Advertisement

Category: ಸಂಪಿಗೆ ಸ್ಪೆಷಲ್

ಯೇಸುವಿನ ಪ್ರೀತಿ ಔದಾರ್ಯಕ್ಕೆ ಮಿಡಿದ ಕಾವ್ಯಲೋಕ: ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ

ವಾಕ್ಯವೇ ದೇವರು ಎನ್ನುವ ಕ್ರಿಸ್ತನ ಅನುಯಾಯಿಗಳು ವಾಕ್ಯದ ಮುಖಾಂತರ ನಡೆಯುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಅದು ಅವರ ಅರಿವಿಗೆ ಬರುವಷ್ಟರಲ್ಲಿ ಪಾಪದ ಕೊಡ ತುಂಬುತ್ತಲಿರುತ್ತದೆ. ಅಂದು ಏಸುವನ್ನು ದೈಹಿಕವಾಗಿ ಶಿಲುಬೆಗೆ ಏರಿಸಿದರೆ, ಇಂದಿನ ಅನುಯಾಯಿಗಳೆಂಬ ಅಂಧ ಭಕ್ತರ ದಂಡು ಮಾನಸಿಕವಾಗಿ ಯೇಸುವನ್ನು ಶಿಲುಬೆಗೇರಿಸಿದ್ದಾರೆ ಎಂಬ ಭಾವ ಕವಿತೆಯದ್ದಾಗಿದೆ. ವಚನಕಾರರು ಅಂತರಂಗ ಶುದ್ದಿ ಬಹಿರಂಗ ಶುದ್ದಿಯನ್ನು ಇಲ್ಲಿ ವಾಕ್ಯದ ಮೂಲಕ ನೆನಪಿಸಿಕೊಳ್ಳಬಹುದು.
ಕನ್ನಡ ಸಾಹಿತ್ಯದಲ್ಲಿ ಏಸು ಕ್ರಿಸ್ತನ ಬದುಕಿನ ಕುರಿತು ರಚಿತವಾದ ಕವಿತೆಗಳ ಕುರಿತು ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ

Read More

ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್‌ ಜಯಣ್ಣ ಬರಹ

Read More

ಹೊಟ್ಟೆಬಾಕ ಗಂಡುಮೀನು…: ಮಯೂರ ಬಿ ಮಸೂತಿ ಬರಹ

ಮೀನು ಎಂದಿನಂತೆ ನೂರು ಮೀಟರ್ ರೇಸಿನಲ್ಲಿ ಬಿದ್ದಿತ್ತು. ಹೆಂಡತಿಗೆ ಕರೆದು ತೋರಿಸಿದೆ. ‘ಎಲ್ಲಿ ಸಾಯಲಿಕ್ಕೆ ಬಂದಿದೆಯೆನೋ’ ಎಂದು ಉತ್ತರಿಸಿ ಮನೆಗೆಲಸದಲ್ಲಿ ತೊಡಗಿಸಿಕೊಂಡಳು. ನಮಗೆ ಮೀನನ್ನು ಸಂಭಾಳಿಸುವುದಕ್ಕಿಂತ ಮಕ್ಕಳನ್ನು ನಿಯಂತ್ರಿಸುವುದೇ ಕಷ್ಟಕರವಾಗಿತ್ತು. ಎಲ್ಲಿ ಬೌಲನ್ನು ಬಿಳಿಸುತ್ತಾರೋ…. ಎಂಬ ಭಯ..! ಮಗಳು ಕಿಡ್ಡಿಯಂತೂ “ಹತ್ರ ಹೋಗಬೇಡ ಬಾಂಬಿ ಮೀನು ಕಚ್ಚುತ್ತೆ” ಎಂದು ತನ್ನ ತೊದಲು ನುಡಿಯಲ್ಲಿ ಅಣ್ಣನಿಗೆ ಉಪದೇಶ ನೀಡಿ ತಾನೆ ಬೌಲ್‌ನ ಮುಂದೆ ಮೀನುಗಳು ಭಯ ಬೀಳುವಂತೆ ಹಲ್ಲು ಕಿರಿದುಕೊಂಡು ನಿಲ್ಲುತ್ತಿದ್ದಳು.
ಮಯೂರ ಬಿ ಮಸೂತಿ ಬರಹ ನಿಮ್ಮ ಓದಿಗೆ

Read More

ಕೊರೋನಾ ಕೊರೋನಾ: ರಂಜಾನ್ ದರ್ಗಾ ಸರಣಿ

ರಾತ್ರಿ ಮಾತ್ರ ಮಲಗುವುದು ಸಮಸ್ಯೆಯಾಗುತ್ತಿತ್ತು. ವೈದ್ಯಕೀಯ ಯಂತ್ರಗಳು ಹಗಲು ಹೊತ್ತು ಕೊಂಯ ಕೊಂಯ ಮಾಡುವುದನ್ನು ಸಹಿಸಿದರೂ ರಾತ್ರಿಯ ನೀರವ ವಾತಾವರಣದಲ್ಲಿ ಕಿರಿಕಿರಿ ಎನಿಸುತ್ತಿತ್ತು. ಅಂಥ ಪ್ರಸಂಗಗಳಲ್ಲಿ ರೋಗಿಗಳು ಅಸಹಾಯಕರಾಗಿ ಸಹನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಆಗ ನಾನೊಂದು ಉಪಾಯ ಹುಡುಕಿದೆ. ಫ್ಯಾನಿನ ತಂಗಾಳಿಯ ಕಡೆಗೆ ಮಾತ್ರ ಲಕ್ಷ್ಯಕೊಟ್ಟು ಬೇರೆ ಏನನ್ನೂ ಯೋಚಿಸದೆ ಅದನ್ನೇ ಆನಂದಿಸುತ್ತಿದ್ದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 99ನೇ ಕಂತು ನಿಮ್ಮ ಓದಿಗೆ

Read More

ಏಕವ್ಯಕ್ತಿ ರಂಗಪ್ರಯೋಗದ ಸವಾಲು-ಸಾಧ್ಯತೆಗಳು: ರಾಜೇಂದ್ರಕುಮಾರ್ ಮುದ್ನಾಳ್‌ ಬರಹ

ಸಾಮೂಹಿಕವಾಗಿ ಇಂದು ನಾಟಕಗಳನ್ನು ಆಡಲು ಬಹಳ ಜನರು ಸೇರುತ್ತಿಲ್ಲ. ತಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಆ ಸಂದರ್ಭದ ರಂಗಭೂಮಿಯ ವೈಭವವೇ ಬೇರೆ. ಸಾಂಪ್ರದಾಯಿಕ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹರ್ಷದಾಯಕ ಬೆಳವಣಿಗೆ. ಅದು ಅವರಿಗೆ ಅನಿವಾರ್ಯವೂ ಕೂಡ ಆಗಿದೆ. ಜನರ ಅಭಿರುಚಿ, ಅಭಿವೃದ್ಧಿಗೆ ತಕ್ಕಂತೆ ನಾಟಕಗಳು ತಮ್ಮ ಶೈಲಿ ಸಂಭಾಷಣೆ ಎಲ್ಲವನ್ನು ಮಾರ್ಪಡಿಸಿಕೊಂಡಿವೆ. ಬಹಳಷ್ಟು ಕಲಾವಿದರು ಸಾಮಾಜಿಕ ನಾಟಕ ಕಂಪನಿಗಳಿಂದ ಬದುಕುವವರಿದ್ದಾರೆ.
ಏಕವ್ಯಕ್ತಿ ರಂಗ ಪ್ರಯೋಗದ ಸವಾಲು ಮತ್ತು ಸಾಧ್ಯತೆಗಳ ಕುರಿತು ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ