Advertisement

ಡಾ. ಎಲ್.ಜಿ. ಮೀರಾ

ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ಆಧುನಿಕತೆಯನ್ನು ಹಿಗ್ಗಿಸುತ್ತಾ ನಾವೆಷ್ಟು ಮುನ್ನಡೆಯುತ್ತಿದ್ದೇವೊ ಅಷ್ಟೆ ಪ್ರಮಾಣದಲ್ಲಿ ನಮ್ಮ ಅವಲಂಬನೆಗಳೂ ಹೆಚ್ಚುತ್ತಿವೆ. ಕಾರ್ಪೊರೇಟ್, ಐಟಿ ವಲಯದಲ್ಲಿ ಕೆಲಸ ಮಾಡುವವರು ದಿನವೂ ಕುಡಿಯುವ ಕಾಫಿ ಅವಲಂಬನೆ, ನರ್ಸರಿ ಮಕ್ಕಳ ಕೈಯಲ್ಲಿ ಇರುವ ಐಪ್ಯಾಡ್ ಅವಲಂಬನೆ, ತನ್ನ ಇಡೀ ಯೂನಿವರ್ಸಿಟಿ ಡಿಗ್ರಿ ಕಲಿಕೆಯನ್ನು ಕೈಯಲ್ಲಿರುವ ಫೋನ್ ಮೂಲಕವೇ ಮಾಡಿ ಮುಗಿಸುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಚಲಿಸುತ್ತಿರುವ ಬಸ್ಸಿನಲ್ಲಿ ಕೂತಿರುವ ಪ್ರಯಾಣಿಕನೊಬ್ಬ ಕೂತ ಜಾಗದಲ್ಲೆ ಲ್ಯಾಪ್-ಟಾಪ್ ಮತ್ತು ಹೆಡ್‌ಫೋನ್ಸ್ ಬಳಸುತ್ತಾ ಮೀಟಿಂಗ್‌ನಲ್ಲಿ ಭಾಗವಹಿಸುವುದು ಅದರ ಜೊತೆಗೆ ಸ್ಯಾಂಡ್ವಿಚ್ ತಿಂದು ಮುಂದಿನ ಮೀಟಿಂಗ್‌ಗೆ ತಯಾರಾಗುವುದು ಆಧುನಿಕತೆಯ ಕೆಲ ತಲ್ಲಣಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಆಸ್ಟ್ರೇಲಿಯಾದ ಎನ್‌ಡಿಐಎಸ್‌ ಅನುದಾನದ ಏಳುಬೀಳುಗಳು: ಡಾ. ವಿನತೆ ಶರ್ಮ ಅಂಕಣ

ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಮನೆಮನೆ ಕೈತೋಟದಲ್ಲಿದೆ ಸಮುದಾಯ ಸೌಖ್ಯ: ಡಾ. ವಿನತೆ ಶರ್ಮ ಅಂಕಣ

ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಯುದ್ಧ, ಇಂಧನಗಳ ತಕ್ಕಡಿಯಲ್ಲಿ ನಾವು: ಡಾ. ವಿನತೆ ಶರ್ಮ ಅಂಕಣ

ಪೆಟ್ರೋಲ್ ಕಾರ್ ಓಡಿಸುವ ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಹೆಚ್ಚಾಗಿವೆ. ಹಾಗೆಯೆ ಟ್ರಂಪಣ್ಣನನ್ನು ಬಯ್ಯುವುದೂ ಜಾಸ್ತಿಯಾಗಿದೆ. ಅವರಿಗೆ ತಮ್ಮ ಮತಕೊಟ್ಟು, ಸರ್ಕಾರದ ಯಂತ್ರವನ್ನು ದುರುಪಯೋಗ ಮಾಡಲು ಅಧಿಕಾರ ಕೊಟ್ಟ ಅಮೆರಿಕನ್ನರಿಗೂ ಒಂದಷ್ಟು ಬಯ್ಗುಳ. ಕೇವಲ ಒಂದು ದೇಶವು ಇಡೀ ಪ್ರಪಂಚದ ಮೇಲೆ ವಜ್ರಮುಷ್ಠಿ ಹತೋಟಿಯನ್ನು ಇಟ್ಟುಕೊಂಡಿರುವುದು ಆಶ್ಚರ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಆಸ್ಟ್ರೇಲಿಯಾ-ಭಾರತೀಯರ ಕತೆಗಳ ಜುಗಲ್ ಬಂದಿ: ಡಾ. ವಿನತೆ ಶರ್ಮ ಅಂಕಣ

ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ