ಕೊಡು ಶಿವನೆ ಕುಡುಕನಲ್ಲದ ಗಂಡನ: ಸುಧಾ ಆಡುಕಳ ಅಂಕಣ
ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ