Advertisement

Category: ದಿನದ ಪುಸ್ತಕ

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

“ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ…”

Read More

‘ಕುವೆಂಪು ಸಮಗ್ರ ಸಾಹಿತ್ಯ’ ಸರಣಿಯ ಕುರಿತು ಡಾ. ಮೊಗಳ್ಳಿ ಗಣೇಶ್ ಬರೆದ ಲೇಖನ

“ಬಸವಣ್ಣ ಅವರ ಕ್ರಾಂತಿಯ ವಿಸ್ತರಣೆ ಇಲ್ಲೆಲ್ಲ ಪ್ರಭಾವ ಮಾಡಿದೆ. ಅಷ್ಟಿಲ್ಲದಿದ್ದರೆ ಬುದ್ಧ ಬಸವ ಅಂಬೇಡ್ಕರ್ ಎಂದು ದಲಿತ ಬಂಡಾಯದ ಲೇಖಕರು ಒಪ್ಪಿಕೊಂಡು ಕುವೆಂಪು ಸಾಹಿತ್ಯವನ್ನು ಇಷ್ಟು ಪರಿಯಲ್ಲಿ ಸಮರ್ಥಿಸಲು ಮುಂದಾಗುತ್ತಿರಲಿಲ್ಲ. ಬಸವಣ್ಣ ಅವರ ನಂತರಕ್ಕೆ ದೊಡ್ಡ ಮಟ್ಟದ ಅವೈದಿಕ ಲೇಖಕ ಕಾಣಿಸಿದ್ದು ಕುವೆಂಪು ಅವರಲ್ಲಿ ಮಾತ್ರ. ಎಂತಹ ಯುಗ ಸಂಯೋಜನೆಯ ಸೃಜನಶೀಲತೆಯ ಲೇಖನ”

Read More

ದೊಡ್ಡವರಿಗೂ ಸಲ್ಲುವ ಮಕ್ಕಳ ಕಥೆಗಳು

“ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.”

Read More

‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ

“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”

Read More

ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹ

“ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು ಅನಾದರಿಸದೇ ನವೋನ್ಮೇಷವೆಂದು ಕೊಂಡಾಡುವ ನಾಟಕೀಯತೆ, ಸೋಗುಗಳನ್ನು ತೋರದೇ ಸಹಜವಾಗಿ ಸಂವಾದಿಸುವ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ