ಅವರು ಇಲ್ಲಿನ 45-50 ಡಿಗ್ರಿ ಉಷ್ಣಾಂಶವನ್ನ ಬಳಸಿಕೊಂಡು ಪ್ಲಾಸ್ಟಿಕ್‌ನ ಡಬ್ಬಿಯಲ್ಲಿ ತಾವು ತಂದ ಆಹಾರವನ್ನು ಬಿಸಿ ಮಾಡಿಕೊಳ್ಳುವುದನ್ನು ನೋಡಿ ಸಂಕಟವೂ ಆಯಿತು. ಏನಾದರೂ ಮಾಡಬೇಕಲ್ಲ ಎಂದು ಯೋಚಿಸುವಾಗ ಒಂದು ಹೊಸ tupperware ನ ಊಟದ ಡಬ್ಬಿಯನ್ನು ತಂದುಕೊಡುವುದು ಸೂಕ್ತ ಅಂತ ಅನ್ನಿಸಿತು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಹನ್ನೊಂದನೆಯ ಕಂತು
ಮೊನ್ನೆ ನನ್ನ ಆಫೀಸಿನ ಕೆಲಸದ ಸಮಯದಲ್ಲಿ ನಾನು ಮಾಡಬೇಕಿದ್ದ ಸಂಕೀರ್ಣ ಡಾಟಾ ಅನಾಲಿಸಿಸ್ ನಡುವೆ ಸ್ಮೋಕ್ ಮಾಡಬೇಕೆನಿಸಿತು! ನಾನು ಸ್ಮೋಕರ್ ಅಲ್ಲವಾದರೂ ಕೆಲವೊಮ್ಮೆ ನಿಯಮ ಮುರಿಯುತ್ತೇನೆ. ತದನಂತರ ತಿಂಗಳುಗಳ ಗಟ್ಟಲೆ ನಿಕೋಟಿನ್ ಮುಟ್ಟದೇ ಇದ್ದುಬಿಡುತ್ತೇನೆ.
ಆವತ್ತು ನಿಗದಿತ ಸ್ಮೋಕಿಂಗ್ ಜೋನ್‌ಗೆ ಬಂದು ನನ್ನ Vape ನಿಂದ (e-cigarette) ಒಂದೆರಡು puff ಎಳೆಯುವಾಗ ನಮ್ಮ ತಂತ್ರಜ್ಞಾನ ಕೇಂದ್ರದ ಗಾರ್ಡನರ್ ಮೊಹಮ್ಮದ್ ಚಾಚಾ ಅಲ್ಲಿ ಒಂದು ಡಬ್ಬವನ್ನು ದೂರದ ಬಿಸಿಲಿನಿಂದ ಎತ್ತಿಕೊಂಡು ಬರುವುದು ಕಾಣಿಸಿತು. ಅದು ಅವರ ಊಟದ ಸಮಯವಾಗಿದ್ದುದ್ದರಿಂದ ಮತ್ತದರ ಆಕಾರ ನೋಡಿದರೆ ಅದು ಊಟದ ಡಬ್ಬಿ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಅವರು ಹತ್ತಿರ ಬಂದೊಡನೆ ಆ ಡಬ್ಬಿಯಲ್ಲಿ ಅನ್ನ ಮತ್ತು ಮಾಂಸದ ಸಾರು ಕಾಣಿಸಿತು.
ನಾನು ಅವರನ್ನು ಕುರಿತು “ಚಾಚಾ ಅಲ್ಲಿಯೇ ನಿಮ್ಮ ಊಟದ ರೂಮಿನಲ್ಲಿ ಇರುವ ಮೈಕ್ರೋವೇವ್‌ನಲ್ಲಿ ಇದನ್ನು ಬಿಸಿ ಮಾಡಿಕೊಳ್ಳಬಾರದೇಕೆ?” ಎಂದು ಹಿಂದಿಯಲ್ಲಿ ಕೇಳಿದೆ. ಅದಕ್ಕವರು “ಇಲ್ಲ! ಸಾರಿನಲ್ಲಿದ್ದ ಎಣ್ಣೆ ಅಂಶವನ್ನ ಬೇರ್ಪಡಿಸಲು ಹೀಗೆ ಮಾಡಿದೆ “ಅಂತಾ ಏನೋ ಹೇಳಿದರು.
ನನಗೆ ಆ ಡಬ್ಬಿಯನ್ನು ಹತ್ತಿರದಿಂದ ನೋಡಿದಾಗ ಅದು ಮೈಕ್ರೋವೇವ್ ಸೇಫ್ ಅಲ್ಲ ಅಂತ ಮನದಟ್ಟಾಯಿತು! Tupperware, signoraware ಮುಂತಾದ ದುಬಾರಿ ಡಬ್ಬಿಗಳು ಗಲ್ಫ್ ನಲ್ಲಿದ್ದುಕೊಂಡು ಕಾಂಟ್ರಾಕ್ಟ್‌ನಲ್ಲಿ ಸಣ್ಣ ಪುಟ್ಟ ನೌಕರಿ ಮಾಡಿಕೊಂಡು, ಎರಡು ಮೂರು ತಿಂಗಳಿಗೊಮ್ಮೆ ಸಂಬಳ ಪಡೆದು, ಮೂರ್ನಾಲ್ಕು ವರ್ಷಗಳಿಗೊಮ್ಮೆ ತಮ್ಮೂರಿಗೆ– ದೇಶಗಳಿಗೆ ಮರಳಿ ಹೆಂಡತಿ ಮಕ್ಕಳನ್ನು ನೋಡಿ ಬರುವ ಇವರಂತಹ ಅನೇಕರು ಯಾವ್ಯಾವ ವಸ್ತುಗಳನ್ನು ಆಫ್ಫೊರ್ಡ್ ಮಾಡಲು ಕಷ್ಟ ಪಡುತ್ತಾರೆ ಎನ್ನುವ ತಿಳುವಳಿಕೆಯೇ ನನಗೆ ಇಲ್ಲವಲ್ಲ ಎಂದು ಬೇಸರವಾಯಿತು. ಮತ್ತು ಅವರ ಸ್ಥಿತಿಯ ಬಗ್ಗೆ ಕನಿಕರವೂ ಬಂತು!
ಅದಕ್ಕಾಗಿಯೇ ಅವರು ಇಲ್ಲಿನ 45-50 ಡಿಗ್ರಿ ಉಷ್ಣಾಂಶವನ್ನ ಬಳಸಿಕೊಂಡು ಪ್ಲಾಸ್ಟಿಕ್‌ನ ಡಬ್ಬಿಯಲ್ಲಿ ತಾವು ತಂದ ಆಹಾರವನ್ನು ಬಿಸಿ ಮಾಡಿಕೊಳ್ಳುವುದನ್ನು ನೋಡಿ ಸಂಕಟವೂ ಆಯಿತು. ಏನಾದರೂ ಮಾಡಬೇಕಲ್ಲ ಎಂದು ಯೋಚಿಸುವಾಗ ಒಂದು ಹೊಸ tupperware ನ ಊಟದ ಡಬ್ಬಿಯನ್ನು ತಂದುಕೊಡುವುದು ಸೂಕ್ತ ಅಂತ ಅನ್ನಿಸಿತು.

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

