ಶಾಲಾ ಕಲಿಕೆಯ ಆರಂಭದ ದಿನಗಳು…..
ಎದುರು ಮನೆಯಾದ್ದರಿಂದ ಗೃಹ ಕೆಲಸಗಳನ್ನು ಮಾಡುವಾಗ ಬರುತ್ತಿದ್ದರು. ಪ್ರತಿದಿನವು ಪಕ್ಕದಲ್ಲೆ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು. ನಾನು ಹಠಕ್ಕೆ ಬಿದ್ದವನಂತೆ ಕಲಿತೆ. ಅದೊಂದು ತಪಸ್ಸು ಎನ್ನುವಂತೆ ಕಲಿತುಕೊಂಡೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಓದುವುದನ್ನು ಬಹಳ ಬೇಗನೆ ಕಲಿತಿದ್ದೆ. ಅಷ್ಟರಲ್ಲಾಗಲೇ ಒಂದನೆ ತರಗತಿಯ ಪುಸ್ತಕದ ಆರು ಪಾಠಗಳು ಮುಗಿದು ಹೋಗಿದ್ದವು. ಏಳನೆಯ ಪಾಠವೆ ‘ಚರಕ’ ಗಾಂಧೀಜಿಯವರ ಆದರ್ಶದ ಪ್ರತಿಬಿಂಬದಂತಿದ್ದ ನಮ್ಮ ಉಡುಪುಗಳನ್ನು ನಾವೆ ತಯಾರಿಸಿಕೊಳ್ಳಬೇಕು ಎನ್ನುವ ಸೂಚಕವಾಗಿ ನೂಲು ನೇಯುತಿದ್ದ ಚರಕದ ಮುಂದೆ ಕುಳಿತಿದ್ದ ಚಿತ್ರ ನಮ್ಮನ್ನು ಆಕರ್ಷಿಸಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ