Advertisement

Category: ಸಂಪಿಗೆ ಸ್ಪೆಷಲ್

ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ

ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..

Read More

ಭಾಷಾ ಕಲಿಕೆಯ ಕುತೂಹಲಕರ ಆಯಾಮಗಳು

ಭಾಷೆಯನ್ನು ಮಕ್ಕಳು ಮಾತನಾಡಲು,  ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. …

Read More

ಕ್ರಾಂತಿಗೆ ಹೊಳಪು ನೀಡಿದ ಮಾತೆ ಸಾವಿತ್ರಿ ಬಾಯಿ ಫುಲೆ

ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರು ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ 1852 ರಲ್ಲಿ ಸ್ಥಾಪಿಸಿದ್ದ ‘ಮಹಿಳಾ ಸೇವಾ ಮಂಡಳಿ’ಯು ದೇಶದ ಮೊಟ್ಟಮೊದಲ ಮಹಿಳಾ ಸೇವಾ ಸಂಸ್ಥೆ ಎನಿಸಿತು. ಟೀಕೆಗಳನ್ನು, ಆರೋಪಗಳನ್ನು ಸಮರ್ಥವಾಗಿ  ಮಾತ್ರವಲ್ಲ ಬಹಳ ತಾಳ್ಮೆಯಿಂದ ಎದುರಿಸಿದವರು.  ಸಂಕ್ರಾಮಿಕ ರೋಗ ಪ್ಲೇಗ್ನಿಂದಾಗಿ ಸಾಲು ಸಾಲು ಸಾವು-ನೋವುಗಳು ಸಂಭವಿಸಿದಾಗ ಸಾವಿತ್ರಿ ಹಾಗೂ ಅವರ ಮಗ ಯಶವಂತ…

Read More

ಸಮಯದ ಆಡಿಟಿಂಗ್ ಎಂಬೊಂದು ಲಾಭದಾಯಕ ಸಂಗತಿ

ಡಿಜಿಟಲ್ ಲೋಕವು ಬದುಕಿಗೆ ವೇಗವನ್ನು ಕೊಡುತ್ತದೆ. ಎಲ್ಲಿಗೋ ಪ್ರಯಾಣಿಸುವುದಕ್ಕಾಗಿ ಸಮಯವನ್ನು ಮೀಸಲಿಡಬೇಕಿಲ್ಲ, ಯಾವುದೋ ವಸ್ತುವನ್ನು ತರಿಸಿಕೊಳ್ಳಲು ಸಮಯವನ್ನು ಖರ್ಚು ಮಾಡಬೇಕಿಲ್ಲ. ತಿಂಡಿ ತಿನಿಸು, ಉಡುಪು, ಸಾಮಾಜಿಕ ಚರ್ಚೆಗಳು, ಕಾರ್ಯಕ್ರಮಗಳು, ಸಂಭ್ರಮಗಳೆಲ್ಲವೂ ಡಿಜಿಟಲ್ ಲೋಕವನ್ನು ಸರ ಸರನೇ ಪ್ರವೇಶಿಸಿಬಿಟ್ಟಿವೆ. ಹೀಗೆ ನಮಗೆ ಉಳಿತಾಯವಾಗುವ ಸಮಯವೆಷ್ಟು, ಅದನ್ನು ನಾವು ಹೇಗೆಲ್ಲಾ…

Read More

ಸಂದರ್ಶಕರಿಂದ ತಪ್ಪಿಸಿಕೊಂಡ ಕವಿ ತಿರುಮಲೇಶರ ಸ್ವಯಂ ಸಂದರ್ಶನ

ದೂರದ ಹೈದರಾಬಾದಿನಲ್ಲಿ ತಮ್ಮ ಜೀವಿತದ ಬಹುಭಾಗವನ್ನು ಕಳೆದಿರುವ ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶರು ತಮ್ಮ ಕುರಿತು ಬಹಳ ಕಮ್ಮಿ ಮಾತನಾಡಿದವರು. ಬರಹಗಾರನಿಗಿಂತ ಬರಹದ ಕುರಿತು ಹೆಚ್ಚು ಚರ್ಚೆಯಾಗಬೇಕೆಂದು ಹೇಳುತ್ತಲೇ ಬಂದವರು. ಬರಹಗಾರ ಆತ್ಮ ಚರಿತ್ರೆಯನ್ನೂ ಕೂಡಾ ಬರೆಯಬಾರದು ಎಂದು ಪ್ರತಿಪಾದಿಸುವವರು. ಆದರೆ ಇತ್ತೀಚೆಗೆ ಕೊಂಚ ಮನಸ್ಸು ಬದಲಿಸಿ ತಮ್ಮದೊಂದು ಕಲ್ಪಿತ ಸಂದರ್ಶನವನ್ನು ತಾವೇ…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ