ಕತ್ತಲಿಗೆ ಬೆಳಕಿನ ಬೊಟ್ಟು ಇಟ್ಟಂತೆ ಇರುವ ಚಂದ್ರ..
‘ಅಸಲಿಗೆ ಇದನ್ನೇ ನಾಟಕ ಅಂದುಕೊಂಡಿದ್ದೆ. ಅಕ್ಷರ ರೂಪದಲ್ಲಿ ಇರುವಷ್ಟು ಹೊತ್ತು ಅದು ನಾಟಕವೇ. ಕೃತಿಯೇ. ಚರ್ಚಿತ ವಸ್ತುವೇ. ಆದರೆ ನಾಟಕ ಅಂದರೆ ಅಷ್ಟೇ ಅಲ್ಲ. ನಮ್ಮ ನಡುವಿನ ಮನುಷ್ಯರ ಢಾಳಾದ ಚಿತ್ರಣ ಅಕ್ಷರಗಳಲ್ಲಿ ರೂಪು ತಳೆಯುತ್ತ ಒಂದು ರೂಪು ಪಡೆಯುವುದನ್ನು ಮೊದಮೊದಲು ನಾನೂ ನಾಟಕ ಅಂತಲೇ ಅಂದುಕೊಂಡಿದ್ದೆ. ಆದರೆ ನಂತರದಲ್ಲಿ ನಾನು ಅರಿತ ಸತ್ಯ ಅಂದರೆ ಈ ಅಕ್ಷರರೂಪದ ನಾಟಕ ರಂಗದ ಮೇಲೆ ರೂಪು ತಳೆಯಬೇಕಾದ ಪೂರ್ವದಲ್ಲಿ ಒಂದು ಮಹಾನ್ ನಾಟಕದ ಅನಾವರಣ ಆಗತೊಡಗುತ್ತದೆ.’
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ