ಹಿರಿಯ ರಂಗನಟಿ ಜುಲೈಕಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಂದಿನಿಂದ
“ಕಲಾವಿದರ ಮಾತಂತಿರಲಿ, ಊರೂರಿಗೆ ಬರುತ್ತಿದ್ದ ನಾಟಕವನ್ನೂ ನೋಡದ ಮನೆತನ ಎನ್ನಬಹುದೇನೊ. ಕಾಳಮ್ಮನಿಂದ ಮಲ್ಲಮ್ಮನಾಗಿ, ಮಲ್ಲಮ್ಮನಿಂದ ಸರಸ್ವತಿಯಾಗಿ, ಕೊನೆಗೆ ಸರಸ್ವತಿಯಿಂದ ಜುಲೈಖಾ ಬೇಗಂ ಆದೆ. ಕಲೆಯ ಹಿನ್ನೆಲೆಯಿಲ್ಲದೆ ಬೆಳೆದ ನನಗೆ ಅದ್ಹೇಗೆ ಈ ಅಭಿನಯ ಕಲೆ ಒದಗಿಬಂತೋ!”
ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಹಿರಿಯ ರಂಗ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಜುಲೈಕಾ ಬೇಗಂ ಅವರ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”.
ನಿರೂಪಿಸುತ್ತಾರೆ ಕೀರ್ತಿ ಬೈಂದೂರು.
