ಎ.ಎನ್. ಪ್ರಸನ್ನ ಬರೆದ ನಾಲ್ಕು ಅತಿ ಸಣ್ಣ ಕತೆಗಳು
ಇದು ಅವರ ಊಹೆಯನ್ನು ಮೀರಿ ನೂರಾರು ಬಗೆಯಲ್ಲಿ ಹಬ್ಬಿತು. ನಾಲಗೆ ಒಳಗೊಂದು ಮೂಳೆ ಇದೆ. ಅದಕ್ಕೆ ಘಾತವಾದರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಇನ್ನಿಲ್ಲದಷ್ಟು ಬೆಳೆಯಿತು. ಜನರು ಪರಸ್ಪರ ಮಾತನಾಡುವಾಗ ಏನು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೇಗೆ ಮಾತನಾಡುತ್ತಿದ್ದಾರೆ, ತಾವು ಮಾತನಾಡುವುದೂ ಅದೇ ಬಗೆಯಲ್ಲಿದೆಯೇ ಅಥವ ಭಿನ್ನವಾಗಿದೆಯೇ… ಹೀಗೆ ಹಲವು ಆಲೋಚನೆಗಳಿಗೆ ಆಸ್ಪದ ಉಂಟಾಯಿತು. ಒಮ್ಮೆ ಅನುಮಾನ ಉಂಟಾದರೆ ಸುಮ್ಮನೆ ಒಂದಿಲ್ಲೊಂದು ನೆಪದ ಕಾರಣ ತೆಗೆದುಕೊಳ್ಳಬೇಕಾದ ಕ್ರಮವನ್ನು ಮುಂದೆ ಹಾಕಲು ಯಾರಿಗೂ ಇಷ್ಟವಾಗುವಂತಿರಲಿಲ್ಲ.
ಎ.ಎನ್. ಪ್ರಸನ್ನ ಬರೆದ ಅತಿ ಸಣ್ಣ ಕತೆಗಳ ಸಂಕಲನ “ಅದೊಂದು ದಿನ” ಕೃತಿಯ ನಾಲ್ಕು ಸಣ್ಣ ಕತೆಗಳು ನಿಮ್ಮ ಓದಿಗೆ