Advertisement
ಸಚಿನ್ ಎ ಜೆ

ಸಚಿನ್ ಎ ಜೆ  ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ...

ಲೇಡೀಸ್ ಹಾಸ್ಟೆಲ್ ದಯ್ಯ ಬಿಡಿಸಿದ ಭಟ್ಕಳದ ಬಾಲೆ

ನನ್ನಲ್ಲಿ ಲೇಡೀಸ್ ಹಾಸ್ಟೆಲ್ ಬಗೆಗೊಂದು ಅಸೀಮ ಕುತೂಹಲ ಬೆಳೆದಿತ್ತು. ಹಾಸ್ಟೆಲ್ ನಲ್ಲಿ ಹುಡುಗಿಯರ ಸಾಮ್ರಾಜ್ಯ ಹೇಗಿದ್ದೀತು? ಹರಟೆಯ ಹೊತ್ತಲ್ಲಿ ಏನೆಲ್ಲ ವಾಗ್ವಾದ ನಡೀಬಹುದು? ಅಡುಗೆ ಸರೀಗಿಲ್ಲ ಅಂದ್ರೆ ಅಡುಗೆಯವ್ರಿಗೆ ಕ್ಲಾಸ್ ತಗೋತಾರಾ? ಪೊಲಿಟಿಕ್ಸ್ ಬಗ್ಗೆ ಮಾತಾಡ್ತಾರಾ? ಹೊಡೆದಾಟಗಳು ನಡೆದ್ರೆ ಹೇಗೆ ನಡೀತದೆ? ಸಂಚುಗಳು ಹೆಂಗೆ ಎಕ್ಸಿಕ್ಯೂಟ್ ಆಗ್ತವೆ? ರೂಮು ಗಲೀಜು ಇಟ್ಕೊಂಡಿರ್ತಾರಾ ಅಥವಾ ಸಿಕ್ಕಾಪಟ್ಟೆ ನೀಟಾಗಿರ್ತದಾ?… ಹೀಗೆ ತರಹೇವಾರಿ ತರ್ಕಗಳು -ಸಹ್ಯಾದ್ರಿ ನಾಗರಾಜ್ ಬರೆಯುವ ‘ಸೊಗದೆ’ ಅಂಕಣ ನಿಮ್ಮ ಓದಿಗೆ.

Read More

ಕಳ್ಳರ ಸಹವಾಸದಲ್ಲಿ ಕಳೆದ ಎರಡು ಸಾಹಸಿ ದಿನಗಳು

ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು.
-‘ಸೊಗದೆ’ ಅಂಕಣದಲ್ಲಿ ಕಳ್ಳರ ಚಮತ್ಕಾರಗಳನ್ನು ಬರೆದಿದ್ದಾರೆ ಸಹ್ಯಾದ್ರಿ ನಾಗರಾಜ್

Read More

ಸೊಂಟಕ್ಕೆ ಕೆಂಪು ದುಪಟ್ಟಾ ಕಟ್ಟಿಕೊಂಡ ಹುಡುಗಿ

ಅದ್ಯಾವ ಗಳಿಗೆಯಲ್ಲಿ ನಮ್ಮೂರಿನ ಮಂದಿಯ ತಲೆಯೊಳಗೆ ‘ಟೈಟಾನಿಕ್’ ಹುಳು ಬಿಟ್ಟಿದ್ದರೋ ಕಾಣೆ. “ಹಡಗು ಮುಳುಗೋ ಸಿನ್ಮಾ ನೋಡೋಕೆ ಹೋಗ್ತಿದ್ದೀವಿ,” ಅಂತ ಹಲ್ಕಿರಿಯುತ್ತ, ಕೂಲಿಯನ್ನೂ ಬಿಟ್ಟು ಬಸ್ಸು ಹತ್ತಿದ್ದ ನಮ್ಮೂರ ಮಂದಿಯ ಹುರುಪು ನೆನೆದರೆ ಹೆಮ್ಮೆ, ಪ್ರೀತಿ. ಆ ಸಿನಿಮಾ ತರೀಕೆರೆಯ ಟಾಕೀಸಿನಲ್ಲಿ ಇದ್ದ ಅಷ್ಟೂ ದಿನ ಊರಿನ ಒಂದಲ್ಲ ಒಂದು ತಲೆ ಮಾರ್ನಿಂಗ್ ಶೋ ಕಂಡದ್ದಿದೆ.
ಸೊಗದೆ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಬರಹ.

Read More

ಭದ್ರಾವತಿ ರಸ್ತೆಗಂಟಿದ ಕೆಮ್ಮಣ್ಣುಗುಂಡಿ ಕತೆಗಳು

ಒಂದೇ ಒಂದು ನಿಮಿಷದ ಹಿಂದಷ್ಟೇ, ಯಾವುದೋ ಆಶ್ರಮವೊಂದರ ಆರಾಮ ವಾತಾವರಣದಂತಿದ್ದ ತರೀಕೆರೆ ಆಸ್ಪತ್ರೆ, ಇದ್ದಕ್ಕಿದ್ದಂತೆ ಬದಲಾಗಿತ್ತು. ಎಮರ್ಜೆನ್ಸಿ ವಾರ್ಡಿನ ಉದ್ದಗಲಕ್ಕೂ ರಕ್ತ ಚೆಲ್ಲಿತ್ತು. ಎತ್ತ ತಿರುಗಿದರೂ ಡಾಕ್ಟರ್, ನರ್ಸ್‌ಗಳು. ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಂಬುದೊಂದೂ ಕಣ್ಣಿಗೆ ಅರಿವಾಗದ ಅಯೋಮಯ ಸನ್ನಿವೇಶ.
ಸಹ್ಯಾದ್ರಿ ನಾಗರಾಜ್‌ ಬರೆಯುವ ಅಂಕಣ ‘ಸೊಗದೆ’

Read More

ನಟ ರಾಜ್‌ಕುಮಾರ್ ಕೇಳಿದ ಭೂಮಿ ತೂಕದ ಕ್ಷಮೆ

ಅವರ ಈ ಹಾಡು ನನ್ನನ್ನು ಯಾವ ಪರಿ ಹಿಂಬಾಲಿಸೋಕೆ ಶುರುಮಾಡಿತೆಂದರೆ, ಕ್ಲಾಸಿಗೆ ಹೋಗುವ ಮುಂಚೆ ದಿನವೂ ಕೇಳಿ-ಕೇಳಿ, ಪ್ಲೇ ಲಿಸ್ಟ್‌ನಲ್ಲಿ ಮೊದಲ ಪಟ್ಟಕ್ಕೇರಿ ಕುಂತಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ತುಂಬಾ ಬೇಸರಾದಾಗ ರಫಿ ಹಾಡು ಕೇಳುವ ಅಭ್ಯಾಸ ಇದ್ದುದುಂಟು. ದುಃಖದಲ್ಲಿ ಅದ್ದಿ ತೆಗೆದೂ, ಆ ದುಃಖದಿಂದ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವ ಆಪ್ತ ದನಿಯದು. ಆದರೆ, ರಾಜ್‌ಕುಮಾರ್ ಈ ಹಾಡಿನಲ್ಲಿ..”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ