ಇರಲಿರಲಿ ಇಲಿಗಳು ಇಳೆಯಲಿ: ಸುಮಾವೀಣಾ ಅಂಕಣ
ಇಲಿಗಳು ಮನುಷ್ಯನನ್ನು ಬುದ್ಧಿಮತ್ತೆಯಲ್ಲಿ ಹೋಲುತ್ತವೆ ಎನ್ನುತ್ತಿದ್ದಂತೆ ಸಾಮಾಜಿಕ ಮತ್ತು ಹಾಸ್ಯ ಭರಿತ ಕುವೆಂಪುರವರ ಕೃತಿ ಮಕ್ಕಳ ನಾಟಕ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನೆನಪಾಗುತ್ತದೆ. ಕಿಂದರಿ ಬಾರಿಸುವುದರ ಮೂಲಕ ನೂರಾರು ಇಲಿಗಳನ್ನು ಒಟ್ಟುಗೂಡಿಸಿ ಧಾನ್ಯಗಳ ಕಣಜಗಳನ್ನು ನಾಶಮಾಡಿಸುತ್ತಾನೆ. ಅವುಗಳ ಉಪದ್ರ ತಾಳಲಾರದೆ ‘ಅವುಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಸಾವಿರಹೊನ್ನು ಕೊಡುತ್ತೇವೆ’ ಎಂದ ಗ್ರಾಮಸ್ಥರು ಅವುಗಳನ್ನು ಕಿಂದರಿಜೋಗಿ ಹಿಂದಕ್ಕೆ ಕರೆಸಿಕೊಂಡ ನಂತರ ಮಾತಿಗೆ ತಪ್ಪುತ್ತಾರೆ ಮೋಸ ಹೋದ ಕಿಂದರಿ ಜೋಗಿ ಕಿಂದರಿ ಬಾರಿಸಿ ಇಲಿಗಳನ್ನು ಮಕ್ಕಳೆದುರು ಪುನಃ ಕರೆಸಿ ಗ್ರಾಮಸ್ಥರ ವಂಚನೆಯ ಸ್ವಭಾವವನ್ನು ಬಯಲಿಗೆಳೆಯುತ್ತಾನೆ. ಆದರೂ ರೈತರ ಪಾಲಿಗೆ ಇಲಿಗಳು ಬೆಳೆನಾಶ ಮಾಡಿ ವಿಲನ್‌ಗಳೆ ಆಗಿವೆ ಬಿಡಿ.
ಸುಮಾವೀಣಾ ಹೊಸ ಅಂಕಣ “ನುಡಿನಲಿವು”

