Advertisement

ಸುಕನ್ಯಾ ಕನಾರಳ್ಳಿ

ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್‌ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತೊಂಭತ್ತನೆಯ ಕಂತು

Read More

ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು

Read More

ಪ್ರೀತಿಯ ಸುಳಿಯಲ್ಲಿ ಸಿಲುಕಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೇಳನೆಯ ಕಂತು

Read More

ಕುಣಿಯಬೇಕಿದ್ದ ಕಾಲುಗಳ ಕಟ್ಟಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಸರಿ, ಮಳೆ ನಿಂತು ಮನೆ ತಲುಪುವ ಹೊತ್ತಿಗೆ ರಾತ್ರಿ ಎಂಟರ ಹೊತ್ತು. ದೊಡ್ಡ ರಾದ್ಧಾಂತವೇ ಆಗಿತ್ತು. ‘ಯಾಕಿಷ್ಟು ತಡವಾಯ್ತು?’ ಪ್ರಶ್ನೆ ಗಡುಸಾಗಿಯೇ ಕೇಳಿಸಿತು. ಏನು ಉತ್ತರಿಸಬೇಕೆಂದು ತೋರದೆ, ಬೇಬಿಯಕ್ಕನೊಂದಿಗೆ ಪಿಚ್ಚರ್ ನೋಡುವುದಕ್ಕೆ ಹೋಗಿದ್ದೆ ಎಂದುಬಿಟ್ಟೆ. ನಂತರ ಕೇಳಿದ್ದು, ಕೆನ್ನೆಯ ಮೇಲೆ ಬಿದ್ದ ಛಟಾರ್ ಎಂಬ ಏಟಿನ ದನಿಯಷ್ಟೇ! ‘ಹೇಳದೆ ಕೇಳದೆ ಇನ್ನೆಲ್ಲಿಯೂ ಹೋಗಕೂಡದು. ಡಾನ್ಸ್ ಕ್ಲಾಸ್ ಸೇರಿಸಿಯೇ ತಪ್ಪು ಮಾಡಿದೆ’ ಎಂದು ಹೇಳಿದ್ದರೆ ಅತ್ತು ಸುಮ್ಮನಾಗುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನಾರನೆಯ ಕಂತು

Read More

ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೈದನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ