ಮಧ್ಯಮ ವರ್ಗ ಮತ್ತು ಬೆಲೆಬಾಳುವ ಕಾಗದದ ಚೂರುಗಳು: ರಾಮ್ ಪ್ರಕಾಶ್ ರೈ ಕೆ. ಸರಣಿ
‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ