ಮಹಾರಾಜಾ ಕಾಲೇಜಿನ ಮಧುರ ನೆನಪು ……: ಮೂರ್ತಿ ದೇರಾಜೆ ಬರಹ
ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ.
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ