Advertisement

Category: ಸಂಪಿಗೆ ಸ್ಪೆಷಲ್

ಗುಲ್ಜಾರ್ ಎಂಬ ಪ್ರೇಮಕವಿ…: ಸಿಂಧುರಾವ್ ಬರಹ

70 ರ ದಶಕದ ಯಾವ ಚಂದದ ಪ್ರೇಮಗೀತೆ ಕೇಳಿದರೂ ಅದು ಗುಲ್ಜಾರ್ ಬೆರಳ ತುದಿಯಿಂದಲೇ ಬಂದಿರುವುದೇನೋ ಅನ್ನುವಷ್ಟು ತೀವ್ರವಾಗಿ ಮನಸ್ಸಿಗೆ ಕೂರುವಂತೆ ಬರೆದವರು ಗುಲ್ಜಾರ್. ಅವರ ಸಿನಿಮಾಗೀತೆಗಳಷ್ಟೇ ಅವರ ಕವಿತೆಗಳೂ ಬಹಳ ಚಂದಿವೆ. ನನಗೆ ಉರ್ದು ಓದಲು ಬರುವುದಿಲ್ಲ. ನಾನು ಅವರ ಕವಿತೆಗಳ ಇಂಗ್ಲಿಷ್ ಅನುವಾದಗಳ ಓದಿ ಕಂಗಾಲಾಗಿ ಕೂರುತಿದ್ದ ದಿನಗಳಿದ್ದವು. ಆಗಸ್ಟ್‌ ೧೮ರಂದು ಹುಟ್ಟುಹಬ್ಬವನ್ನಾಚರಿಸಿಕೊಂಡ ಕವಿ ಗುಲ್ಜಾರ್‌ ಕುರಿತು ಸಿಂಧುರಾವ್‌ ಟಿ ಬರಹ ನಿಮ್ಮ ಓದಿಗೆ

Read More

 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ ಮುಸ್ಲಿಮರ ಸಂಕಟದ ಸ್ಥಿತಿ.
“ಸ್ವಾತಂತ್ರ್ಯದ ಓಟ…” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

Read More

ಮಿಲೇ ಸುರ್ ಮೇರಾ ತುಮ್ಹಾರ: ಸುಮಾವೀಣಾ ಬರಹ

ದೂರದರ್ಶನದವರು ನಂತರದ ವರ್ಷಗಳಲ್ಲಿ ತಯಾರಿಸಿದ ಅಂತರಾಷ್ಟ್ರೀಯ ಅಹಿಂಸಾ ಮಹತ್ವವನ್ನು ಹೇಳುವ ‘ವಂದೇ ಮಾತರಂ’ ವಿಡಿಯೋ ಅದ್ಭುತ. ಮಗುವನ್ನು ಹಿಡಿದು ಬಚ್ಚು ಬಾಯಗಲಿಸುವ ಗಾಂಧಿಯ ದೃಶ್ಯದೊಂದಿಗೆ ಗಾಂಧೀಜಿಯ ಇತರೆ ಅಪೂರ್ವ ದೃಶ್ಯಾವಳಿಗಳ ಸಂಗ್ರಹವನ್ನು ನೋಡಬಹುದು. ಸಾಹಿತ್ಯವಿಲ್ಲದೆ ಬರೇ ವಾದ್ಯ ಸಂಗೀತದ ಮೂಲಕವೇ ವಂದೇ ಮಾತರಂ ಧ್ವನಿ ಅದ್ಭುತವಾಗಿದೆ. ನಮ್ಮ ರಾಷ್ಟ್ರೀಯ ದ್ವಜವನ್ನು ಹಿಡಿದು ಸಂಭ್ರಮಿಸುವ ಚಿಣ್ಣರೊಂದಿಗೆ ಸೈನಿಕರೊಂದಿಗೆ ಸರ್ವ ಧರ್ಮ ಸಮನ್ವಯತೆಯನ್ನು ಸಾರುವ ಸಂಭ್ರಮ ಇಲ್ಲಿದೆ.
ಸುಮಾವೀಣಾ ಬರಹ ನಿಮ್ಮ ಓದಿಗೆ

Read More

ಎಲ್ಹೋದೆ ವಾಸಯ್ಯ… : ಲೈಲಾ ಪರ್ವೀನ್‌ ಬರಹ

ಸ್ವಲ್ಪ ದೊಡ್ಡವಳಾಗುತ್ತಾ ಬಂದಂತೆ ವಾಸಯ್ಯನಿಗೇನೋ ಅನ್ಯಾಯವಾಗಿದೆ, ಅದಕ್ಕೇ ಅವನು‌ ಹಾಗಿರುವುದು ಎಂದು ಬಲವಾಗಿ ಅನಿಸತೊಡಗಿತ್ತು. ಅವತ್ತೆಲ್ಲ ಅಷ್ಟು ಸಾರಿ‌ ಕೇಳಿದಾಗಲೂ‌ ಅಮ್ಮ ಹೇಳಿರಲಿಲ್ಲ. ಅಮ್ಮನಿಗೂ ಗೊತ್ತಿಲ್ಲವೇನೋ ಅಂದುಕೊಂಡಿದ್ದೆ. ನನಗೂ ಮದುವೆಯಾಗಿ ಮಕ್ಕಳಾಗಿ ಶಾಲೆ ಮನೆ ಅಂತ ನಿಭಾಯಿಸುವಾಗ ಎದುರಾಗುವ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇರದೆ ಮನಸ್ಸು ಭಾವುಕವಾಗಿ ರಾತ್ರಿ ಕತ್ತಲೆಯಲ್ಲಿ ಕಣ್ಣೀರು ಸುರಿಸಿ ಹಗಲು ಹೊತ್ತು ಮೌನ ಆವರಿಸಿಕೊಂಡಾಗ ಈ ಮಹಾಮೌನಿ ವಾಸಯ್ಯ ನೆನಪಾಗದೇ ಇರುತ್ತಿರಲಿಲ್ಲ.
ಲೈಲಾ ಪರ್ವೀನ್‌ ಬರಹ ನಿಮ್ಮ ಓದಿಗೆ

Read More

ನಂಬಿ ಕೆಟ್ಟವರಿಲ್ಲವೋ… ಇಲ್ಲ…ನಂಬಿ ಕೆಟ್ಟಿದ್ದಾರೆ: ಪ್ರೊ. ಪುಟ್ಟರಾಜು ಪಿ. ಬರಹ

ಸಾವಿರಾರು ವರುಷಗಳ ಹಿಂದೆ ಈ ಕತೆಗಳನ್ನೇ ನಿಜವೆಂದು ಧೃಡವಾಗಿ ನಂಬಿರುವ ಜನರನ್ನು ಏನೆನ್ನಬೇಕು? ಆ ನಂಬಿಕೆಯನ್ನೇ ಗಾಳವಾಗಿಸಿ ಜನರನ್ನು ಮರಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಾದರೂ ಏನು? ಕಳೆದ ಒಂದು ದಶಕದಿಂದ ನಮ್ಮ ದೇಶವೂ ಈ ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದೆ ಎಂಬ ಗುಮಾನಿ ಹುಟ್ಟುತ್ತಿದೆ. ನಾನು ಈ ಲೇಖನ ಬರೆಯುತ್ತಿರುವ ದಿನಗಳಲ್ಲೇ ಭಾರತದ ಸುಪ್ರೀಂ ಕೋರ್ಟಿನಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ? ಅಥವಾ ಇಲ್ಲವೇ ಎಂಬ ವಿಚಾರಣೆ ನಡೆಯುತ್ತಿತ್ತು.
ಪ್ರೊ. ಪುಟ್ಟರಾಜು ಪಿ. ಬರಹ, ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ