ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರ ಅಲ್ಜೀರಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಅಲ್ಜೀರಿಯಾದ ಜನರು ಫುಟ್‌ಬಾಲ್, ವಾಲಿಬಾಲ್ ಕ್ರೀಡೆಗಳ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸಾಧನೆ ಮೆರೆದಿದ್ದಾರೆ. ಸಾವಿರದೈನೂರು ಮೀಟರ್‌ಗಳ ಓಟದ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಅಥ್ಲೀಟ್‌ಗಳ ಸಾಧನೆ ಮೆಚ್ಚುವಂಥದ್ದಾಗಿದೆ. ಹಲವು ಸಲ ಗೆಲುವಿನ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
