Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ದೀಪಾವಳಿ, ವಿಭಿನ್ನತೆ, ಏಕತೆ: ವಿನತೆ ಶರ್ಮ ಅಂಕಣ

“ಭಾರತೀಯರೆಲ್ಲರೂ ದೀಪಾವಳಿಯಲ್ಲಿ ಅದ್ದಿ ಮುಳುಗಿಕೊಂಡು ಇರುವಾಗಲೇ, ವಾರಾಂತ್ಯದ ಹಬ್ಬದ ಆಚರಣೆಗಳು ಇನ್ನೂ ಗಮ್ಮತ್ತಿನಿಂದ ನಡೆಯುತ್ತಿರುವಾಗಲೇ ಅತ್ತ ಕಡೆ ಯಾವುದೇ ಸದ್ದಿಲ್ಲದೇ ಗುಮ್ಮನಂತೆ ಕ್ರಿಸ್ಮಸ್ ಹಬ್ಬ ಅಂಗಳಕ್ಕೆ ಕಾಲಿಡುತ್ತದೆ. ಇದ್ದಕ್ಕಿಂದ್ದಂತೆ, ನೋಡನೋಡುತ್ತಾ ಇಡೀ ನಗರ ಕ್ರಿಸ್ಮಸ್ ಹಬ್ಬಕ್ಕೆ ಸಜ್ಜಾಗಿಬಿಡುತ್ತದೆ.”

Read More

ಹೇಗೆಂದು ಹೇಳುವುದು ಹೇಗೆಂದು ಕೇಳುವುದು?:ವಿನತೆ ಶರ್ಮ ಅಂಕಣ

“ನನ್ನ ಆಸ್ಟ್ರೇಲಿಯಾದ ಆರಂಭದ ದಿನಗಳಲ್ಲಿ ಒಬ್ಬ ಹೆಂಗಸಾಗಿ ಮೊದಲ ಬಾರಿಗೆ ‘ಅಯ್ಯೋ, ಅವನು/ಅವರು ಬೇಕಂತಲೇ ಮೈ ತಾಕಿಸಬಹುದು,ಅಶ್ಲೀಲವಾಗಿ ಮಾತನಾಡಬಹುದು’ ಎಂಬ ಆತಂಕವಿಲ್ಲದೆ,ಅನುಮಾನವಿಲ್ಲದೆ ಆರಾಮಾಗಿ ವಲೊಂಗೊಂಗ್ ಬೀದಿಗಳಲ್ಲಿ, ಯೂನಿವರ್ಸಿಟಿಯಲ್ಲಿ ಓಡಾಡುವುದು ನನಗೆ ವಿಪರೀತ ಖುಷಿ ಕೊಟ್ಟಿತ್ತು.”

Read More

ವಲಸೆ ಬಂದವರಿಗೇ ಅಪರಿಚಿತರಾದವರ ಕಲಾಕೃತಿಗಳು

ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ.

Read More

ಆಸ್ಟ್ರೇಲಿಯಾದಲ್ಲಿ ಸಾವಯವ ಆಹಾರ:ವಿನತೆ ಶರ್ಮಾ ಅಂಕಣ

“ನಾನು ಬ್ರಿಸ್ಬನ್ ನಗರದಲ್ಲಿ ಮಾವು, ಬೇವು, ಬಸಳೆ, ಪರಂಗಿಹಣ್ಣು ಇತ್ಯಾದಿಗಳನ್ನು ನೋಡಿದಾಗ ಉಷ್ಣವಲಯದ ತರಕಾರಿ ಬೆಳೆದುನೋಡೋಣ ಅನ್ನೋ ಆಸೆಗೆ ಬಿದ್ದೆ. ಅಲ್ಲಿಯವರೆಗೂ ಹೂ, ತರಕಾರಿ, ಹರ್ಬ್ಸ್ ಗಳನ್ನ ಪಾಟ್ ಗಳಲ್ಲಿ ಬೆಳೆಸಿ ಊರು ಬಿಟ್ಟು ಬರುವಾಗ ಸ್ನೇಹಿತರಿಗೆ ಅವನ್ನ ಕೊಟ್ಟು ಮುಂದೆಸಾಗುತ್ತಿದ್ದೆ.”

Read More

ರಾಣಿಯ ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ರಾದ್ಧಾಂತಗಳು

“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ