Advertisement
ಸಚಿನ್ ಎ ಜೆ

ಸಚಿನ್ ಎ ಜೆ  ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ...

ಜಂಬೋಸರ್ಕಸ್ ಮತ್ತು ವಸಂತ ಚಂದಿರ: ಸುಮಾವೀಣಾ ಸರಣಿ

ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ ಆ ದಿನ ಆಯ ತಪ್ಪಿ ಉದ್ದನೆಯ ಕತ್ತಿ ಹೊಟ್ಟೆಯನ್ನು ತೂರಿ ಬೆನ್ನಿಂದ ಆಚೆ ಬರುತ್ತಿರುವಾಗಲೂ ಇದೂ ಒಂದು ಕಸರತ್ತು ಎಂದು ನೋಡಿದ ಪ್ರೇಕ್ಷಕರು ಇದ್ದರು. ಮರುದಿನ ಶಕ್ತಿ ಪೇಪರಿನಲ್ಲಿ ಆದ ದುರ್ಘಟನೆ ಬಗ್ಗೆ ಸುದ್ದಿ ಓದಿ ಎಷ್ಟೋ ಜನರು ಬೇಸರಿಸಿದ್ದಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಪುಷ್ಪನಗರಿ ಮಡಿಕೇರಿ: ಸುಮಾವೀಣಾ ಸರಣಿ

ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಬದುಕು ಇರುವುದು ಬದುಕಲು.. ಕಳೆದುಕೊಳ್ಳಲಲ್ಲ: ಸುಮಾವೀಣಾ ಸರಣಿ

ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಒಟ್ಟಿಗೆ ಬಾಳಿದ ತೆರದಿ… : ಸುಮಾವೀಣಾ ಸರಣಿ

ನಮ್ಮಲ್ಲಿ ನಿದ್ರೆಯಲ್ಲಿ ಬೆಚ್ಚಿ ಬೀಳುವ, ಮಾತನಾಡುವವರು ಇದ್ದರು. ಜೊತೆ ಜೊತೆಗೆ ವಾಯುವಾತದ ನಾನಾ ಸದ್ದು….. ನಮ್ಮ ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಬಿಟ್ಟರೆ ಸೆಲ್ ಫೋನ್‌ಗಳು ಇರಲಿಲ್ಲ. ಇದ್ದಿದ್ದರೆ ಅದೆಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದವೋ ಏನೋ? ಗೊತ್ತಿಲ್ಲ! ಆದರೂ ಒಬ್ಬಾಕೆ ನಿದ್ರೆಯಲ್ಲಿ ಓಡಾಡುತ್ತಿದ್ದಳು. ಅದೊಂದು ಡಿಸಾರ್ಡರ್‌ ಎನ್ನುತ್ತಾರೆ. ಅವರನ್ನು ತಕ್ಷಣಕ್ಕೆ ಎಬ್ಬಿಸಬಾರದು ಇತ್ಯಾದಿ ಇತ್ಯಾದಿ……
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ