Advertisement

Category: ಸಂಪಿಗೆ ಸ್ಪೆಷಲ್

ಸದ್ದು… ಇಲ್ಲಿ ಯುದ್ಧ ಕತೆ ಹೇಳುತ್ತಿದೆ…

ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ.
‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್‌ ಫ್ರಂಟ್’ ಸಿನಿಮಾದ ಕುರಿತು ಜಯರಾಮಾಚಾರಿ ಬರಹ

Read More

ತೀರಿಹೋದ ತಿರುಮಲೇಶರ ಕುರಿತು

ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ.
ಕೆ.ವಿ. ತಿರುಮಲೇಶರ ಕುರಿತು ಅಬ್ದುಲ್‌ ರಶೀದ್‌ ಬರಹ ನಿಮ್ಮ ಓದಿಗೆ

Read More

ತಿರುಮಲೇಶರ ಸೀಕ್ರೆಟ್ ಸಂಚಿ

ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು. ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

Read More

ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು

‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ ಬರಹ

Read More

ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು…. ಎಚ್. ಗೋಪಾಲಕೃಷ್ಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ