ದಾದಾಪೀರ್ ಜೈಮನ್ ಹೊಸ ಕೃತಿ ‘ಕನ್ನಡಿಯೊಳಗಿನ ಪದ’ ಕವನ ಸಂಕಲನದ ಕೆಲವು ಕವಿತೆಗಳು
“ನಿನಗೆಷ್ಟು ನೀಲಿ ಬೇಕಿತ್ತು ಹುಡುಗ?
ತಿಳಿನೀಲಿ? ಆಕಾಶ ನೀಲಿ? ಸಮುದ್ರ ನೀಲಿ?
ಅಮ್ಮ ಅದ್ದಿ ತೆಗೆದ ಉಜಾಲಾ ಅಂಗಿಯ ನೀಲಿ?
ಮತ್ತೆಷ್ಟು ನೀಲಿ ಬೇಕಿತ್ತು?
ನಿನ್ನ ನರನಾಡಿಗಳಿಗೆ ಯಾಕಷ್ಟು ನೀಲಿ ಹಸಿವು?
ನಿನ್ನ ಹಸಿವೆ ನಿನ್ನ ಕೊಂದ ದಿನ
ನೀನು ಈ ಶಹರದ ನೀಲಿ ರಾತ್ರಿಗಳಲ್ಲಿ ಕರಗಿ ಹೋದ ದಿನ
ನಿನ್ನ ನೀಲಿ ದೇಹವ
ನೋಡಲು ಧೈರ್ಯವಾಗಿರಲಿಲ್ಲ ನನಗೆ..”-ದಾದಾಪೀರ್ ಜೈಮನ್ ಹೊಸ ಕೃತಿ ‘ಕನ್ನಡಿಯೊಳಗಿನ ಪದ’ ಕವನ ಸಂಕಲನದ ಕೆಲವು ಕವಿತೆಗಳು

