ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೩
ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ’
Read More