Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

ಕಾವ್ಯಾ ಕಡಮೆ ಬರೆದ ಈ ಭಾನುವಾರದ ಕತೆ

ಮಾತನಾಡದೇ ಹೊರಹೋದವಳ ಬೆನ್ನು ದಿಟ್ಟಿಸುತ್ತ ತಟಸ್ಥಳಾಗಿ ಆಫೀಸಿನ ಸೋಫಾದ ಮೇಲೆಯೇ ಕುಸಿದುಬಿಟ್ಟೆ. ನನಗರಿವಿಲ್ಲದೇ ಎದೆಯ ಮುಂದೆ ಕೈಕಟ್ಟಿಕೊಂಡು ಕುಳಿತೆ. ಪ್ರಕಟವಾಗಿರುವ ಸಂದರ್ಶನಗಳು, ನ್ಯೂಸ್ ಪ್ರತಿಕ್ರಿಯೆಗಳನ್ನೆಲ್ಲ ಇನ್ನೊಮ್ಮೆ ತೆಗೆದು ನೋಡಿದೆ. ಎಲ್ಲಿಯೂ ಈ ಮ್ಯಾರಥಾನಿನಲ್ಲಿ ಟಾಪ್‌ಲೆಸ್ ಓಡುವುದಿಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಿರಲಿಲ್ಲ. ಎಲ್ಲಿಯೂ ಆ ಮಾತೇ ಬಂದಿರಲಿಲ್ಲ. ಸಾವಿರದ ಸಂಖ್ಯೆಯಲ್ಲಿ ಹೆಂಗಸರು ತೆರೆದೆದೆಯಲ್ಲಿ ಓಡುವುದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರೂ ನನ್ನನ್ನು…

Read More

ಸುಜಯ್‌ ಪಿ. ಬರೆದ ಈ ಭಾನುವಾರದ ಕತೆ

ಹೂವು ಎಂದರೆ ಗೆಲುವು, ಕಾಯಿ ಎಂದರೆ ಅಂದಿನ ಕೋಳಿ ಕಾದಾಟದ ಪಂದ್ಯದಲ್ಲಿ ಸೋಲು ಎಂಬುದೊಂದು ಪುರಾತನ ನಂಬಿಕೆ. ಇದು ಅಂಗಾರ ಒಬ್ಬನ ನಂಬಿಕೆಯಲ್ಲ, ಕೋಳಿಅಂಕಕ್ಕೆ ಹೋಗುವ ಎಲ್ಲರೂ ಮನೆಯ ಪುಟ್ಟ ಮಕ್ಕಳ ಬಳಿ ಈ ಪ್ರಶ್ನೆ ಕೇಳಿ‌ ಅಂಕಕ್ಕೆ ಹೊರಡುವುದು ವಾಡಿಕೆ. ಇದರ ಅರ್ಥ ತಿಳಿದ ಮೇಲೆ ಮುತ್ತ, ‘ಕಾಯಿ’ ಎಂದು ಉತ್ತರಿಸಿದ್ದೇ ಇಲ್ಲ. ಈ ದಿನ ಅಂಗಾರ ಬಲ್ನಾಡಿನ ಜಾತ್ರೆಯ ಕೊನೆಯ ದಿನದಂದು ನಡೆಯುವ ಕೋಳಿಅಂಕಕ್ಕೆ ಹೊರಟು ನಿಂತಿದ್ದ.
ಸುಜಯ್ ಪಿ. ಬರೆದ ಈ ಭಾನುವಾರದ ಕತೆ ‘ಕುಕ್ಕುಟ ಕದನ ಕಥನ’ ನಿಮ್ಮ ಓದಿಗಾಗಿ…

Read More

ಸ್ತ್ರೀವೇಷ: ನಾಗಶ್ರೀ ಶ್ರೀರಕ್ಷ ಕಥೆ

“ಅಪ್ಪಣ್ಣ, ಸಣ್ಣಗಿನ ನಿದ್ದೆ ಮುಗಿಸಿ ಸ್ನಾನ ಮಾಡಿ ಚಿನ್ನದ ಚೈನು ಹಾಕಿಕೊಂಡು ತನಗೆ ಒಳಗೆ ಆಗುತ್ತಿರುವ ಪುಳಕವನ್ನೋ ಪುಕ್ಕಲನ್ನೋ ತೋರಿಸದೆ ನೀಟಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದ. ಭಾಗೀರಥಮ್ಮ ಮುಖ ತೊಳೆದು ಪೌಡರ್ ಹಚ್ಚಿಕೊಳ್ಳುತ್ತಿದ್ದರು. ಸೆಖೆಗೆ ಬೆವರಿದ ಮುಖದಲ್ಲಿ ಅಲ್ಲಲ್ಲಿ ಬೆಳ್ಳಗಿನ ತೇಪೆ ಅಂಟಿಕೊಳ್ಳುತ್ತಿತ್ತು. ಹಣೆಯ ಲಾಲ್ಗಂಧವನ್ನು ಇನ್ನೂ ಉರುಟು ಮಾಡುತ್ತಾ ಮದುಮಗನಂತೆ ಕಾಣುತ್ತಿದ್ದ ಮಗನನ್ನು ನೋಡಿ “ದೇವರಿಗೊಂದು ನಮಸ್ಕಾರ ಮಾಡಿ ಹೊರಡು ಅಪ್ಪು”ಎಂದರು”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ

ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ….

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ