ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ