ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ
“ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು | Jan 20, 2023 | ದಿನದ ಕವಿತೆ |
“ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ
Posted by ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು | Oct 18, 2022 | ದಿನದ ಕವಿತೆ |
“ಭೂಮಿ ಆಕಾಶ ಸಂಧಿಸದೇ ಉಳಿದಲ್ಲಿ
ಸದಾ ಕಣ್ಮಿಟುಕಿಸಿ ಕರೆಯುವ ಬಯಲು.
ಚಲಿಸುವ ಚಕ್ರಗಳು ಮುರಿದ ಕಡೆಯಲ್ಲೆಲ್ಲಾ
ಹಾರುವ ಬಣ್ಣಬಣ್ಣದ ಚಿಟ್ಟೆಗಳ ನೆರಳು
ಹಿಡಿ ಹಿಡಿ ಎಂದು ಸವಾಲೆಸೆದು
ಮುಟ್ಟದಂತೆ ಮುಟ್ಟಿ
ಹತ್ತಿರವಾದಂತೆ ದೂರ ಸರಿದು
ಸದಾ ಸೆಳೆಯುವ ಸಂತಸದ ಹೊನಲು.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ
Posted by ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು | Aug 1, 2022 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಒಂದು ಭಾಗದ ಕುರಿತು ಬರೆದಿದ್ದಾರೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
Posted by ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು | Jun 29, 2022 | ಸಂಪಿಗೆ ಸ್ಪೆಷಲ್ |
ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ. ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ. ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು. ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು. ಉಳುಮೆಯ ಸುಖದುಃಖಗಳ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಲೇಖನ ಇಲ್ಲಿದೆ.
Read MorePosted by ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು | Mar 3, 2022 | ದಿನದ ಪುಸ್ತಕ |
ಈ ಕವನಸಂಕಲನದಲ್ಲಿ , ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಅಂತರಂಗದ ‘ಅವನು’ ಬಹಳಷ್ಟು ಪ್ರಶ್ನೆ ಕೇಳುತ್ತಾನೆ. ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ. ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ. ಹಾಗೆಂದು ಇಲ್ಲಿ ರೂಪಕಗಳ ಮೂಲಕ ಮಾತನಾಡುವ ಕವಿತೆಗಳು ಎಲ್ಲವನ್ನೂ ಬಿಟ್ಟುಕೊಡಲೂ ತಯಾರಿಲ್ಲ. ಪೂರ್ಣಿಮಾ ಸುರೇಶ್ ಹೊಸಕವನ ಸಂಕಲನ ‘ಮಧ್ಯಮಾವತಿ’ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ