ಅರ್ಥವಾಗದ ವಯಸ್ಸು ಏನೆಲ್ಲ ಮಾಡಿಸುತ್ತದೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಅಯ್ಯಪ್ಪ ಮತ್ತೆ ಹೊರಕ್ಕೆ ಬಂದು ಕಲ್ಲು ಬಂಡೆಯ ಮೇಲೆ ಕುಳಿತುಕೊಂಡು ಅಂಗೈಯಿಂದ ಜೋರಾಗಿ ಕಲ್ಲು ಬಂಡೆಗೆ ಹೊಡೆದು ಕೈಕೈ ಹಿಸುಕಿಕೊಂಡರು. ರಾತ್ರಿ ಊಟದ ಸಮಯವಾಗಿ ವಿಜಯ ಊಟದ ತಟ್ಟೆ ಮತ್ತು ನೀರು ಅಯ್ಯಪ್ಪನಿಗೆ ತಂದುಕೊಟ್ಟು ಬಾಗಿಲು ಮುಂದೆ ಕೆಳಗಡೆ ಕುಳಿತುಕೊಂಡಳು. ಅಯ್ಯಪ್ಪ ಊಟ ಮಾಡುತ್ತ, “ಈ ಹುಡುಗಿ ಕಾಲೇಜ್ ಓದು ಮುಗಿದಂತೆಯೇ. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಇದುವರೆಗೂ ಯಾರೂ ಓದಿರಲಿಲ್ಲ. ಈ ಹುಡುಗಿಯನ್ನಾದರೂ ಚೆನ್ನಾಗಿ ಓದಿಸೋಣ ಅಂದುಕೊಂಡಿದ್ದೆ” ಎಂದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ