ಕಷ್ಟವನ್ನೇ ಬದುಕಿನ ಗುರುವೆನ್ನಬಹುದೇ?
ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.
ಎಸ್. ನಾಗಶ್ರೀ ಅಜಯ್ ಅಂಕಣ “ಲೋಕ ಏಕಾಂತ”
