Advertisement

Category: ಸಂಪಿಗೆ ಸ್ಪೆಷಲ್

ಸರ್ವಶಕ್ತ ಮಹಿಳೆಯಲ್ಲ ನಾನು, ನಿಜ ಮಹಿಳೆ: ಎಲ್.ಜಿ.ಮೀರಾ ಬರಹ

ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ!
ಉದ್ಯೋಗಸ್ಥ ಮಹಿಳೆಯರು ಮನೆ-ಉದ್ಯೋಗ ಸಂಭಾಳಿಸುವುದರ ಕುರಿತು ಡಾ. ಎಲ್. ಜಿ. ಮೀರಾ ಬರಹ

Read More

ಶೀರ್ಷಿಕೆಗಳ ಸಂಗತಿ: ಅರುಣಾ ಜಿ ಭಟ್. ಬದಿಕೋಡಿ ಬರಹ

ಇತ್ತೀಚೆಗೆ ಕಾದಂಬರಿಗಳ ಶೀರ್ಷಿಕೆಗಳು ಅತಿ ಆಕರ್ಷಕವಾಗಿರಲು ಬಯಸುತ್ತಾರೆನೋ? ಹಾಗಾಗಿ ಹಿರಿಯ ಕವಿಗಳ ಕವಿತೆಯ ಸಾಲುಗಳನ್ನು ಕಾದಂಬರಿಗೆ ಶೀರ್ಷಿಕೆಯಾಗಿಸುತ್ತಾರೆ. ಆಹಾಹಾ… ಅದೇನು ಮೋಹಕ ಪದ ಮಾಲೆಗಳು! ಕೆಲವು ಸಲ ಆ ಸಾಲುಗಳಿಗೆ ಸೋತು, ಹೇಗಿದೆಯೆಂದು ಓದಲು ಹೊರಟರೆ! ಹತ್ತು ಸಾಲಿಗೆ ನಿಲ್ಲಿಸುವ ಹಾಗಾಗುತ್ತದೆ. ಅದು ಕಾದಂಬರಿಯೋ, ಲೇಖನವೋ? ಪ್ರಬಂಧವೋ? ಒಂದೂ ಗೊತ್ತಾಗದ ಹಾಗೇ.
ಸಾಹಿತ್ಯ ಕೃತಿಗಳ ಶೀರ್ಷಿಕೆಗಳ ಕುರಿತು ಅರುಣಾ ಜಿ ಭಟ್. ಬದಿಕೋಡಿ ಬರಹ

Read More

ಚಿಗುರು, ಮಳೆ ಮತ್ತು ಒಲವು…: ಮಹಾಲಕ್ಷ್ಮಿ ಕೆ. ಎನ್. ಬರಹ

ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.
ಮಹಾಲಕ್ಷ್ಮಿ ಕೆ. ಎನ್.‌ ಬರಹ ನಿಮ್ಮ ಓದಿಗೆ

Read More

ರಾಜಕ್ಕಳ ನಿರ್ಧಾರ…!: ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ

“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ “ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ.
ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಆತಂಕ ಮೂಡಿಸಿದ ಅನಾಥ ಚಪ್ಪಲಿ!: ಶರಣಗೌಡ ಬಿ.ಪಾಟೀಲ ಪ್ರಬಂಧ

ಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅನಾಥ ಚಪ್ಪಲಿ ನೋಡಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ. ಕೆಲಸಕ್ಕೆ ಹೋಗಲೂ ಮನಸ್ಸಾಗುತ್ತಿಲ್ಲ ಅಂತ ಪಂಪಾಪತಿ ಹೇಳಿದಾಗ ಆತನಿಗೋಸ್ಕರ ಇವತ್ತು ನಾವು ಕೆಲಸಾ ಬಿಟ್ಟರೂ ಪರವಾಗಿಲ್ಲ ನಮಗೆ ನಮ್ಮ ಗೆಳೆಯನ ಸುರಕ್ಷತೆ ಮುಖ್ಯ ಅಂತ ದೇವಿಂದ್ರನೂ ದನಿಗೂಡಿಸಿದ.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ