ್ದು ಯಾವ ಕಾರಣಕ್ಕಾಗಿ? ಸೋಮನಾಥ ದೇವಾಲಯ ನಾಶವಾದದ್ದು ಯುದ್ಧದಲ್ಲಿ, ಹಣಕ್ಕಾಗಿ, ಸಂಪತ್ತಿಗಾಗಿ, ಮತ ಧರ್ಮಗಳ ಸಂಬಂಧದಲ್ಲಿ ಅಲ್ಲ. ನಿಜಾಮನ ಹೈದರಾಬಾದಿನಲ್ಲಿ, ಟಿಪ್ಪು, ಔರಂಗಜೇಬನ ಕಾಲದಲ್ಲೂ ದೇವಸ್ಥಾನಗಳು ನಾಶವಾಗಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಆಗಿರಬಹುದು. ನಿನ್ನೆ ಮೊನ್ನೆಯ ತನಕ ದೀರ್ಘಕಾಲದವರೆಗೆ ನಡೆದ ಇರಾನ್-ಇರಾಕ್ ಯುದ್ಧದಲ್ಲಿ ನೂರಾರು ಮಸೀದಿಗಳು ಧ್ವಂಸವಾಗಿವೆಯಲ್ಲಾ?’
ಬಷೀರ್ ಹೀಗೆಲ್ಲಾ ಎನ್ನುತ್ತಿರುವಾಗ ಇವೆಲ್ಲವೂ ಉಲ್ಲೇಖಗೊಂಡ ಬೃಹತ್ ಕಾದಂಬರಿ ಬರುತ್ತಿದ್ದರೆ! ಮೋಹನ್ ವರ್ಮಾರವರು ಹೇಳಿದ ಟಾಲ್ಸ್ ಟಾಯ್ ರವರ ‘ವಾರ್ ಆಂಡ್ ಪೀಸ್’ ಕಾದಂಬರಿಯ ಸಾಲಿಗೆ ನಿಲ್ಲುವಂತಹ ಮಹತ್ವ ಪೂರ್ಣಕೃತಿಯೊಂದು ಮಳಯಾಳಂನಲ್ಲಿ ಬರುತ್ತಿತ್ತೇನೋ ಅನ್ನಿಸಿತು.

‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’. ಎಂದರು.

ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ ಎಂದೆ.

ಈ ಜಗತ್ತಿನಲ್ಲಿ ಸಾಧಾರಣ ಆರುನೂರು ವರ್ಷಗಳ ಕಾಲ ಇಸ್ಲಾಮ್ ಪ್ರಬಲವಾಗಿತ್ತು. ಬಹಳಷ್ಟು ದೇಶಗಳಲ್ಲಿ ಮುಸ್ಲಿಮರ ಆಳ್ವಿಕೆ ಇತ್ತು. ಬಹಳಷ್ಟು ಮುಸ್ಲಿಮ್ ಅರಸರು ಭಾರತವನ್ನು ಆಳಿದರು. ಮತ್ತೆ ಎಲ್ಲ ವೈಭವವನ್ನು ಕಳೆದುಕೊಂಡರು. ಈಗ ಪವರಿಲ್ಲ. ಈಗ ಭಾರತದ ಮುಸ್ಲಿಮರು ಅನಾಥರಾಗಿದ್ದೇವೆಂದುಕೊಂಡಿದ್ದಾರೆ. ಬ್ರಿಟೀಷರು ಬಂದರು. ಮುಸ್ಲಿಮರಲ್ಲಿ ಕೆಲವರು ಅವರನ್ನು ಓಲೈಸಿಕೊಂಡರು. ಸುಮಾರು ನೂರು ವರ್ಷಗಳಷ್ಟು ಕಾಲ ಮುಸ್ಲಿಮರ ಆಳ್ವಿಕೆಯ ಒಳಗಾಗಿದ್ದ ಭಾರತದಲ್ಲಿ, ಕೂಡ ಹಿಂದೂಗಳೇ ಬಹುಸಂಖ್ಯಾತರಾಗಿದ್ದರು. ಈಗಲೂ ಕೂಡ ಹಿಂದುಗಳೇ ಬಹುಸಂಖ್ಯಾತರು. ಭಾರತದಲ್ಲಿ ಮುಸ್ಲಿಮರ ಬಗ್ಗೆ ಬಹಳಷ್ಟು ಕೆಟ್ಟ ಪ್ರಚಾರಗಳಾಗಿವೆ.

‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.
‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

(ಅನುರಾಗದ ದಿನಗಳು- ಇನ್ನೊಂದು ಕಾದಂಬರಿ)

‘ಇತಿಹಾಸದ ತಪ್ಪು ವ್ಯಾಖ್ಯಾನದಿಂದಾಗಿ ಈಗಿನ ಮುಸ್ಲಿಮ್ ಯುವಕರಲ್ಲಿ ಕೀಳು ಪ್ರಜ್ಞೆ ಕಾಡುತ್ತಿದೆ. ನಮ್ಮಂತಹ ಬರಹಗಾರರಿಗೂ ಇದು ಅನ್ವಯಿಸುತ್ತದೆ. ಬರಹಗಾರರು ತಮಗೆ ಸರಿಯಾದ ಅವಕಾಶ, ಬೆಂಬಲದಿಂದ ವಂಚಿತರಾಗಿದ್ದೇವೆನ್ನುತ್ತಿದ್ದಾರೆ’. ಎಂದೆ ನಾನು.

‘ಕೀಳು ಪ್ರಜ್ಞೆ ಯಾಕಿರಬೇಕು? ಬರಹಗಾರನಂತೂ ಕೀಳು ಪ್ರಜ್ಞೆ ಇಟ್ಟುಕೊಳ್ಳಬೇಕಾಗಿಲ್ಲ. ನನ್ನ ಕೃತಿಗಳೆಲ್ಲ ಹೆಚ್ಚು ಮಾರಾಟವಾಗುತ್ತಿರುವುದು ಹಿಂದುಗಳಿಗೆ. ಹಿಂದುಗಳು ಹೆಚ್ಚಾಗಿ ನನ್ನ ಕೃತಿಗಳನ್ನು ಕೊಂಡು ಓದುತ್ತಿದ್ದಾರೆ. ಮುಸ್ಲಿಮರು ಪುಸ್ತಕ ಖರೀದಿಸುವವರು ಕಮ್ಮಿ. ಶ್ರೀಮಂತ ಮುಸ್ಲಿಮ್ ವಿದ್ಯಾವಂತನಾಗಿಲ್ಲ. ವಿದ್ಯೆ ಇರುವ ಶ್ರೀಮಂತನಿಗೆ ಓದುವ ಅಭ್ಯಾಸ ಇರುವುದಿಲ್ಲ. ಸಂಖ್ಯೆಯಲ್ಲಿ ಹೆಚ್ಚಿರುವ ಮುಸ್ಲಿಮರು ಇಲ್ಲಿ ಓದು ಬರಹ ಬಲ್ಲವರಾದರೂ ಹಣದ ಅಡಚಣೆಯಿಂದ ಪುಸ್ತಕಗಳನ್ನು ಖರೀದಿಸುವ ಶಕ್ತಿ ಉಳ್ಳವರಲ್ಲ. ಹಿಂದೆ ನನಗೆ ಹಣ ಕಮ್ಮಿ ಸಿಗ್ತಾ ಇತ್ತು. ಈಗ ಗೌರವಧನ ಒಂದು ಕತೆಗೆ ಸಾವಿರ ರೂಪಾಯಿಯಷ್ಟು ಕೊಡುವವರಿದ್ದಾರೆ. ಪುಸ್ತಕಗಳಿಗೆ ಒಳ್ಳೆಯ ರಾಯಲ್ಟಿ ಕೊಡುತ್ತಾರೆ. ಈಗ ಕೇರಳದಲ್ಲಿ ಬರೆದು ಬದುಕುತ್ತಿರುವವನು ಬಹುಶಃ ನಾನೊಬ್ಬನೇ’ ಎನ್ನುತ್ತಾ ನನ್ನ ಬೆನ್ನು ತಟ್ಟಿ ಎಚ್ಚರಿಸಿದರು.

ಈ ಮಧ್ಯೆ ಮಗಳನ್ನು ಕೂಗಿ ಕರೆದು, ‘ಮನೆಯಲ್ಲಿ ತಿನ್ನಲಿಕ್ಕೆ ಏನಿದೆ’ ಎಂದು ಕೇಳಿದರು. ಅವಳೇನೊ ನನಗೆ ಕೇಳದಂತೆ ತಂದೆಯೊಂದಿಗೆ ಗುಟ್ಟು ಹೇಳಿದಳು. ಮಗನನ್ನು ಕೂಗಿ ಕರೆದು ಬ್ರೆಡ್ಡು ಮೊಟ್ಟೆ ತರಲು ಹೇಳಿದರು. ಹತ್ತು ರೂಪಾಯಿಯ ನೋಟೊಂದನ್ನು ಅವನ ಕೈಗೆ ಕೊಡುತ್ತಾ ಚಿಲ್ಲರೆ ತಂದುಕೊಡಬೇಕು ಎಂದು ಎಚ್ಚರಿಸಿದರು. ಹುಡುಗ ಓಡಿದ.

‘ಹೊಸತೇನಾದರೂ ಬರೆದಿದ್ದೀರಾ?’ ಎಂದು ಕೇಳಿದೆ.

‘ಅನಾರೋಗ್ಯದಿಂದ ಬರೆಯಲು ಆಗುತ್ತಿಲ್ಲ. ಮಾತೃಭೂಮಿಗಾಗಿ ಒಂದೆರಡು ಹಾಸ್ಯ ಲೇಖನಗಳನ್ನು ಬರೆದು ಕೊಟ್ಟಿದ್ದೆ’ ಎಂದರು.

ಬಷೀರ್ ಎಂಬ ಭೇಪುರ್ ಸುಲ್ತಾನನಿಗೆ ಆರ್ಥಿಕ ಅಡಚಣೆ ಖಂಡಿತಾ ಇದ್ದಿರಬೇಕು. ಬರೆದರಲ್ಲವೇ ಬದುಕುವುದು ಸಾಧ್ಯ! ತಡವಾಗಿ ಮದುವೆಯಾದ್ದರಿಂದ ಮಕ್ಕಳು ಸಣ್ಣ ಪ್ರಾಯದವರು. ಆರ್ಥಿಕ ಮುಗ್ಗಟ್ಟೆಂದರೆ ನನಗೊಂದು ರೀತಿಯ ಭಯ. ಮಧ್ಯಮ ವರ್ಗದ ಮನೆಯಲ್ಲಿ ಹುಟ್ಟಿದ ನನಗೆ ಆರ್ಥಿಕ ಮುಗ್ಗಟ್ಟು ಸಹಿಸಿಕೊಳ್ಳುವುದು, ಅದನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಪಡುವ ಸಂಕಟ ಅನುಭವಿಸಿದ ನೆನಪೇ ನನಗೆ ಭಯಹುಟ್ಟಿಸುತ್ತದೆ. ನನ್ನ ಎದೆಯಲ್ಲಿ ಒಂದು ನೋವಿನ ಎಳೆ ಮೂಡಿತು.

‘ಕರ್ನಾಟಕದ ಹಳ್ಳಿ ಹಳ್ಳಿಗಳನ್ನೂ ನೋಡಿದ್ದೇನೆ. ಪಟ್ಟಣಗಳನ್ನೂ ಸುತ್ತಿದ್ದೇನೆ. ಆಗ ಒಂದೆರೆಡು ಕನ್ನಡ ಶಬ್ಧಗಳನ್ನು ಕಲಿತಿದ್ದೆ. ಬೆಂಗಳೂರಿನಲ್ಲಿ ಛತ್ರದಲ್ಲಿ ತಂಗಿದ್ದೆ. ಒಮ್ಮೆ ಅಲ್ಲಿ ಒಬ್ಬನನ್ನು ಕರೆದು ದೂದ್, ಮಿಲ್ಕ್ ಬೇಕು ತಾ ಎಂದೆ. ಅವನಿಗೆ ಗೊತ್ತಾಗಲಿಲ್ಲ. ನನ್ನ ಗೆಳೆಯ ದನದ ಚಿತ್ರ ಬಿಡಿಸಿ ಕೆಚ್ಚಲಿನ ಚಿತ್ರ ಬಿಡಿಸಿ ಕರೆಯುವಂತೆ ಅಭಿನಯಿಸಿದ. ಕೂಡಲೇ ಅವನು ‘ಹಾಲು’ ಎಂದ. ನನಗೆ ನಾಚಿಕೆಯಾಯಿತು. ಮಳಯಾಳಂನಲ್ಲಿ ‘ಪಾಲ್’ ಎಂದಿದ್ದರೆ ಅವನಿಗೆ ಅರ್ಥವಾಗುತ್ತಿತ್ತು. ಆಗ ಮಿರ್ಜಾ ಇಸ್ಮಾಯಿಲ್ ಇದ್ದರು. ಸರ್ ವಿಶ್ವೇಶ್ವರಯ್ಯ ಇದ್ದರು. ಅಲ್ಲಿಗೆ ಹೋದಾಗಲೆಲ್ಲ ನಾನು ಅವರ ಅಥಿತಿಯಾಗಿರುತ್ತಿದ್ದೆ. ಬರಹಗಾರರಲ್ಲಿ ನನಗೆ ಶ್ರೀಕೃಷ್ಣ ಆಲನಹಳ್ಳಿ ಗೊತ್ತು, ಯು.ಆರ್. ಅನಂತ ಮೂರ್ತಿ ಗೊತ್ತು’ ಎಂದು ಕರ್ನಾಟಕದ ಬಗ್ಗೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು.

‘ನಿಮ್ಮ ‘ಪಾತುಮ್ಮನ ಆಡು’ (೧೯೫೯) ಕತೆಗೆ ಹಿನ್ನೆಲೆ ಏನು?’ ಎಂದೆ.

‘ಹಿನ್ನೆಲೆಯೋ? ಅದು ನನ್ನದೇ ಕತೆ. ಪಾತುಮ್ಮ ನನ್ನ ತಂಗಿ. ಈಗಲೂ ಇದ್ದಾಳವಳು. ಮೊನ್ನೆ ತಾನೆ ಅವಳಿಗೆ ಸ್ವಲ್ಪ ಹಣ ಕಳುಹಿಸಿದ್ದೆ. ಅವಳ ಮಗಳ ಮದುವೆಗೆಂತ. ನಾವು ಹಿಂದೆ ಬಹಳ ಶ್ರೀಮಂತ ಮನೆತನದವರು. ಕೊಟ್ಟಾಯಂನ ವೈಕಂ ಸಮೀಪದ ತಲಯೋಲ ಪರಂಬು ನದಿಯ ದಡದಲ್ಲಿ ನಮ್ಮ ಮನೆತನಕ್ಕೆ ಸೇರಿದ ಹತ್ತು ಎಕ್ರೆ ಫಲವತ್ತಾದ ತೋಟವಿತ್ತು. ನನ್ನ ತಂದೆ ಅಬ್ದುಲ್ ರಹ್ಮಾನ್ ರವರು ಒಂದು ಸಣ್ಣ ವೈಮನಸ್ಸಿನ ಕಾರಣಕ್ಕೆ ಅವನ್ನೆಲ್ಲ ಬಿಟ್ಟು ನದಿಯ ಇನ್ನೊಂದು ದಡಕ್ಕೆ ಹೋಗಿ ಮನೆ ಮಾಡಿದರು. ನಂತರ ಮಾಡಿದ ಯಾವ ವ್ಯಾಪಾರದಲ್ಲೂ ಅವರಿಗೆ ಕೂಡಿಬರಲಿಲ್ಲ. ದಿವಾಳಿಯಾದರು. ಆಗಲೇ ಈ ಕತೆ ಹುಟ್ಟಿಕೊಂಡದ್ದು.’

‘ನಿಮಗೆ ಒಲಿದ ಈ ಒಂದು ವಿಶಿಷ್ಟ ಶೈಲಿಯನ್ನು ನೀವು ಹೇಗೆ ಕಂಡುಕೊಂಡಿರಿ?’ ಎಂದು ಕೇಳಿದೆ.

‘ಶೈಲಿ ಹೀಗೆಯೇ ಬಂತು. ನಾನು ನಮ್ಮ ಮನೆಯವರ ಬಗ್ಗೆ, ನನ್ನ ಬಗ್ಗೆ ಬರೆಯತೊಡಗಿದಾಗ ಈ ಶೈಲಿ ತನ್ನಿಂದ ತಾನೇ ಬಂತು. ಹಿಂದೆ ನಾನು ಬಹಳ ವಿಚಿತ್ರ ಸ್ವಭಾವದ ಮನುಷ್ಯನಾಗಿದ್ದೆ. ಮೂರು ವರ್ಷ ಹಿಂದೂ ಸನ್ಯಾಸಿಗಳೊಂದಿಗೆ ಇದ್ದೆ. ಆಗ ಇನ್ನೊಬ್ಬರನ್ನು ಮುಟ್ಟಿದರೆ ನನಗೆ ಅಸಹ್ಯವಾಗುತ್ತಿತ್ತು. ಇನ್ನೊಬ್ಬರು ಅಡುಗೆ ಮಾಡಿದ್ದು ತಿನ್ನಲೂ ಅಸಹ್ಯ. ಬೇರೆಯವರ ವಸ್ತುಗಳೂ ಅಸಹ್ಯ. ಬೇರೆಯವರು ಬರೆದದ್ದನ್ನು ಓದಲೂ ಅಸಹ್ಯ. ಈಗ ಅದನ್ನೆಲ್ಲ ನೆನೆದಾಗ ನಗೆ ಬರುತ್ತದೆ. ನಂತರ ಮದುವೆಯಾದೆ. ಈಗಲೂ ನನ್ನ ಮಗ ನನ್ನ ಜೊತೆಯಲ್ಲೇ ಮಲಗುತ್ತಾನೆ. ವಿಚಿತ್ರ ಕಪೋಲ ಕಲ್ಪಿತ ವಿಚಾರಗಳು, ಧರ್ಮ, ದೇವರು ಜಗತ್ತಿನ ಬಗ್ಗೆ ಏನೇನೋ ವಿಚಾರಗಳು ಆಗ ನನ್ನನ್ನು ಕಾಡುತ್ತಿತ್ತು. ಆಗಿನ ಮಳಯಾಳಂ ಸಾಹಿತ್ಯವನ್ನು ನಾನು ಓದಿಯೇ ಇರಲಿಲ್ಲ.’ … ಎಂದು ಬಾಯಿ ತುಂಬ ನಕ್ಕರು.

‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

‘ಇದರಿಂದಾಗಿ ಹೊಸ ಶೈಲಿಯ ಬರವಣಿಗೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತೇನೋ?’ ಎಂದೆ.

ಮಗ ಬ್ರೆಡ್ ಮೊಟ್ಟೆಯನ್ನು ಅಂಗಡಿಯಿಂದ ತಂದು ತಾಯಿಯ ಕೈಗೆ ಕೊಟ್ಟು ಚಿಲ್ಲರೆ ಉಳಿದ ಹಣವನ್ನು ತಂದೆಗೆ ಹಿಂತಿರುಗಿಸಿದ. ಸರಿ ಲೆಕ್ಕ ಶುರುವಾಯಿತು. ಮಗ ಲೆಕ್ಕ ಮಾಡಿದ. ‘ಒಂದುರೂಪಾಯಿ ಜಾಸ್ತಿಯೇ ನಿಮ್ಮ ಕೈಗೆ ಕೊಟ್ಟಿದ್ದೇನೆ. ಹಿಂದಕ್ಕೆ ಕೊಡಿ’ ಎಂದ. ಪುಟ್ಟ ಪ್ರೀತಿಯ ಜಗಳ ಶುರು. ‘ಈ ಒಂದು ರೂಪಾಯಿ ಎಲ್ಲಿಂದ ಬಂದದ್ದು?’ ಎನ್ನೂದು ಬಶೀರರ ಪ್ರಶ್ನೆ. ‘ಅದು ನನ್ನ ಜೇಬಲ್ಲಿ ಹಿಂದೆಯೇ ಇತ್ತು’. ಎನ್ನುವುದು ಮಗನ ಉತ್ತರ. ‘ಓಹೋ ಈ ನಿನ್ನ ಹಣದ ಲೆಕ್ಕಾಚಾರವೆಲ್ಲ ಸರಿಯಾಗಿಯೇ ಇರುತ್ತದೆ.’ ಎಂದು ಅಪ್ಪನ ಗೊಣಗಾಟ. ಹೂಂ… ಹಾಂ.. ದಲ್ಲಿ ಎಲ್ಲ ಮುಕ್ತಾಯಗೊಂಡಿತು. ಒಂದು ರೂಪಾಯಿಯ ಪಾವಲಿ ಆಚೆಯೇ ಹೋಗಿರಬೇಕು. ಮಗ ಓಡಿದ. ಇವರ ತಮಾಷೆ, ನಗೆ, ಪ್ರೀತಿ ತುಂಬಿದ ಬದುಕು ಹೀಗಿರುವುದರಿಂದಲೇ ಇರಬೇಕು ‘ಭೇಪುರದ ಸುಲ್ತಾನ’ ಎನ್ನಿಸಿಕೊಂಡದ್ದು. ಏನೇನೂ ನಡೆದಿಲ್ಲವೆಂಬಂತೆ ಮಾತು ಮುಂದುವರಿಸಿದರು.

(ಬಷೀರ್ ಬರೆದ ನೆನಪುಗಳ ಪುಸ್ತಕ)

‘ನಾನು ಪ್ರಕೃತಿಯ ನಡುವೆ ಇರಬಯಸುವ ವಿಚಿತ್ರವಾದ ಮನುಷ್ಯ. ನನಗೆ ಹಿಂದೆ ಒಂದು ವಿಚಿತ್ರವಾದ ಸನ್ನಿವೇಶ ಎದುರಾಗಿತ್ತು. ನಾನು ಇದನ್ನು ಇನ್ನೂ ಬರೆಯಬೇಕಾಗಿದೆ. ನನ್ನೊಳಗೇ ಇದೆ. ನೀವು ‘ಅಹಂ ಬ್ರಹ್ಮಾಸ್ಮಿ’ ಎಂಬ ಮಂತ್ರವನ್ನು ಕೇಳಿರಬಹುದು. ಬ್ರಹ್ಮ ಅಂದರೆ ತ್ರಿಮೂರ್ತಿಯಲ್ಲೊಬ್ಬನಾದ ಬ್ರಹ್ಮನಲ್ಲ. ಇವನು ಆದಿ ಬ್ರಹ್ಮ, ಆಕಾರವಿಲ್ಲದ ಅಂದರೆ ನಿರಾಕಾರ ಬ್ರಹ್ಮ. ‘ಅನಲ್ ಹಕ್’ ಅನ್ನೂದೂ ಇದೇ. ನನ್ನ ಹೃದಯದಲ್ಲಿ ದೇವರಿದ್ದಾನೆನ್ನುವ ವಿಶ್ವಾಸ. ಅಂದರೆ ನಾನೇ ದೇವರು ಎನ್ನುವ ವಿಶ್ವಾಸ. ನಾನು ಹೆಚ್ಚು ಕಮ್ಮಿ ಮೂವತ್ತು ವರ್ಷಗಳ ಕಾಲ ಇದನ್ನು ಜಪ ಮಾಡುತ್ತಲಿದ್ದೆ. ಆಗ ನನ್ನ ಮನಸ್ಸು ಒಂದು ಸ್ತಿಮಿತದಲ್ಲಿರಲಿಲ್ಲ. ಒಬ್ಬನೇ ಕೂತಿದ್ದೆ. ಇದೇ ಮನೆಯಲ್ಲಿ ನಾನೀಗ ಕೂತಿರುವ ಕುರ್ಚಿಯಲ್ಲಿ ಕೂತಿದ್ದಂತೆಯೇ ನನ್ನ ಮುಂದೆ ಮೂವರು ವ್ಯಕ್ತಿಗಳು ಬಂದರು. ಹಳೆಯ ಕಾಲದ ವಸ್ತ್ರವನ್ನು ತೊಟ್ಟಿದ್ದರು. ತಲೆಗೆ ವಸ್ತ್ರವನ್ನು ಸುತ್ತಿಕೊಂಡಿದ್ದರು. ಅವರನ್ನು ನೋಡಿದಾಗ ಅವರು ನನಗೆ ಎಷ್ಟೋ ಕಾಲದಿಂದ ಪರಿಚಿತರು ಎನಿಸಿತು. ಅವರು ಬಂದು ನನ್ನ ಮುಂದೆ ನೆಲದಲ್ಲಿ ಕೂತರು. ಬಂದವರು ನೆಲದ ಮೇಲೆ ಕೂತಿರುವಾಗ ನಾನು ಕುರ್ಚಿಯ ಮೇಲೆ ಕೂತಿರುವುದು ಸರಿಯೇ? ನಾನುಕೂಡ ಅವರಜೊತೆ ಕೂತು ನಾಲ್ಕನೆಯವನಾದೆ. ‘ಏನಿದು ನೀನು ಹೇಳುತ್ತಿರುವುದು?’ ಎಂದು ಕೇಳಿದರು. ನಾನು ‘ಅನಲ್ ಹಕ್’ ಎಂದೆ. ‘ಅದು ಹೇಗೆ ನೀನು ಸೃಷ್ಟಿ ಕರ್ತನಾಗುವುದು? ಈ ಜಗತ್ತಿನ ಪ್ರಾಣಿ ಪಕ್ಷಿಗಳೆಲ್ಲ ತಾವೇ ಸೃಷ್ಟಿಕರ್ತನೆಂದು ತಿಳಿದುಕೊಂಡರೆ ಹೇಗೆ ಸಾಧ್ಯ?’ ಎಂದು ಸಾಧಾರಣ ಒಂದೂವರೆ ಗಂಟೆಗಳ ಕಾಲ ನನ್ನೊಂದಿಗೆ ಚರ್ಚೆ ನಡೆಸಿದರು. ‘ನಾವೆಲ್ಲ ಸೃಷ್ಟಿಗಳು. ಸೃಷ್ಟಿಕರ್ತರಲ್ಲ. ನೀನು ಬರೀ ಸೃಷ್ಟಿ ಮಾತ್ರ.’ ಎಂದು ಹೇಳಿ ಮೂವರೂ ಎದ್ದು ಹೋದರು. ಇದನ್ನು ಈಗ ಹೇಳಿದರೆ ಯಾರೂ ನಂಬಲಿಕ್ಕಿಲ್ಲ. ಆದರೆ ಇದು ನಡೆದದ್ದೇ’ ಎಂದರು ಬಶೀರ್.

‘ಸೂಫಿ ಸಂತರು ನಮ್ಮ ಕಡೆಯಲ್ಲಿ ಮುಸ್ಲಿಮರ ಮೇಲೆ ಪ್ರಭಾವ ಬೀರಿದಷ್ಟು ನಿಮ್ಮಲ್ಲಿ ಕಾಣಿಸುತ್ತಿಲ್ಲವಲ್ಲಾ?’ ಎಂದೆ.

‘ಇಲ್ಲ, ಇಲ್ಲಿಯೂ ಇದೆ. ಸೂಫಿಗಳು ಹಿಂದೂ ಮುಸ್ಲಿಮ್ ಸಾಮರಸ್ಯಕ್ಕೆ ಪ್ರಯತ್ನಿಸಿದರು. ಅವರು ಆಶಿಕ್-ಮಾಶೂಕ್ ಸಂಬಂಧವನ್ನು ನಂಬುವವರು. ಅಂದರೆ ದೇವರೊಂದಿಗೆ ಪ್ರೇಮಿ-ಪ್ರೇಮಿಕೆಯ ಸಂಬಂಧವನ್ನು ನಂಬಿದವರು. ಇಂತಹ ತುಂಬ ರೀತಿಯ ವೈಶಿಷ್ಟ್ಯ ಅವರಲ್ಲಿ ಇದೆ. ಇವರಿಂದಾಗಿ ಹಿಂದೂ ಮುಸ್ಲಿಮ್ ಬಾಂಧವ್ಯ ಬೆಳೆಯುವುದು ಉತ್ತರ ಭಾರತದಲ್ಲಿ ಸಾಧ್ಯವಾಯಿತು. ಆದರೆ ದಕ್ಷಿಣ ಭಾರದಲ್ಲಿ ಬರೀ ಸಂತರ ಗೋರಿಗಳನ್ನು ಆರಾಧಿಸುವುದಕ್ಕೆ ಮಾತ್ರ ಸೂಫಿ ಸಂತರ ಪ್ರಭಾವ ಸೀಮಿತಗೊಂಡಿತು’ ಎಂದರು ಬಶೀರ್.

ನಾನು ಇತ್ತೀಚೆಗೆ ಗುಲ್ಬರ್ಗಾಕ್ಕೆ ಹೋದಾಗ ಅಲ್ಲಿನ ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಗೇಸುದಿರಾಜ್ ದರ್ಗಾಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿನ ಕೆಲವು ಪೂಜಾ ವಿಧಾನಗಳು ಮೂಲತಹ ಮುಸ್ಲಿಮ್ ಶೈಲಿಯಲ್ಲಿದ್ದರೂ, ಹೆಚ್ಚು ಹಿಂದೂ ಪೂಜಾ ವಿಧಾನಕ್ಕೆ ಹೋಲುತ್ತಿತ್ತು. ಮಸೀದಿಯಲ್ಲಿ, ದರ್ಗಾದೊಳಗೆ ಹಿಂದೂಗಳು ಮುಸ್ಲಿಮರು ಅಸ್ಪೃಶ್ಯರು ಎಲ್ಲ ಬಗೆಯ ಜನಗಳೂ ಕೂತು ಅರಾಧಿಸಿ ಬರಬಹುದಾದ ವಾತಾವರಣವಿದೆ. ಒಳಗೆ ಮಸೀದಿಯಲ್ಲಿ ಹತ್ತಾರು ಹಳ್ಳಿಯ ಹಿಂದು ಗಂಡಸರು ಕೂತು ಅಲ್ಲಿನ ಶಾಂತ ವಾತಾವರಣವನ್ನು ಸವಿಯುತ್ತಿರುವ ದೃಶ್ಯ ಕಂಡಾಗಲಂತೂ ನನ್ನ ಮನಸ್ಸು ತುಂಬಿ ಬಂದಿತ್ತು. ದರ್ಗಾಕ್ಕೆ ಸಂಬಂಧಿಸಿದ ಓರ್ವ ವ್ಯಕ್ತಿಯೊಂದಿಗೆ ಮಾತಾಡಿದ್ದೆ.

‘ಒಬ್ಬ ಯಕಶ್ಚಿತ್ ಮನುಷ್ಯನನ್ನು ಹೀಗೆ ಪೂಜಿಸುವುದು ತಪ್ಪಲ್ಲವೇ? ಅಡ್ಡಬೀಳುವುದು, ನಮಸ್ಕರಿಸುವುದು, ಸುತ್ತು ಬರುವುದು ಇಸ್ಲಾಮಿನಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲವಲ್ಲಾ?’ ಎಂದು ನಾನು ಕೇಳಿದ್ದೆ. ಅದಕ್ಕೆ ಸ್ವಲ್ಪವೂ ರೇಗದೆ ಆ ವ್ಯಕ್ತಿ, ‘ನಾವು ದೇವರಿಗೆ ಹತ್ತಿರವಾದ ಸಂತನ ಮೂಲಕ ಪ್ರಾರ್ಥಿಸುತ್ತೇವೆ. ನಿಜಕ್ಕೂ ನಾವು ಅವನ ಗೋರಿಗೆ ನಮಸ್ಕರಿಸುತ್ತಿಲ್ಲ, ನಾವು ಸಂತನ ಮೂಲಕ ಅಲ್ಲಾಹನಿಗೆ ನಮಸ್ಕರಿಸುತ್ತೇವೆ.’ ಎನ್ನುತ್ತಾ ಕೆಲವು ಪುಸ್ತಕಗಳನ್ನು ನನಗಾಗಿ ಓದಲು ಕೊಟ್ಟಿದ್ದ.

ಬಶೀರ್ ಯಾಕೋ ತನ್ನ ಮಗನನ್ನು ಕೂಗಿ ಕರೆದರು. ಉತ್ತರವಿಲ್ಲ. ಮತ್ತೊಮ್ಮೆ ಕೂಗಿದರು. ‘ಓ’ ಎಂದ ಮಗ. ‘ಸುಮ್ಮನೆ ಅಲ್ಲಿ ಮಾತಾಡುತ್ತ ಕೂತಿರಿ. ಕೂಗಬೇಡಿ’ ಎಂದು ಗಟ್ಟಿಯಾಗೇ ಅವನು ಗೊಣಗಿದ. ‘ನಮ್ಮಲ್ಲಿ ತಾಳ್ಮೆ ಕಮ್ಮಿಯಾಗ್ತಾ ಇದೆ ಎನ್ನುವುದನ್ನು ಮೊದಲು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಮಾತುಗಳನ್ನು ಎಂದು ಕೂಡ ಜನರು ಒಮ್ಮೆಲೇ ಬೇಗನೆ ಒಪ್ಪಿಕೊಳ್ಳಲಾರರು. ಎಷ್ಟು ವಿಧದ ಜನರಿರುತ್ತಾರೆ! ಕೆಲವನ್ನು ತಿನ್ನುತ್ತೇವೆ, ಕೆಲವನ್ನು ತಿನ್ನುವುದಿಲ್ಲ. ಕೆಲವನ್ನು ಮುಟ್ಟುತ್ತೇವೆ, ಕೆಲವನ್ನು ಮುಟ್ಟುವುದಿಲ್ಲ. ನಾವು ತಾಳ್ಮೆವಹಿಸುವುದು ಮುಖ್ಯ. ಬಲಾತ್ಕಾರದಿಂದ ನಾವು ನಂಬಿದ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವುದು ಸಾಧ್ಯವಾಗದು. ಯಾರೂ ಈ ಜಗತ್ತಿನಲ್ಲಿ ಸಂಭಾವಿತರಲ್ಲ. ಪರಿಪೂರ್ಣರಲ್ಲ. ಕೆಲವರು ಒಳ್ಳಯವರಿರುತ್ತಾರೆ. ಕೆಲವರು ಕ್ರೂರಿಗಳಿರುತ್ತಾರೆ. ನಾವು ಹೇಳುವುದು ಸುಲಭ. ಹೇಳಿದ್ದನ್ನು ಮಾಡುವುದು ಕಷ್ಟ. ಯಾವುದೇ ಸಂದರ್ಭದಲ್ಲೂ ಬರಹಗಾರರಾದ ನಾವು ಎದೆಗುಂದಕೂಡದು. ಮುಸ್ಲಿಮರು ವಿದ್ಯೆಯ ಬಗ್ಗೆ ತೋರುತ್ತಿರುವ ಅಸಡ್ಡೆಯೇ ಇದಕ್ಕೆ ಮೂಲ ಕಾರಣ. ಸರಿಯಾದ ವಿದ್ಯೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ’ ಎಂದರು.

‘ಕರ್ನಾಟಕದ ಹಳ್ಳಿ ಹಳ್ಳಿಗಳನ್ನೂ ನೋಡಿದ್ದೇನೆ. ಪಟ್ಟಣಗಳನ್ನೂ ಸುತ್ತಿದ್ದೇನೆ. ಆಗ ಒಂದೆರೆಡು ಕನ್ನಡ ಶಬ್ಧಗಳನ್ನು ಕಲಿತಿದ್ದೆ. ಬೆಂಗಳೂರಿನಲ್ಲಿ ಛತ್ರದಲ್ಲಿ ತಂಗಿದ್ದೆ. ಒಮ್ಮೆ ಅಲ್ಲಿ ಒಬ್ಬನನ್ನು ಕರೆದು ದೂದ್, ಮಿಲ್ಕ್ ಬೇಕು ತಾ ಎಂದೆ. ಅವನಿಗೆ ಗೊತ್ತಾಗಲಿಲ್ಲ. ನನ್ನ ಗೆಳೆಯ ದನದ ಚಿತ್ರ ಬಿಡಿಸಿ ಕೆಚ್ಚಲಿನ ಚಿತ್ರ ಬಿಡಿಸಿ ಕರೆಯುವಂತೆ ಅಭಿನಯಿಸಿದ. ಕೂಡಲೇ ಅವನು ‘ಹಾಲು’ ಎಂದ. ನನಗೆ ನಾಚಿಕೆಯಾಯಿತು. ಮಳಯಾಳಂನಲ್ಲಿ ‘ಪಾಲ್’ ಎಂದಿದ್ದರೆ ಅವನಿಗೆ ಅರ್ಥವಾಗುತ್ತಿತ್ತು. ಆಗ ಮಿರ್ಜಾ ಇಸ್ಮಾಯಿಲ್ ಇದ್ದರು. ಸರ್ ವಿಶ್ವೇಶ್ವರಯ್ಯ ಇದ್ದರು. ಅಲ್ಲಿಗೆ ಹೋದಾಗಲೆಲ್ಲ ನಾನು ಅವರ ಅಥಿತಿಯಾಗಿರುತ್ತಿದ್ದೆ. ಬರಹಗಾರರಲ್ಲಿ ನನಗೆ ಶ್ರೀಕೃಷ್ಣ ಆಲನಹಳ್ಳಿ ಗೊತ್ತು, ಯು.ಆರ್. ಅನಂತ ಮೂರ್ತಿ ಗೊತ್ತು’ ಎಂದು ಕರ್ನಾಟಕದ ಬಗ್ಗೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು.

(ಮಡದಿ ಫಾಬಿ ಜೊತೆಗೆ)

‘ನೀವು ಕಥೆ, ಕಾದಂಬರಿಗಳಲ್ಲದೆ ಬೇರೆ ಕೃತಿಗಳನ್ನು ರಚಿಸಿದ್ದೀರಾ?’ ಎಂದು ಬಶೀರರನ್ನು ಕೇಳಿದೆ.
‘ನಾನು ಕವನಗಳನ್ನು ಬರೆದಿದ್ದೆ. ಗದ್ಯರೂಪದ ಕವನಗಳು. ‘ಅನರ್ಘ್ಯ ನಿಮಿಷಂ’ ಎಂಬ ಕೃತಿಯು ಇಂತಾದ್ದು. ಇದರಲ್ಲಿ ‘ಅನಲ್ ಹಕ್’ ಎಂಬ ಒಂದು ಕವನ ಇದೆ.’

‘ಸಾಹಿತ್ಯದಲ್ಲಿ ಬದ್ಧತೆ ಇರಬೇಕೆನ್ನುತ್ತಾರೆ. ರಾಜಕೀಯ ಬದ್ಧತೆಯನ್ನು ನೀವು ಸಾಹಿತ್ಯದಲ್ಲಿ ಒಪ್ಪಿಕೊಳ್ಳುತ್ತೀರಾ?’ ಎಂದು ಕೇಳಿದೆ.

‘ಇಂತಹ ಬದ್ಧತೆಯ ಬಗ್ಗೆ ನನಗೆ ವಿಶ್ವಾಸವಿಲ್ಲ. ಬದುಕಿಗೆ ಬದ್ಧನಾಗಿರಬೇಕೆನ್ನುವುದು ನನ್ನ ಅಭಿಪ್ರಾಯ. ನಾನೊಬ್ಬ ಮುಸ್ಲಿಮ್ ಮನುಷ್ಯ. ನನ್ನ ಬಳಿ ನಾಸ್ತಿಕರು, ಎಡಪಂಥೀಯರು, ನಕ್ಸಲೈಟರು, ಆರೆಸ್ಸೆಸ್ಸಿನವರು, ಕಳ್ಳರು, ಕೊಲೆಗಾರರು ಎಲ್ಲರೂ ಬರುತ್ತಾರೆ.’

ಬಶೀರ್ ಅವರ ಪತ್ನಿ ಬ್ರೆಡ್ ಮತ್ತು ಮೊಟ್ಟೆ ಪಲ್ಯ ಮಾಡಿ ನಮ್ಮ ಮುಂದಿಟ್ಟರು. ತಮ್ಮ ಪತ್ನಿಗೆ ನನ್ನ ಪರಿಚಯ ಮಾಡಿಕೊಟ್ಟರು. ತಿನ್ನುತ್ತಾ ಇದ್ದಂತೆ ‘ಬಾಬು’ ಎಂದು ಕರೆದರು. ಪುಟ್ಟ ಮುದ್ದು ಮಗುವೊಂದು ಓಡುತ್ತ ಬಂತು. ಅವನಿಗೆ ಒಂದು ಚೂರು ಬ್ರೆಡ್ ತಿನ್ನಿಸಿದರು. ಈ ನಗುಮೊಗದ ಮುದ್ದು ಮಗುವನ್ನು ಕರೆದು ನನ್ನ ಬಳಿ ಕೂರಿಸಿಕೊಂಡೆ. ಬಶೀರರ ಮಗಳ ಮಗ. ಈ ಮಗು ಬರುವಾಗ ಮತ್ತೊಂದೆಡೆ ಕಾಗೆಯೊಂದು ಬಂದು ಹತ್ತಿರದ ಗಿಡದ ಮೇಲೆ ಕೂತಿತು. ಬಶೀರರನ್ನೇ ಪರಿಚಿತನೆಂಬಂತೆ ನೋಡಿತು. ‘ಏನು ತಿಂಡಿ ಬಂತೇ..? ನನಗೆಲ್ಲಿ..?’ ಎನ್ನುವಂತೆ ಅತ್ತಿತ್ತ ಕುಣಿದು ಕುಪ್ಪಳಿಸಿತು. ಚಕಚಕನೆ ಕತ್ತು ತಿರುಗಿಸುತ್ತ ವಯ್ಯಾರ ಮಾಡಿತು.

ನನಗೆ ‘ಪಾತುಮ್ಮನ ಆಡು’ ಕಾದಂಬರಿಯಲ್ಲಿ ಬರುವ ಕಾಗೆಯ ನೆನಪಾಯಿತು. ಆ ಕಾದಂಬರಿಯಲ್ಲಿ ಹೀಗೆ ಬರುತ್ತದೆ. ‘ಪಾತುಮ್ಮಳ ಆಡಿನ ಬೆನ್ನಿನ ಮೇಲೆ ಒಂದು ಕಾಗೆ ಕುಳಿತಿತ್ತು. ಕಾಗೆಯನ್ನೂ ಹೊತ್ತುಕೊಂಡು ಆಡು ನನ್ನ ಮುಂದೆ ಬಂತು. ‘ಕಂಡ ನೆನಪೇ ಇಲ್ಲವಲ್ಲಾ’ ಎನ್ನುವ ರೀತಿಯಲ್ಲಿ ಕಾಗೆ ನನ್ನನ್ನೊಮ್ಮೆ ಕತ್ತು ಬಗ್ಗಿಸಿ ನೋಡಿತು. ನನ್ನ ಮುಂದಿದ್ದ ಸಿಮೆಂಟ್ ಜಗಲಿಯ ಮೇಲೆ ಸುಮಾರು ಕೋಳಿಗಳು ಏನನ್ನೊ ಕೊಕ್ಕಿನಿಂದ ಕುಕ್ಕಿ ಆರಿಸಿಕೊಳ್ಳುತ್ತಿವೆ. ಆ ಕೂಟದ ಹತ್ತಿರ ಕಾಗೆ ಸರಿದು ಬಂದು ಕೂತುಕೊಂಡಿತು. ಇದಕ್ಕೆ ಯಾವ ಹಕ್ಕಿದೆ ಇಲ್ಲಿ? ಎನ್ನುವ ರೀತಿಯಲ್ಲಿ ಕೋಳಿಗಳು ನೋಡಿದವು. ಕಾಗೆ ಯಾವ ಪ್ರತಿಕ್ರೀಯೆಯನ್ನೂ ತೋರಿಸಲಿಲ್ಲ. ಇಲ್ಲಿಗೆ ಹಕ್ಕುದಾರ ನಾನು ಎನ್ನುವ ಗತ್ತಿನಲ್ಲಿ ಕಾಗೆ ಕೊಕ್ಕಿನಿಂದ ಹೆಕ್ಕತೊಡಗಿತು.’

ಬಶೀರ್ ಬ್ರೆಡ್ ಚೂರನ್ನು ಕಾಗೆಗೆ ಎಸೆದರು. ಅದನ್ನೇ ಕಾಯುತ್ತಿತ್ತಲ್ಲವೇ ಈ ಕಾಗೆ! ಚಕ್ಕನೆ ಹಾರಿ ಕ್ಯಾಚ್ ಹಿಡಿದು ತಿಂದಿತು. ನಮ್ಮ ಬೆನ್ನಹಿಂದೆ ಮರದಲ್ಲಿ ಹಕ್ಕಿಗಳ ಚಿಲಿಪಿಲಿ. ಮಗು ನನ್ನನ್ನು ಬಿಟ್ಟು ಓಡಿತು. ಮರಗಳ ಎಲೆಗಳ ನಡುವೆ ಹಕ್ಕಿಗಳ ಕುಣಿತ! ಪ್ರಕೃತಿಗೇಕೆ ಇಷ್ಟು ಸಂಭ್ರಮ?

‘ಸೂಫಿಗಳು ಹಿಂದೂ ಮುಸ್ಲಿಮ್ ಸಾಮರಸ್ಯಕ್ಕೆ ಪ್ರಯತ್ನಿಸಿದರು. ಅವರು ಆಶಿಕ್-ಮಾಶೂಕ್ ಸಂಬಂಧವನ್ನು ನಂಬುವವರು. ಅಂದರೆ ದೇವರೊಂದಿಗೆ ಪ್ರೇಮಿ-ಪ್ರೇಮಿಕೆಯ ಸಂಬಂಧವನ್ನು ನಂಬಿದವರು. ಇಂತಹ ತುಂಬ ರೀತಿಯ ವೈಶಿಷ್ಟ್ಯ ಅವರಲ್ಲಿ ಇದೆ. ಇವರಿಂದಾಗಿ ಹಿಂದೂ ಮುಸ್ಲಿಮ್ ಬಾಂಧವ್ಯ ಬೆಳೆಯುವುದು ಉತ್ತರ ಭಾರತದಲ್ಲಿ ಸಾಧ್ಯವಾಯಿತು. ಆದರೆ ದಕ್ಷಿಣ ಭಾರದಲ್ಲಿ ಬರೀ ಸಂತರ ಗೋರಿಗಳನ್ನು ಆರಾಧಿಸುವುದಕ್ಕೆ ಮಾತ್ರ ಸೂಫಿ ಸಂತರ ಪ್ರಭಾವ ಸೀಮಿತಗೊಂಡಿತು’ ಎಂದರು ಬಶೀರ್.

ನನಗೆ ನನ್ನ ತಂದೆಯ ನೆನಪಾಯಿತು. ಅಮ್ಮ ತಿಂಡಿ ಕೊಟ್ಟರೆ ಮನೆಯ ಜಗಲಿಯಲ್ಲಿ ಕೂತೇ ಅವರು ತಿನ್ನಬೇಕು. ಕೋಳಿಗಳು, ಕಾಗೆಗಳು, ಬೆಕ್ಕು ಅವರ ಹತ್ತಿರ ಓಡಿ ಬರುವುದು, ತನ್ನ ಕೈಯಲ್ಲಿದ್ದ ತಿಂಡಿಯನ್ನು ಚೂರುಮಾಡಿ ಅವುಗಳಿಗೆ ನನ್ನ ತಂದೆ ಎಸೆಯುವುದು, ನನ್ನಮ್ಮ ಗೊಣಗುವುದು…… ಪಾತುಮ್ಮನ ಆಡು ಕಾದಂಬರಿಯಲ್ಲಿ ಒಣಕಲು ದೇಹ, ಮಹಾ ಗಲಾಟೆಯ ಮನುಷ್ಯ ಅಬು ಎಂಬಾತ ಬರುತ್ತಾನೆ.

(ಫಕೀರ್ ಮುಹಮ್ಮದ್ ಕಟ್ಪಾಡಿ)

ಅಬುವಿನ ಸ್ವರವನ್ನು ಕೇಳಿದ ಒಡನೆ ಬೆಕ್ಕುಗಳು ಓಡಿದವು…. ಕಾಗೆ ಹಾರಿ ಹೋಯಿತು. ಕೋಳಿಗಳು ಚದುರಿದವು. ಪಾತುಮ್ಮನ ಆಡು ಆಚೆ ಬದಿಯಲ್ಲಿದ್ದ ಹೆಂಗಸರ ಕಡೆಗೆ ಓಡಿತು. ಮಕ್ಕಳು ಅಳುವುದನ್ನು ನಿಲ್ಲಿಸಿದರು. ಹದ್ದುಗಳೂ ಗಿಡುಗಗಳೂ ನಿಶ್ಶಬ್ಧವಾಗಿ ಎಲ್ಲೋ ಅಡಗಿಕೊಂಡವು. ಹೆಂಗಸರು ಮಾತಾಡುವುದನ್ನು ನಿಲ್ಲಿಸಿದರು. ಮನೆ ನಿಶ್ಶಬ್ಧವಾಯಿತು. ಅಬುವಿನ ಧ್ವನಿ ಎತ್ತರವಾಯಿತು. ಇದಕ್ಕೆಲ್ಲ ದೊಡ್ಡಣ್ಣನ ಅನುಮತಿ ಉಂಟಲ್ಲವೇ? ಬೆಕ್ಕು, ಮಕ್ಕಳು, ಕೋಳಿ, ಕಾಗೆ, ಆಡು? ಇವನ್ನೆಲ್ಲ ಕೊಂದು ಹಾಕ್ತೀನಿ. ಅಮ್ಮ, ಆ ಕೋಲನ್ನೂ ಕವೆಬಿಲ್ಲನ್ನೂ ತಗೊಂಬಾ ಇಲ್ಲಿ…

ಮೊಟ್ಟೆ ಬ್ರೆಡ್ಡನ್ನು ನಾನು ತಿನ್ನುತ್ತಿದ್ದಂತೆ ಬಶೀರ್ ಹೇಳಿದರು. ‘ಇಲ್ಲಿನ ಒಬ್ಬ ಕುಖ್ಯಾತ ಕಳ್ಳ ಇಲ್ಲಿಗೆ ಆಗಾಗ ಬರುತ್ತಾನೆ. ನನ್ನನ್ನು ಗುರು ಎನ್ನುತ್ತಾನೆ. ಕಾಲಿಗೆ ಬಿದ್ದು ಒಂದು ರೂಪಾಯಿ ಕೇಳುತ್ತಾನೆ. ಕೊಟ್ಟ ನಂತರ ಹೋಗುತ್ತಾನೆ. ಒಬ್ಬ ಶಾಲೆಗೆ ಹೋಗುವ ಹುಡುಗ ೨೦ರ ವಯಸ್ಸಿನ ರವಿ ಅಂತ ಅವನ ಹೆಸರು, ಮುಸ್ಲಿಮ್ ಹುಡುಗಿಯನ್ನು ಪ್ರೀತಿಸಿದ. ಆ ಹುಡುಗಿ ಒಪ್ಪಲಿಲ್ಲ. ಅವಳ ಕೊಲೆ ಮಾಡಿದ. ಜೈಲಿಗೆ ಹೋದ. ಅಲ್ಲೂ ಒಂದು ಕೊಲೆ ಮಾಡಿದ. ಅರೆ ಹುಚ್ಚ. ಗಾಂಜಾ ಸೇವಿಸುತ್ತಾನೆ. ಸರಾಯಿ ಕುಡಿಯುತ್ತಾನೆ. ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇಲ್ಲಿಗೆ ಬರುತ್ತಾನೆ. ನನ್ನನ್ನು ಗುರು ಅನ್ನುತ್ತಾನೆ. ಈಗ ಒಂದು ಕಾದಂಬರಿ ಬರೆದಿದ್ದಾನೆ. ಇದು ಪ್ರಕಟವಾಗಿದೆ. ಇತ್ತೀಚೆಗೆ ಬಂದು ನನಗೆ ಮದುವೆ, ಬನ್ನಿ ಎಂದ. ನನ್ನ ಆರೋಗ್ಯ ಚೆನ್ನಾಗಿಲ್ಲ ಎಂದೆ. ಸರಾಯಿ ಗಾಂಜಾ ಬಿಡದೆ ಮದುವೆಯಾಗಬೇಡ ಎಂದೆ.

ನನ್ನ ಮಕ್ಕಳ ಬಗ್ಗೆ ಕೇಳಿದರು. ಹೆಂಡತಿಯ ಹೆಸರೇನೆಂದು ವಿಚಾರಿಸಿದರು. ‘ಫಾತಿಮಾ’ ಎಂದೆ. ನನ್ನ ಹೆಂಡತಿಯ ಹೆಸರು ಕೂಡಾ ‘ಫಾತಿಮಾ’ ಎಂದರು.

ನಮ್ಮ ಮಾತುಕತೆ ಬಹಳ ದೀರ್ಘವಾಗಿತ್ತು. ಮೂರು ಗಂಟೆಗಳು ಸತತವಾಗಿ ಮಾತಾಡಿದೆವು. ಅವರಿಗೆ ಆಯಾಸವಾಗಿರಬಹುದು ಎಂದುಕೊಂಡೆ. ಬ್ರೆಡ್ ಮೊಟ್ಟೆ ಪಲ್ಯ ತಿನ್ನುತ್ತಿದ್ದಂತೆಯೇ ಎದುರಿನಲ್ಲಿ ಸ್ಟಾಂಡಿನ ಮೇಲೆ ಮುಚ್ಚಿಟ್ಟ ವಸ್ತುವೊಂದು ನನ್ನ ಕಣ್ಣಿಗೆ ಬಿತ್ತು. ನಾನು ಅದನ್ನೇ ನೋಡುತ್ತಿರುವುದು ಕಂಡ ಬಶೀರ್, ‘ಅದು ನನ್ನ ಪ್ರತಿಮೆ. ಇಲ್ಲಿಯ ಕಲಾವಿದನೊಬ್ಬ ಅದನ್ನು ಮಾಡುತ್ತಿದ್ದಾನೆ. ಇನ್ನೂ ಮುಗಿದಿಲ್ಲ. ಕೊನೆಯ ಹಂತಕ್ಕೆ ಬಂದಿದೆ. ಕಂಚಿನಲ್ಲಿ ಮಾಡುತ್ತಾನಂತೆ’ ಎಂದರು. ಚಾ ತರಿಸಿದರು. ಕುಡಿದೆ.

ತೊಂಭತ್ತರಷ್ಟು ಪ್ರಾಯದ ಬಶೀರ್ರನ್ನು ಅಗಲುತ್ತಿರುವಂತೆ ಮನಸ್ಸು ಭಾರವಾಯಿತು. ಹೊರಟು ನಿಂತೆ.

‘ಬರೆಯುವುದನ್ನು ನಿಲ್ಲಿಸಬೇಡಿ, ಬರೆಯಿರಿ. ಅಲ್ಲಾಹ ನಿಮಗೆ ಒಳ್ಳೆಯದು ಮಾಡಲಿ’ ಎಂದರು. ಅವರ ಹಸ್ತ ಹಿಡಿದು ಕ್ಷಣ ಮೂಕನಾಗಿ ನಿಂತೆ.