ನಾನೊಬ್ಬಳು ಚಾಣಾಕ್ಷ ಹುಡುಗಿಯೇ ಆಗಿದ್ದೆ!: ಜುಲೇಖಾ ಬೇಗಂ ಜೀವನ ವೃತ್ತಾಂತ
ಉಳಿದವರೆಲ್ಲ ಐದು ಪೈಸೆಗೆ ಒಂದರಂತೆ ಮಾರುತ್ತಿದ್ದರೆ, ನಾ ಮಾತ್ರ ‘ಆಣೆಗೊಂದ್ ಮಾಲೆ, ಯಾರಿಗ್ ಬೇಕು ತಗೊಳ್ರಿ, ತಗೊಳ್ರಿ ಆಣೆಗೊಂದ್’ ಎಂದು ವ್ಯಾಪಾರಕ್ಕಿಳಿಯುತ್ತಿದ್ದೆ. ‘ಅಲಾ ಅವ್ರ್‌ದೆಲ್ಲ ಬರೇ ಐದ್ ಪೈಸಾ. ನಿಂದೇನವ್ವಾ ಒಂದಾಣೆ?’ ಎಂದು ಕೇಳಿದ ಊರಿನವರಿಗೆಲ್ಲ, ‘ಹದಿನೇಳರಿಂದ ಇಪ್ಪತ್ತು ಸೇವಂತಿಗೆ ಹೂ, ಮಧ್ಯದಲ್ಲಿ ಬ್ಯಾಗಡಿ ನೋಡ್ರಿ, ಎಷ್ಟುದ್ದ ಐತಿ! ಒಂದು ಪೈಸೆ ಹೆಚ್ ಕೊಡ್ಬೇಕೊ ಬೇಡ್ವೋ?’ ಎನ್ನುತ್ತಿದ್ದೆ. ಕೇಳಿದವರು ಮಾಲೆಯನ್ನು ಕೊಂಡು, ಹುಡುಗಿ ಬಹಳ ಚುರುಕಿದ್ದಾಳೆಂದು ಶಭಾಸ್‌ಗಿರಿ ಕೊಡುತ್ತಿದ್ದರೆ, ಅಕ್ಕಪಕ್ಕದಲ್ಲಿದ್ದ ವ್ಯಾಪಾರಸ್ಥರು, ‘ಈಕಿ ಒಬ್ಬಾಕಿನೇನೊ ಜಾತ್ರಿಗ್ ಗೌರಿ!’ ಎಂದು ಮೂಗುಮುರಿಯುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”
