Advertisement

Category: ಅಂಕಣ

ಅಸಾಧ್ಯತೆಗಳ ಕಲ್ಪನೆಯಲ್ಲಿ ಕತೆಗಾರ: ಇಟಾಲೋ ಕ್ಯಾಲ್ವಿನೋ

ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ಕಾಲ್ಪನಿಕ ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು, ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ..”

Read More

ಈಕೆ ಕಲಿತಿದ್ದು ಪರ್ವತದ ನೀರವತೆಯಿಂದ

ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು..”

Read More

‘ಮೇಲು ಕೀಳಿನ ನಡತೆ ಹಾದಿ ತಪ್ಪಿದ ಜಡತೆ’

ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ಮಾಡಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿʼಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ…”

Read More

ಕಾರು ಬಂಗಲೆಯ ಲೆಕ್ಕಾಚಾರ ಮೀರಿದ ಜೀವನದೃಷ್ಟಿ

ಪಾಶ್ಚಿಮಾತ್ಯದ ಜನರು ಯಾರೇ ಸಿಗಲಿ, ಅವರು ನನ್ನ ಹವ್ಯಾಸ ಗಳ ಬಗ್ಗೆ ಕೇಳುತ್ತಾರೆ, ನನ್ನ ಆಸಕ್ತಿ ಬಗ್ಗೆ ಕೇಳುತ್ತಾರೆ, ದೇಶ-ವಿದೇಶಗಳ ಪರ್ಯಟನೆ ಬಗ್ಗೆ ಕೇಳುತ್ತಾರೆ ವಿನಃ, ನನಗೆ ಮದುವೆ ಆಗಿದೆಯ? ಮಕ್ಕಳು ಎಷ್ಟು? ನನ್ನ ಸಂಬಳ ಎಷ್ಟು? ಈ ರೀತಿಯ ವೈಯಕ್ತಿಯ ವಿಷಯಗಳ ಮೇಲೆ ನನ್ನನ್ನು ಅಳೆಯುವುದೂ ಇಲ್ಲ ಮತ್ತು ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕೇವಲ ಮತ್ತು ಕೇವಲ ಮನುಷ್ಯನನ್ನಾಗಿ ನೋಡಬೇಕೆ ಹೊರತು ಅವನ ಆಸ್ತಿ ಅಂತಸ್ತಿನಿಂದಲ್ಲ ಎನ್ನುವುದನ್ನು ಕಲಿಸಿದರು.
ಪ್ರಶಾಂತ್‌ ಬೀಚಿ ಅಂಕಣ

Read More

‘ಹೆರ್ಚಟಿಗಿ’ ಎಂಬ ನಾನು…

ಕೀಲೆಣ್ಣೆ ಅಥವಾ ಹೆರೆಣ್ಣಿ ಹಾಕುವ ಚಟಗಿ ಅಂದರೆ ಬಾಟಲಿಯು ಸಂಧಿಯೋ ಸಮಾಸವೋ ಆಗಿ ಈ ‘ಹೆರ್ಚಟಗಿ’ ಎಂಬ ಪದವೊಂದು ನಮ್ಮೂರ ಜನರ ಬಾಯಲ್ಲಿ ರೂಪುಗೊಂಡಿತ್ತು. ಊರಲ್ಲಿ ಹೀಗೆ ಎಲ್ಲರಿಗೂ ಒಂದೊಂದು ಅನ್ವರ್ಥ ನಾಮ ಅಂಟಿಕೊಂಡಿರುತ್ತದಲ್ಲ. ನನ್ನ ಅನ್ವರ್ಥನಾಮ ‘ಹೆರ್ಚಟಗಿ’. ಹಾಗೆ ಊರಲ್ಲಿ ಹಾಗೆ ಕರೆಸಿಕೊಂಡಾಗ,  ನನ್ನ ಮನದೊಳಗೆ ಮೂಡುವ ಭಾವಕ್ಕೆ ಮಾತ್ರ ನಾಮಕರಣ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒಳಗೊಳಗೇ ನಗು ಮೂಡುತ್ತದೆ. -ವೀರಣ್ಣ ಮಡಿವಾಳರ ಬರೆಯುವ ತಾರೆಗಳ ಹಿಡಿಯುವೆವು ಅಂಕಣ ಇಂದಿನ ಓದಿಗಾಗಿ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ