Advertisement

ದೇವಿಕಾ ನಾಗೇಶ್

ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಪಕ್ಕದ ಮನೆಯ ಅಂಗಳದಲ್ಲಿರುವ ನಮ್ಮನೆ ಬೇಲಿಗೆ ಆತುಕೊಂಡಿರುವ ಮುರಯ (Murraya) ಮರ ಮೈತುಂಬಾ ಬಿಳಿ ಹೂ ಧರಿಸಿ ನಗುತ್ತಿದೆ. ಶುಭ್ರ ಬಿಳಿ ಹೂ ರಾಶಿ, ಕಡು ಹಸಿರು ಎಲೆಗಳು ಒಂದಕ್ಕೊಂದು ಅಪ್ಪಿಕೊಂಡು ಆ ಬಿಳಿಹಸಿರು ಚಾದರವನ್ನು ಅಪ್ಪಿಕೊಳ್ಳುವ ಆಸೆಯಾಗುತ್ತದೆ. ಹೂಗಳ ಘಮಘಮದಿಂದ ಮೂಗು ಅರಳುತ್ತದೆ. ಹೂಗೊಂಚಲಿನಲ್ಲಿ ಮೊಗ್ಗುಗಳೆ ಹೆಚ್ಚಿರುವುದಕ್ಕೊ ಏನೋ ಅವಕ್ಕೆ ಇನ್ನೂ ಜೇನ್ನೊಣಗಳ ಆಗಮನವಾಗಿಲ್ಲ. ಜೇನ್ನೊಣಗಳ ದಂಡು ಬಂದಾಗ ಅವುಗಳ ಝೇಂಕಾರದ ನಿನಾದ, ಮುರಯ ಹೂ ಗೊಂಚಲುಗಳ ಅಂದ, ತಂಪೇರಿದ ಸಂಜೆ ಮತ್ತು ತರಿಸುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಬಂದೇ ಬಿಟ್ಟ ಆಲ್ಫ್ರೆಡ್: ಡಾ. ವಿನತೆ ಶರ್ಮ ಅಂಕಣ

ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರದಿಂದ ನಮ್ಮ ಸ್ಥಳೀಯ ನಗರಪಾಲಿಕೆಗಳು ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿವೆ. ‘ಸೇಫ್ಟಿ ಫಸ್ಟ್’ ಎನ್ನುವ ಮಂತ್ರವನ್ನು ಜಪಿಸಿ ನಮ್ಮ ಯೂನಿವರ್ಸಿಟಿಗಳು, ಶಾಲೆಗಳು, ಅಂಗಡಿ ವಹಿವಾಟುಗಳು, ಕಚೇರಿಗಳು ಬಾಗಿಲು ಮುಚ್ಚಿದವು. ಅದಕ್ಕೆ ಮುನ್ನ ಮಂಗಳವಾರದಿಂದ ಎಲ್ಲಾ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರ ನೂಕುನುಗ್ಗಲು. ಆಹಾರ ಪದಾರ್ಥ, ಕುಡಿಯುವ ನೀರು, ಟಾಯ್ಲೆಟ್ ಪೇಪರ್ ರೋಲ್, ಇತ್ಯಾದಿಗಳು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಾಯ! ಬ್ರೆಡ್, ಹಾಲು, ಮೊಟ್ಟೆಗಳು ಸಿಕ್ಕುವುದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ನಾವು ಗುರುವಾರ ಅಲ್ಲಿಇಲ್ಲಿ ಹುಡುಕಾಡಿದ್ದಾಯ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹೊಸವರ್ಷ, ಹೊಸಜೀವನದ ಮಜಲುಗಳು: ವಿನತೆ ಶರ್ಮ ಅಂಕಣ

ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಭಾರತೀಯ-ಬ್ರಿಟಿಷ್ ಸಂಧಿಯಾದ ಸೆಂಚುರಿ ಕ್ಲಬ್: ವಿನತೆ ಶರ್ಮ ಅಂಕಣ

ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್‌ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ