ಅಪ್ಪನ ಅಂಗೈಯಲ್ಲಿ ತಿರುಗುವ ಚಕ್ರಗಳು…: ಲೈಲಾ ಪರ್ವೀನ್ ಬರಹ
ಬಾಬಾ ಎಲ್ಲಿಗೆ ಬೇಕಾದರೂ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಅದು ಕಾಡಾಗಲಿ, ಸಣ್ಣ ಹಳುವಾಗಲಿ, ಗದ್ದೆ ಅಂಚಾಗಲಿ, ಕಲ್ಲುಗೊಜ್ಜಿನ ರಸ್ತೆಯಾಗಲಿ, ಯಾರ ಮನೆಯಂಗಳವೇ ಆಗಲಿ, ಯಾವ ರೀತಿಯ ಏರು ತಗ್ಗುಗಳಿರಲಿ, ಗುಂಡಿಗಳಿರಲಿ, ಬಂಡೆಕಲ್ಲೇ ಇರಲಿ ಎಲ್ಲದರ ಮೇಲೂ ಸೈಕಲ್ ಓಡಿಸುವ ಛಾತಿಯಿತ್ತು ಅವರಿಗೆ. ಹೇಳಿ ಕೇಳಿ ಸೈಕಲ್ಲುಗಳ ನಾಡಿಮಿಡಿತ ಬಲ್ಲ ವೈದ್ಯರಲ್ಲವೇ? ಸೈಕಲ್ಲು ಎಲ್ಲಿ ಹೇಗೆ ಹೋಗಬಲ್ಲುದು ಹಾಗೂ ಎಲ್ಲಿ ಹೋಗಲಾರದೆಂಬುದನ್ನು ಅವರಿಗಿಂತ ಚೆನ್ನಾಗಿ ಬಲ್ಲವರಿಲ್ಲ. ಈ ಮಟ್ಟಿಗೆ ಸೈಕಲ್ ಹೊಡೆದ ಕಾರಣಕ್ಕೋ ಏನೋ ಬಾಬಾ ಈಗಲೂ ಸಪೂರದೇಹಿ.
ತಮ್ಮ ತಂದೆಯವರ ಸೈಕಲ್ ಪ್ರೇಮದ ಕುರಿತು ಲೈಲಾ ಪರ್ವೀನ್ ಬರಹ ನಿಮ್ಮ ಓದಿಗೆ
