ಆರಕ್ಕೇರದ ಮೂರಕ್ಕಿಳಿಯದ ಬಡವರ ಬದುಕು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಪಕ್ಕದಲ್ಲಿದ್ದ ಮಣಿ, “ಸರ್ ಅವರೆಲ್ಲರ ಹೆಸರುಗಳು ಏನೇನು ಅಂತ ಗೊತ್ತ ಸರ್?” ಎಂದ. ಲೋಗನಾಥನ್, “ಗೊತ್ತಿಲ್ಲ” ಎಂದ. ಮಣಿ “ಕರ್ಣನ್, ಧರ್ಮರಾಯನ್, ಭೀಮನ್, ಅರ್ಜುನನ್, ನಖುಲನ್ ಮತ್ತು ಸಹದೇವನ್” ಎನ್ನುತ್ತಿದ್ದಂತೆ, ಲೋಗನಾಥನ್ “ಇನ್ನೂ ಮೂವರ ಹೆಸರು?” ಕೇಳಿದರು. ಗೋವಿಂದ, “ಮೊದಲ ಇಬ್ಬರು ಸತ್ತೋದರಂತೆ ಸರ್. ಐದು ಜನ ಗಂಡು ಮಕ್ಕಳಾದ ಮೇಲೆ ನಾನು ಹುಟ್ಟಿ, ನನಗೆ ಗೋವಿಂದಾ ಅಂತ ಹೆಸರು ಇಟ್ಟ ಮೇಲೆ ನಮ್ಮಮ್ಮನಿಗೆ ಮಕ್ಕಳಾಗುವುದು ನಿಂತೋಯಿತಂತೆ” ಎಂದ ಗೋವಿಂದನೆ ಬಿದ್ದೂಬಿದ್ದು ನಕ್ಕ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ