ಸಚೇತನ ಭಟ್ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ
ಮಧ್ಯರಾತ್ರಿ ನನಗೆ ಎಚ್ಚರವಾದಾಗ ಇಜುಮಿ ಇರಲಿಲ್ಲ. ನಾನು ಹಾಸಿಗೆಯ ಪಕ್ಕದಲ್ಲಿದ್ದ ಗಡಿಯಾರವನ್ನು ನೋಡಿದೆ. ಹನ್ನೆರಡು ಮೂವತ್ತು. ತಡಕಾಡುತ್ತಾ ಲ್ಯಾ೦ಪ್ ಹಚ್ಚಿದೆ. ರೂಮಿನ ಸುತ್ತ ದೃಷ್ಟಿ ಹಾಯಿಸಿದೆ. ನಾನು ಗಾಢ ನಿದ್ರೆಯಲ್ಲಿದ್ದಾಗ ಯಾರೋ ಕದ್ದು ಒಳ ನುಗ್ಗಿ ಸುತ್ತಲೂ ನಿಶ್ಯಬ್ದವನ್ನು ಹರಡಿಟ್ಟು ಹೋದ ಹಾಗೆ ಎಲ್ಲವೂ ಸ್ತಬ್ದವಾಗಿದ್ದವು. ನಾನು ಎದ್ದು ಹೊರಗೆ ಬಂದು ಹಾಲಿನಲ್ಲಿ ಹುಡುಕಾಡಿದೆ. ಇಜುಮಿ ಅಲ್ಲಿರಲಿಲ್ಲ.
ಸಚೇತನ ಭಟ್ ಅನುವಾದಿಸಿದ ಜಪಾನಿನ ಪ್ರಸಿದ್ಧ ಕತೆಗಾರ ಹರುಕಿ ಮುರಕಮಿ ಕತೆ “ಮನುಷ್ಯನನ್ನು ತಿನ್ನುವ ಬೆಕ್ಕುಗಳು”