ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ