Advertisement

ಕೆಂಡಸಂಪಿಗೆ

ಪ್ರಾಚೀನ ಬೆಳ್ಳಿ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಅಗುಚಾದಲ್ಲಿ ಅದಿರು ಫ್ರೀಬರ್ಗೈಟ್‌ನ (ಹೆಚ್ಚು ಗಟ್ಟಿ ಅದಿರು) ಸಂಕೀರ್ಣ ಮಿಶ್ರಣವಾಗಿದ್ದು ಇದನ್ನು ಬೆಳ್ಳಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ದರಿಬಾ ಮತ್ತು ಅಗುಚಾ ಎರಡೂ ಗಣಿಗಳಲ್ಲಿ ಮೇಲ್ಮೈಯಲ್ಲಿ ದೊರಕುವ ನಿಕ್ಷೇಪಗಳು ಶಿಥಿಲೀಕರಣಗೊಂಡು ಕಬ್ಬಿಣ ಅಂಶದಿಂದ ಮಿಶ್ರಣಗೊಂಡಿವೆ. ದರಿ ಬಾದ ಹಲವಾರು ಗಣಿಗಳ ಮೇಲ್ಮೈ ನಿಕ್ಷೇಪಗಳಲ್ಲಿ ಗ್ರ್ಯಾಫೈಟ್ ಮೈಕಾ ಶಿಸ್ಟ್‌ನಲ್ಲಿ ಬೆಳ್ಳಿ ದೊರಕುತ್ತದೆ. ಇದೇ ರೀತಿಯ ಗಣಿಗಳು ಅಗುಚಾ ಪ್ರದೇಶದಲ್ಲೂ ಕಂಡುಬಂದಿವೆ. ಈ ಗಣಿಗಳು ಬಹುಶಃ ಪ್ರಾಚೀನ ಭಾರತದ ಆರಂಭಿಕ ಗಣಿ ಕಾರ್ಯಗಳಾಗಿದ್ದು ನಂತರ ಅವು ಆಳದ ಭೂಗತ ಗಣಿಗಳಾಗಿ ಮಾರ್ಪಟ್ಟಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯ

Read More

ಪ್ರಾಚೀನ ತಾಮ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ತಾಮ್ರ ಗಣಿಗಾರಿಕೆ ಚಟುವಟಿಕೆಗಳು ರೊಲಾಡಿಹ್, ಬಡಿಯಾ, ಧಲ್‌ಭಮ್ ಮತ್ತು ದುವಾಯಪುರಂನ ಧೋಬನಿ ಬೆಟ್ಟಗಳು ಮತ್ತು ಖಾಸ್ವಾನ್ ಪ್ರದೇಶಗಳಲ್ಲಿ ಗಲುದಿಹ್ ಮತ್ತು ರಾಗದಿಹ್ ಹತ್ತಿರವೂ ನಡೆದಿರುವುದಾಗಿ ತಿಳಿದುಬಂದಿದೆ. ಚಂದ್ರಬಾರು, ರಾಜದೋಹಾ, ರಾಖಾ, ಸಿದ್ಧೇಶ್ವರ, ಸುರ್ದಾ, ಲೌಕೇಸ್ರಾ ಇತರ ಪ್ರಮುಖ ತಾಮ್ರದ ಗಣಿಗಾರಿಕೆ ತಾಣಗಳಾಗಿವೆ. ಕೆಲವು ಹಳೆ ಗಣಿಗಳು ಭಂಕುರಾ ಮತ್ತು ಬರಗುಂದ ಸಮೀಪದ ಸಿಂಘ್‌ಭೂಮ್‌ನ ಪೂರ್ವ ಗಡಿಯಲ್ಲಿ ದೊಡ್ಡ ಶ್ಯಾಫ್ಟ್‌ಗಳು ಮತ್ತು ಹೊಂಡಗಳಿರುವ ಗಣಿಗಾರಿಕೆ ಕುರುಹುಗಳು ಕಂಡುಬಂದಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಐದನೆಯ ಅಧ್ಯಾಯ

Read More

ಪ್ರಾಚೀನ ಸೀಸ-ಸತು ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ರಾಜಸ್ತಾನ ಅನೇಕ ಸ್ಥಳಗಳಲ್ಲಿ ಪ್ರಾಚೀನ ಕಾಲದಲ್ಲಿ ಸೀಸದ ಗಣಿಗಾರಿಕೆ ನಡೆದಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ರಾಜಪುರ-ದರಿಬಾ, ಪುರ್-ಬನೇರಾ, ಚೌತ್ ಕಾ ಬಾರ್ವಾರಾ, ಅಗುಚಾ, ಅಜ್ಮೇರ್-ಘಗ್ರ, ಸಾವರ್, ಜಹಜ್‌ಪುರ್, ಬಸಂತಘರ್-ದೇರಿ, ರಾಂಪುರ-ಅಗುಚಾ ಮತ್ತು ಜಾವರ್ ಗಣಿಗಳು. ಹೆಚ್ಚಿನ ಸಂದರ್ಭಗಳಲ್ಲಿ ಸೀಸ ಮತ್ತು ಸತು ಒಟ್ಟಾಗಿ ದೊರಕುತ್ತವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ನಾಲ್ಕನೆಯ ಅಧ್ಯಾಯ

Read More

ಪ್ರಾಚೀನ ಚಿನ್ನದ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಧಾರವಾಡ ಜಿಲ್ಲೆಯ ಚಿನ್ಮಲ್ಗುಂಡ್ ಪ್ರದೇಶದಲ್ಲಿ ಪ್ರಾಚೀನ ಚಿನ್ನದ ಗಣಿಗಳು ವಿಜಯನಗರ ಸಾಮ್ರಾಜ್ಯ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೇ ಪ್ರದೇಶದ ಹದಬನತ್ತ ಚಿನ್ನದ ಗಣಿಗಳು ಮತ್ತು ಆಂಧ್ರಪ್ರದೇಶದ ರಾಮಗಿರಿ ಚಿನ್ನದ ಗಣಿಗಳು ಟಿಪ್ಪು ಕಾಲದಲ್ಲಿ ಸಕ್ರಿಯವಾಗಿದ್ದವು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇತರ ಲೋಹಗಳಿಗೆ ಹೋಲಿಸಿದರೆ ಚಿನ್ನದ ಗಣಿಗಾರಿಕೆಯ ಬಗ್ಗೆ ಇತಿಹಾಸದಲ್ಲಿ ಅಷ್ಟೊಂದು ನಿಖರವಾದ ಲಿಖಿತ ದಾಖಲೆಗಳು ದೊರಕುವುದಿಲ್ಲ ಎಂದೇ ಹೇಳಬೇಕು.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ

Read More

ಪ್ರಾಚೀನ ವಜ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ವಜ್ರಗಳನ್ನು ಅಲಂಕಾರ/ಆಭರಣಗಳಾಗಿ, ಕತ್ತರಿಸುವ ಸಾಧನಗಳಾಗಿ, ದುಷ್ಟತನವನ್ನು ದೂರ ಮಾಡಲು “ತಾಲಿಸ್ಮನ್” ಆಗಿ ಬಳಸಲಾಗುತ್ತಿತ್ತು. ತಾಲಿಸ್ಮನ್ ಎಂದರೆ ಕೆತ್ತಿದ ವಜ್ರದುಂಗುರ ಅಥವಾ ರತ್ನಕಲ್ಲು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿತ್ತು. ಪ್ರಾಚೀನ ಭಾರತದಲ್ಲಿ ವಜ್ರದ ಗುಣಲಕ್ಷಣಗಳನ್ನು ಮತ್ತು ಮಾಂತ್ರಿಕ ಶಕ್ತಿಯನ್ನು ಅಧ್ಯಯನ ಮಾಡಲಾಗಿದ್ದು, ವಜ್ರಗಳ ಮಹತ್ವ ಎಷ್ಟೆಂದರೆ “ಮ್ಯಾಂಡಲಿನ್” ಎಂಬ ವೃತ್ತಿಪರ ವಜ್ರಗಳ ತಜ್ಞರೆ ಇದ್ದರು. ಆದರೆ ಅದರ ಬಗ್ಗೆ ಅನೇಕ ಅನುಮಾನಗಳಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ