Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ನಮ್ ಶಾಲೆಗೆ ಬನ್ನಿ ಸಾರ್… ಎನ್ನುವ ಪ್ರೀತಿಯ ಕರೆ

ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ  ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಲೇಖನ 

Read More

ಮಕ್ಕಳಿಗೆ ಕಲಿಸುತ್ತಾ… ನಾವೂ ಕಲಿಯುತ್ತಾ…

ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್‌ ಪುಸ್ತಕ, ಪೆನ್ನು, ಕಂಪಾಸ್‌ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

Read More

ಸಂಸೆ ಗುಡ್ಡದ ಮೇಲೆ ಮಕ್ಕಳು ಹೇಳಿದ ಪಾಠ

ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.
ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು.  ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌  ಎಂದು…

Read More

ಅರವಿಂದ ಕುಡ್ಲ ಬರೆಯುವ ಹೊಸ ಅಂಕಣದಲ್ಲಿ ಶಾಲೆಯ ಕಲರವ

ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ  ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ.  ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸ‍ರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು,  ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ.

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ