Advertisement

Category: ಸಂಪಿಗೆ ಸ್ಪೆಷಲ್

ಕನಕದಾಸರು ಕಟ್ಟಿದ ‘ಕಲ್ಯಾಣ’

ಗುಣ ಕರ್ಮಕ್ಕೆ ಅನುಸಾರಿಯಾಗಿ ವರ್ಣ ಸೃಷ್ಟಿಯಾಗಿದೆ ಅನ್ನುತ್ತದೆ ಭಗವದ್ಗೀತೆ. ಆದರೆ ಇಲ್ಲಿ ಗುಣ ಕರ್ಮ ಹುಟ್ಟುವ ಮೊದಲೇ ನಿಶ್ಚಯವಾಗಿರುತ್ತದೆ, ಎಂಬುದನ್ನು ಕಾಣಿಸಿಕೊಟ್ಟ ವಚನ ಚಳುವಳಿ ಇದಕ್ಕೊಂದು ಹೊಸ ಭಾಷ್ಯ ಬರೆಯಿತು. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ’ ಎನ್ನುತ್ತ ಜಾತಿ ಸಾಂಸ್ಥಿಕತೆಗೆ ಪ್ರತಿಭಟನೆ ತೋರಿತು. ‘ಉಳ್ಳವರು ಶಿವಾಲಯ ಮಾಡುವರು’ ಎನ್ನುತ್ತ ಸಾಂಸ್ಕೃತಿಕ ರೂಪದ ಪ್ರತಿಭಟನೆಯನ್ನೂ ರೂಪಿಸಿತು. ‘ಕೊಲುವವನೆ ಮಾದಿಗ’ ಎನ್ನುತ್ತ ಪಂಪನಕಾಲದ ಕುಲದ ಮರು ವ್ಯಾಖ್ಯಾನವನ್ನು ಮುಂದುವರಿಸಿತು.
ಕನಕ ಜಯಂತಿಯಂದು ಡಾ. ಶ್ರೀಪಾದ ಭಟ್ ಬರಹ

Read More

ನಡುಗನ್ನಡ ಕಾಲದ ಶತಕ ಸಾಹಿತ್ಯ ಸಮೀಕ್ಷೆ

ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ.
ನಡುಗನ್ನಡ ಕಾಲದ ಶತಕ ಸಾಹಿತ್ಯದ ಕುರಿತು ಡಾ. ರಾಜಶೇಖರ ಜಮದಂಡಿ ಬರಹ

Read More

ಕ್ಯಾತನಮಕ್ಕಿಯ ಕಾಲಮೇಲೆ ಕೂತು ಗಾಳಿಗುಡ್ಡವ ನೆನೆದು

ಕಿಲೋಮೀಟರ್ ದೂರದಲ್ಲಿ ಬೈಕು ನಿಲ್ಲಿಸಿ ನಮ್ಮ ಟ್ರೆಕಿಂಗ್ ಆರಂಭಿಸಿದಾಗ ಇದ್ದ ಉತ್ಸಾಹ, ಕ್ಯಾತನಮಕ್ಕಿಯನ್ನು ಅರ್ಧ ಹತ್ತಿದಾಗಲೇ ಬತ್ತುವುದರಲ್ಲಿತ್ತು. ಒಂಚೂರು ಕುಳಿತು ನೀರು ಕುಡಿದು ಕಚ್ಚಾ ರಸ್ತೆಯಲ್ಲಿ ಬೆವರಿಳಿಸಿ, ತುದಿ ತಲುಪುವಾಗ ಜೀಪಿನಲ್ಲಿ ಬಂದವರ ದರ್ಬಾರಿಗೆ ಮನವೊಮ್ಮೆ ಪಿಚ್ಚೆಂದಿತ್ತು. ಆದರೂ ನಡೆದು ಗಮ್ಯ ತಲುಪುವ ಸಾರ್ಥಕ ಭಾವ ಆರಾಮಾಗಿ ತೇಲಿ ಬಂದವರಿಗೆಲ್ಲಿ ಬರಬೇಕು ಎಂದು ನಮಗೆ ನಾವೇ ಬೆನ್ತಟ್ಟಿಕೊಂಡು ಮುನ್ನಡೆದೆವು.
ಚಿಕ್ಕಮಗಳೂರಿನ ‘ಕ್ಯಾತನಮಕ್ಕಿʼ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಶುಭಶ್ರೀ ಭಟ್ಟ

Read More

ಚುಕ್ಕೆ ರಾಟುವಾಳ, ನಾನು ಮತ್ತು ನಂಬಿಕೆ

ಬಹುಶಃ ಒಂದು ತಿಂಗಳಲ್ಲಿ ಅವುಗಳ ಗೂಡು ತಯಾರಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ೧೨-೧೩ ದಿನಗಳಲ್ಲಿ ಆ ಎರಡು ಲವ್ ಬರ್ಡ್ಸ್ ತಮ್ಮ ಗೂಡಿಗೆ ನಾಲ್ಕು ಹೊಸ ಅತಿಥಿಗಳ ಕೊಡುಗೆಯನ್ನು ಜಗತ್ತಿಗೆ ನೀಡಿದವು. ಕಿಟಗಿ ಹಿಂಭಾಗದಲ್ಲಿ ಅರೆ ಪಾರದರ್ಶಕ ಗಾಜಿನೊಳಗಿಂದ ಅವುಗಳನ್ನು ನೋಡುತ್ತಾ ಬಹಳ ಖುಷಿಯಾದೆ. ಅವುಗಳನ್ನು ಕಂಡು ಮಕ್ಕಳಂತೂ ಹಿಗ್ಗಿ ಕುಣಿದಾಡಿದರು. ಬೆಳಿಗ್ಗೆ ಎದ್ದೊಡನೆ ಅವುಗಳ ದರ್ಶನ..
ಚುಕ್ಕೆ ರಾಟುವಾಳ ಹಕ್ಕಿಯೊಂದಿಗಿನ ಪ್ರಸಂಗವನ್ನು ಬರೆದಿದ್ದಾರೆ ಮಹಮ್ಮದ್‌ ರಫೀಕ್‌ ಕೊಟ್ಟೂರು

Read More

ಲೇಖಕರ ಮತ್ತು ಓದುಗರ ನಡುವಿನ ಕೊಂಡಿ ಹೊಸೆಯುತ್ತಾ…

ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಮಾರ್ಗಗಳೇನು ಎಂಬುದೂ ಈ ಹೊತ್ತಿನಲ್ಲಿ ಚರ್ಚಿಸಬೇಕಾದ ವಿಷಯ. ರೂಪಶ್ರೀ ಕಲ್ಲಿಗನೂರ್‌ ಬರಹ ಇಲ್ಲಿದೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ