Advertisement

ಅಲಕಾ ಕಟ್ಟೆಮನೆ

ಪ್ರಸ್ತುತ ಕಾಲಘಟ್ಟ ಮತ್ತು “ಬೆಂಕಿಯ ನೆರಳು”: ಎನ್.ಎಸ್. ಚಿದಂಬರರಾವ್ ಕಾದಂಬರಿಯ ಕುರಿತು ಸಿಂಧೂರಾವ್‌ ಟಿ. ಬರಹ

ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್‌ ಟಿ. ಬರಹ ನಿಮ್ಮ ಓದಿಗೆ

Read More

ತಿರುಮಲೇಶರ ಸೀಕ್ರೆಟ್ ಸಂಚಿ

ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು. ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

Read More

ಚೊಕ್ಕಾಡಿಯ ಹಕ್ಕಿ

ಅವರ ಓರಗೆಯ ಹಿರಿಯ ಲೇಖಕರಿರಲಿ, ಇತ್ತೀಚಿನ ಹೊಸ ಕವಿ ಲೇಖಕರಿರಲಿ ಚೊಕ್ಕಾಡಿಯವರು ಕಾಮನ್ ಫ್ಯಾಕ್ಟರ್ ಹಾಗೆ. ಅವರಿಗೆ ಹಳತು ಹೊನ್ನಿನ ಸಮುದ್ರವೂ ಗೊತ್ತು. ಹೊಸ ಹರಿವಿನ ಹಳ್ಳದೊರತೆಗಳೂ ಗೊತ್ತು. ವಿಮರ್ಶಿಸುವಾಗ ಸ್ಪಷ್ಟ ಮಾತುಗಳನ್ನು ಹೇಳುವ ನೇರವಂತಿಕೆ, ಹಾಗೆಂದು ಬರೆದವರ ಮನಸ್ಸು ಕುಗ್ಗಿಸದ ಹಾಗೆ ಆ ಬರಹದಲ್ಲಿನ ಒಳಿತನ್ನು ಮತ್ತೆ ಹುಡುಕಿ ಹೇಳಿ ಮುಂದಿನ ದಾರಿಗೊಂದು ಬೆಳಕು ಚೆಲ್ಲುವ ಹೃದಯವಂತಿಕೆ ಇವೆರಡೂ ಚೊಕ್ಕಾಡಿಯವರದ್ದು.
ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹದ ಕುರಿತು ಸಿಂಧುರಾವ್‌ ಟಿ. ಬರಹ

Read More

ನಕ್ಷತ್ರವಾಗಿ ಮಿನುಗುತ್ತ ಹೋದ ಮಳೆಯಂತಹ ಕವಯತ್ರಿ ಇವಳು

“ಈ ಕವಿತೆಗಳನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಖಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. “

Read More

ಎಪ್ಪತ್ತೊಂಬತ್ತರ ಚೊಕ್ಕಾಡಿಯವರ ಜೊತೆ ಮೂವರು ಕಿರಿಯರ ವಾಟ್ಸಾಪ್ ಮಾತುಕತೆ

”ಬರೆವಣಿಗೆ ಒಂದು ರೀತಿಯಲ್ಲಿ ನನಗೆ ಅಡಗುದಾಣ.ನನಗೆ ನನ್ನ ಬರೆವಣಿಗೆಯ ಬಗ್ಗೆ ಯಾವ ಭ್ರಮೆಯೂ ಇಲ್ಲ. ಹಾಗಾಗಿಯೇ ನನಗೆ ಬರೆದಷ್ಟರ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಅತೃಪ್ತಿಯೂ ಇದೆ. ಹಾಗೆಂದು ನನ್ನ ಸ್ವಾಭಿಮಾನವನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ