Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

ಕೆಂಪು ಬಣ್ಣ ಬಳಿದ ಭಾವಗೀತೆ: ರಾಮ್ ಪ್ರಕಾಶ್ ರೈ ಕೆ ಸರಣಿ

ಮಳೆಯ ಜೊತೆಗೆ ಸಾದಾ ಸೀದಾ ಎಂಬಂತೆ ಹಾರಿ ಬರುವ ತಂಗಾಳಿ, ಪ್ರತಿ ಬೆಳಗು ಖಾಲಿ ಬೇಲಿಯ ಭೇಟಿಯಾಗುವ ದಾಸವಾಳ, ಆಕಳಿಸುವ ಚಂದಿರನಿಗೆ ಸದಾ ಕಾಣುವ ಟ್ರಕ್ಕಿನ ಟಾರ್ಪಲ್ ಮುಂಡಾಸು, ಚೆಂಡೆಗೆ ದಣಿವಾಗುವಷ್ಟು ಕುಣಿಯುವ ಪುಂಡು ವೇಷಧಾರಿ ಹೀಗೆ ಯಾವುದು ಮಾಮೂಲು ಎಂದು ವಿಭಾಗಿಸಿಕೊಂಡಿರುವ ಸಂಗತಿಗಳಿವೆಯೋ ಅದೇ ತೆರನಾದ ಬಂಧ ಅವರದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಬೆಂಕಿಯ ನಾಲಗೆಯೊಳಗೆ ಬೆಂದ ಸತ್ಯಗಳು: ರಾಮ್ ಪ್ರಕಾಶ್ ರೈ ಕೆ ಸರಣಿ

ಈ ಕಥಾನಕದಲ್ಲಿ ಸರಣಿ ಅವಘಡಗಳು ನಡೆದರೂ ಕೊನೆವರೆಗೂ ಅದರ ಹಿಂದಿನ ಮರ್ಮವ ತಿಳಿಸದೆ ಮಳೆಗೆ ಕಾಯುವ ರೈತನಂತೆ ನೋಡುಗನ ಬಂಧಿಸಿಡುತ್ತದೆ. ತನ್ನ ತಪ್ಪಿಲ್ಲದೇ ತನ್ನ ಒಲವನ್ನು ಕಳೆದುಕೊಳ್ಳುವ ವಿಜಯ್, ಬದುಕನ್ನು ಪ್ರೀತಿಸುವುದೊಂದನ್ನು ಬಿಟ್ಟು ಇನ್ನೇನು ತಿಳಿಯದ ಭಟ್ಟರ ಜೀವನ ಒಲೆಯಲ್ಲಿ ನರ್ತಿಸುವ ಬೆಂಕಿಯ ಶಾಖಕ್ಕೆ ಸಿಲುಕಿ ನಲುಗುವುದು ಇವೆಲ್ಲವೂ ಭಾವ ಪ್ರಚೋದಕ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಸ್ನೇಹದ ಕಡಲಲ್ಲಿ ಭಾವ ನಾವೆಯ ಪಯಣ: ರಾಮ್‌ಪ್ರಕಾಶ್‌ ರೈ ಸರಣಿ

ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್ ‘ಸಿನಿಮಾದ ವಿಶ್ಲೇಷಣೆ

Read More

ನೀನೆ ಕೊನೆ-ಮೊದಲೆಂಬ ಕಾಲಾತೀತ ಪ್ರೇಮಗಾಥೆ: ರಾಮ್ ಪ್ರಕಾಶ್ ರೈ ಕೆ ಸರಣಿ

ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಬದುಕಿನ ಹುಡುಕಾಟ ಜಾರಿಯಲ್ಲಿದೆ: ರಾಮ್ ಪ್ರಕಾಶ್ ರೈ ಕೆ ಸರಣಿ

ಆತ ಪ್ರೀತಿಸಿದ ಹುಡುಗಿಯನ್ನು ಮನೆಯವರು ನಾನಾ ಕಾರಣಗಳಿಂದ ನಿರಾಕರಿಸಿದರೆಂದು ಕೋಪಗೊಂಡು ಮನೆ ಬಿಟ್ಟು ಹೋಗುತ್ತಾನೆ. ಅಧ್ಯಾತ್ಮ ವಲಯದತ್ತ ಆಕರ್ಷಿಸಲ್ಪಟ್ಟು ವಿವಿಧ ಧರ್ಮ, ಮತಗಳ ಮೊರೆ ಹೋಗುತ್ತಾನೆ. ಆದರೆ ಎಲ್ಲಾ ಮತಗಳ ಹಿಂಬಾಲಕರು ದೇವರೇ ಭಯಗೊಳ್ಳುವಷ್ಟು ಪ್ರಚಂಡರಾದ್ದರಿಂದ ಅವೆಲ್ಲವನ್ನೂ ತ್ಯಜಿಸಿ, ಬಿಳಿ ವಸ್ತ್ರಧಾರಣೆಯ ಮಾಡಿ ಸನ್ಯಾಸಿಯಾಗುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ