ಜಂತೆಯಲ್ಲಿದ್ದ ಕೈಚೀಲದಲ್ಲಿ ಪೋಲಿ ಪುಸ್ತಕಗಳು
ಪಿಯುಸಿ ಓದಲು ತುಮಕೂರಿಗೆ ಹೊರಟಾಗ ಹಲವು ಬದಲಾವಣೆಗಳಾದವು. ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹದಿಮೂರನೆಯ ಕಂತು.