Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದ ಇವರು ಪ್ರಸ್ತುತ ಹೈದರಾಬಾದಿನಲ್ಲಿರುವ ‘ಅರೋರಾಸ ತೆಕ್ನೊಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಮರೆಯಲಾಗದ ಆ ನಾಲ್ಕು ರಾತ್ರಿಗಳು

ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು.

Read More

ಕ್ಲಾಸ್‌ಮೇಟ್ಸುಗಳ ಮಕ್ಕಳು ಮತ್ತು ಫಯಾಜ್‌ನ ಪುಲಾವು

‘ಮದುವೆಯಾದ ನಂತರ ಗಂಡು ಅಡುಗೆ ಮಾಡುವುದು ಅವಮಾನ, ಅದೇನಿದ್ದರೂ ಹೆಂಡತಿಯ ಕೆಲಸ’ ಎಂಬ ಅರೆಬೆಂದ ಅಲಿಖಿತ ಕಟ್ಟುಪಾಡೊಂದು ಉಂಟಲ್ಲ, ಅದು ಮೌಢ್ಯ. ಮದುವೆಯಾದ ನಂತರವೂ ಅಡುಗೆ ಕೆಲಸಗಳನ್ನು ಮಾಡುವುದು ಖಂಡಿತ ಅವಮಾನದ ಸಂಗತಿಯಲ್ಲ. ಬದಲಿಗೆ, ಪ್ರೀತಿ ಹೆಚ್ಚಿಸುವ ಸಂಗತಿ. ಕುಟುಂಬವೊಂದು ಹೀಗಿದ್ದಾಗ, ಅದು ಮಕ್ಕಳ ಯೋಚನಾ ಲಹರಿಯ ಮೇಲೂ ಪರಿಣಾಮ ಬೀರುತ್ತದೆ.  ಅಪ್ಪನ ಈ…

Read More

ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

ಗೆಳೆಯರೆಲ್ಲ ಸೇರಿ ಏನೇನೋ ಸವಾಲು ಹಾಕಿಕೊಂಡು, ಅವರಲ್ಲಿ ಇಬ್ಬರು ಸ್ಮಶಾನಕ್ಕೆ ಹೋಗುವುದು, ದೆವ್ವ ಗೆಳೆಯನ ವೇಷ ಧರಿಸಿ ಬಂದರೆ ಪತ್ತೆ ಮಾಡಲೆಂದು ಕೋಡ್‌ವರ್ಡ್ ನಿಕ್ಕಿ ಮಾಡಿಕೊಳ್ಳುವುದು, ನಂತರ ಆಗುವ ಅವಾಂತರಗಳು, ಬೂದಿಯಲ್ಲಿ ಮುಳುಗೆದ್ದ ಕಜ್ಜಿ ನಾಯಿಯೊಂದು ಫಾಲೋ ಮಾಡುವುದು, ಧೈರ್ಯವಂತನೊಬ್ಬ ಸವಾಲು ಸ್ವೀಕರಿಸಿ ಮಧ್ಯರಾತ್ರಿಯಲ್ಲಿ ಸುಡುಗಾಡಿಗೆ ಹೋಗಿ, ಗುರುತಿಗೆಂದು ಗೂಟ ಬಡಿಯುವಾಗ ತನ್ನ ಬಟ್ಟೆಯನ್ನೂ ಸೇರಿಸಿ ಬಡಿದು…

Read More

ಗೋಡೆಯಿಂದ ಹಾರಿದ ಹಾವುಗಳು ಮತ್ತು ಗೋಡೆಗಂಟಿದ ಮನುಷ್ಯರು

ಊರಿನ ಪ್ರತಿ ಬೀದಿಯನ್ನೂ ಅಲಂಕರಿಸಿದ್ದ ಹೊಗೆಸೊಪ್ಪಿನ ಬ್ಯಾರಲ್‌ಗಳ ಪೈಕಿ ವರ್ಷಕ್ಕೆ ಒಂದಾದರೂ ಬೆಂಕಿಯೊಳಗೆ ಕುಣಿಯುವುದು ಕಾಯಂ ಆದಮೇಲೆ, ಅವುಗಳನ್ನು ಊರಿಂದ ಆಚೆ ಹಾಕುವ ಮಹಾ ಸಂಚಿಕೆಗಳು ಶುರುವಾದವು. ಫಯರ್ ಆಫೀಸಿನವರ ಎಚ್ಚರಿಕೆಗಳು, ಪೊಲೀಸಿನವರ ಖಾರದ ಮಾತು, ಬ್ಯಾರಲ್ ಸುತ್ತಮುತ್ತಲ ಮನೆಗಳ ಮಂದಿಯ ತಕರಾರುಗಳ ಫಲವಾಗಿ ಬಹುತೇಕ ಬ್ಯಾರಲ್‌ಗಳು ಸದ್ದಿಲ್ಲದಂತೆ ಊರಿಂದ ಆಚೆ ನಡೆದವು. ಹಾಗಂತ ಸಮಸ್ಯೆಗಳೂ ಊರಾಚೆ ನಡೆದು ಹೋದವು ಎನ್ನುವ ಹಾಗಿಲ್ಲ. ‘ಸೊಗದೆ’ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್  ಹೊಗೆಸೊಪ್ಪು ಬ್ಯಾರಲ್ ಗಳ ಕುರಿತು ಬರೆದಿದ್ದಾರೆ. 

Read More

ಕವಿಶೈಲದ ಹುಲಿಯೂ ದೂರದ ಕುದುರೆಮುಖವೂ

ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು.…

Read More

ಬರಹ ಭಂಡಾರ