ಕಾಡು ಮತ್ತು ಕಾಡಬೆಳುದಿಂಗಳು… ಶ್ರೀಧರ ಪತ್ತಾರ ಬರಹ
ನೀರವ ರಾತ್ರಿಗಳಲ್ಲಿ ನನ್ನಲ್ಲಿ ಆಗಾಗ ಒಂಟಿತನ ಹೆಡೆಯಾಡಿಸುವುದೂ ಉಂಟು. ಮಾತುಗಳು ಜಾರಿ ನನ್ನನ್ನು ಮೌನ ಕವಚಿಕೊಂಡಾಗ ಸಹಜವಾಗಿಯೇ ಮುಗಿಲು ದಿಟ್ಟಿಸುತ್ತೇನೆ. ಅಂತೆಯೇ ಈಗೀಗ ಚಂದ್ರನನ್ನು ದಿಟ್ಟಿಸುತ್ತಾ ಚುಕ್ಕಿಗಳೆಣಿಸುವ ಅಭ್ಯಾಸ ಶುರುವಾಗಿದೆ ನನಗೆ. ಆಗ ಚಂದಿರನ ಮೊಗದಲ್ಲಿ ಪ್ರತಿಫಲಿಸುವ ಅವಳಂತದೇ ನಗು ಕಾಣುತ್ತದೆ. ನಗೆಯುಕ್ಕಿಸುತ್ತಿರುವುದು ಚಂದ್ರನೋ ಇಲ್ಲ ಅವಳೋ… ಹೀಗೂ ಒಮ್ಮೊಮ್ಮೆ ಗೊಂದಲವಾಗುವುದು.
ಶ್ರೀಧರ ಪತ್ತಾರ ಬರಹ ನಿಮ್ಮ ಓದಿಗೆ